IPL 2022 | 17ನೇ ಓವರ್ 2 ರನ್ ಹ್ಯಾಟ್ರಿಕ್ ಸಹಿತ 4 ವಿಕೆಟ್.. ವ್ಹಾ ಚಹಲ್..!

1 min read
yuzvendra-chahal-equals-imran-tahir-record saaksha tv

yuzvendra-chahal-equals-imran-tahir-record saaksha tv

IPL 2022 | 17ನೇ ಓವರ್ 2 ರನ್ ಹ್ಯಾಟ್ರಿಕ್ ಸಹಿತ 4 ವಿಕೆಟ್.. ವ್ಹಾ ಚಹಲ್..!

ಸ್ಪಿನ್‌ ಚಾಣಾಕ್ಷʼ ಚಹಲ್‌ ಹ್ಯಾಟ್ರಿಕ್‌.. ಬಟ್ಲರ್‌ ಸೆಂಚುರಿ.. ರಾಜಸ್ಥಾನ್‌ಗೆ 7 ರನ್‌ಗಳ ರೋಚಕ ಜಯ

ಹೌದು…!! ಬ್ರೆಬೋರ್ನ್ ಮೈದಾನದಲ್ಲಿ ನಡೆದ ಪಂದ್ಯ ಕಂಪ್ಲೀಟ್ ರಾಯಲ್ಸ್ ಮಯವಾಗಿತ್ತು. ಬ್ಯಾಟಿಂಗ್ ನಲ್ಲಿ ಜೋಸ್ ಬಟ್ಲರ್ ಅಬ್ಬರಿಸಿದ್ರೆ, ಬೌಲಿಂಗ್ ನಲ್ಲಿ ಯುಜುವೇಂದ್ರ ಚಹಲ್ ಕಮಾಲ್ ಮಾಡಿದರು.

ಪರಿಣಾಪ ಸಂಜು ಸ್ಯಾಮ್ ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ 7 ರನ್ ಗಳ ಅಂತರ ರಣ ರೋಚಕ ಜಯ ಸಾಧಿಸಿತ್ತು.

ಆ ಮೂಲಕ 15ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ,ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

ಬ್ರೆಬೋರ್ನ್ ಅಂಗಳದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಜೋಸ್ ಬಟ್ಲರ್ ಆಸರೆಯಾದ್ರು. 

ಬಟ್ಲರ್ ಟೂರ್ನಿಯಲ್ಲಿ ಎರಡನೇ ಶತಕ ಸಿಡಿಸಿದ ಪರಿಣಾಮ, ರಾಜಸ್ಥಾನ್ರಾಯಲ್ಸ್‌ 20 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತು.

 Yuzvendra Chahal rr vs kkr match report  in kannada saaksha tv

 15ನೇ ಆವೃತ್ತಿಯಲ್ಲಿ ಅದ್ಭುತ ಫಾರ್ಮ್ನಲ್ಲಿರುವ ಜಾಸ್ಬಟ್ಲರ್‌ 61 ಎಸೆತಗಳಲ್ಲಿ 103 ರನ್‌  ಗಳಿಸಿದರು.

ಉಳಿದಂತೆ ದೇವದತ್ಪಡಿಕ್ಕಲ್‌ 24ರನ್, ನಾಯಕ ಸಂಜೂ ಸ್ಯಾಮ್ಸನ್‌ 38 ರನ್ ಹಾಗೂ ಶಿಮ್ರಾನ್ಹೆಟ್ಮಾಯೆರ್‌ 26 ರನ್ ಬಿರುಸಿನ ಬ್ಯಾಟಿಂಗ್ಪ್ರದರ್ಶಿಸಿದರು.

ರಿಯಾನ್ಪರಾಗ್‌ 5 ರನ್ ಹಾಗೂ ಕರುಣ್ನಾಯರ್ಮೂರು ರನ್ ಗಳಿಸಿದರು.

ಟಾರ್ಗೆಟ್ಬೆನ್ನತ್ತಿದ ಕೊಲ್ಕತ್ತಾ ನೈಟ್ರೈಡರ್ಸ್‌ 19.4ನೇ ಓವರ್ನಲ್ಲಿ 210 ರನ್ಗಳಿಗೆ ತನ್ನೆಲ್ಲಾ ವಿಕೆಟ್ಕಳೆದುಕೊಂಡು 7 ರನ್ಗಳ ಸೋಲೊಪ್ಪಿಕೊಂಡಿತು.

ಆರಂಭದಲ್ಲಿ ಸುನೀಲ್ ನರೈನ್ ಶೂನ್ಯಕ್ಕೆ ಔಟ್ ಆದ್ರು, ಆದರೆ ನಂತರ ಜೊತೆಯಾದ ಆರನ್ಫಿಂಚ್‌, ಶ್ರೇಯಸ್ ಅಯ್ಯರ್ ಉತ್ತಮ ಜೊತೆಯಾಟವಾಡಿದರು.

ಪಿಂಚ್ 28 ಎಸೆತಗಳಲ್ಲಿ  58 ರನ್ಗಳಿಸಿದ್ರೆ, 51 ಎಸೆತದಲ್ಲಿ ಶ್ರೇಯಸ್ ಅಯ್ಯರ್ 85 ರನ್ ಗಳಿಸಿದರು.

ಆದರೆ ನಂತರ ಬಂದ ನಿತೀಶ್ರಾಣ 18 ರನ್ ಗಳಿಸಿದ್ರು. ಕೊನೆಯಲ್ಲಿ ಉಮೇಶ್ ಅಬ್ಬರಿಸಿದ್ರೂ ಪಂದ್ಯ ಗೆಲ್ಲಿಸಿಕೊಡಲಾಗಲಿಲ್ಲ.   

ಅಂದಹಾಗೆ ಕಠಿಣ ಸವಾಲು ಬೆನ್ನತ್ತಿದ ಕೆಕೆಆರ್‌, 16ನೇ ಓವರ್ವರೆಗೂ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು.

ಆದರೆ 17ನೇ ಓವರ್ಬೌಲಿಂಗ್ದಾಳಿಗಿಳಿದ ಯುಜು಼ವೇಂದ್ರ ಚಹಲ್ಪಂದ್ಯದ ದಿಕ್ಕನ್ನೇ ಬದಲಿಸಿದರು.

17ನೇ ಓವರ್ನಲ್ಲಿ ಕೇವಲ 2 ರನ್ನೀಡಿ ಹ್ಯಾಟ್ರಿಕ್ವಿಕೆಟ್ಸಹಿತ ನಾಲ್ಕು ವಿಕೆಟ್ಪಡೆದು ತಂಡದ ಗೆಲುವಿನಲ್ಲಿ ಮಿಂಚಿದರು.   Yuzvendra Chahal rr vs kkr match report in kannada

 

 

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd