ಮಹಾರಾಷ್ಟ್ರದಲ್ಲಿ ಝಿಕಾ ವೈರಸ್ ಆತಂಕ
ರಾಜ್ಯದಲ್ಲಿ 2 ನೇ ಝಿಕಾ ಸೋಂಕು ಪ್ರಕರಣ ಪತ್ತೆ
7 ವರ್ಷದ ಬಾಲಕಿಗೆ ಝಿಕಾ ಸೋಂಕು ಧೃಢ
ಪಾಲ್ಘರ್‌ನ ದಹನು ಜಿಲ್ಲಾಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ
ಸೌಮ್ಯ ಜ್ವರ, ರ್ಯಾಶ್ ಸ್ , ತಲೆನೋವು ರೋಗಲಕ್ಷಣಗಳು
ಮುಂಬೈ : ಒಂದೆಡೆ ದೇಶದಲ್ಲಿ ಕೋವಿಡ್ ದೈನಂದಿನ ಕೇಸ್ ಗಳ ಸಂಖ್ಯೆ ಹೆಚ್ಚಾಗ್ತಿದೆ… ಈ ನಡುವೆ ಮತ್ತೊಮ್ಮೆ ಝಿಕಾ ಆತಂಕ ಎದುರಾಗುವ ಲಕ್ಷಣ ಕಾಣ್ತಿದೆ..
ಹೌದು..! ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ 7 ವರ್ಷದ ಬಾಲಕಿಯಲ್ಲಿ ಝಿಕಾ ಸೋಂಕು ಕಾಣಿಸಿಕೊಂಡಿದೆ.. ಇದು 2 ನೇ ಝಿಕಾ ವೈರಸ್ ಪ್ರಕರಣವಾಗಿದೆ..
ಪಾಲ್ಘರ್ ಜಿಲ್ಲೆಯ ಬುಡಕಟ್ಟು ವಸತಿ ಶಾಲೆಯೊಂದರಲ್ಲಿ ಬಾಲಕನಲ್ಲಿ ಜ್ವರ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.. ತನಿಖೆ ನಡೆಸುತ್ತಿರುವ ರಾಜ್ಯ ಆರೋಗ್ಯ ಅಧಿಕಾರಿಗಳು, ಏಳು ವರ್ಷದ ವಿದ್ಯಾರ್ಥಿಗೆ ಝಿಕಾ ವೈರಸ್ ಸೋಂಕು ತಗುಲಿರುವುದನ್ನು ದೃಢಪಡಿಸಿದ್ದಾರೆ.
ಕಳೆದ ವರ್ಷ ಜುಲೈ 31 ರಂದು ಪುಣೆಯ ಗ್ರಾಮೀಣ ಭಾಗಗಳಲ್ಲಿ ಮೊದಲ ಸೋಂಕು ಪ್ರಕರಣ ಪತ್ತೆಯಾದ ನಂತರ ಈಗ ಮಹಾರಾಷ್ಟ್ರದ ಎರಡನೇ ಝಿಕಾ ಪ್ರಕರಣ ಇದಾಗಿದೆ.
” ಬಾಲಕಿಯ ಸ್ಥಿತಿ ಸ್ಥಿರವಾಗಿದೆ. ತಲೆನೋವು ಮತ್ತು ಜ್ವರದಿಂದ ಬಳಲುತ್ತಿರುವ ಬಾಲಕಿಗೆ ದಹನುದಲ್ಲಿರುವ ರಾಜ್ಯದ ಉಪ-ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ ” ಎಂದು ಪಾಲ್ಘರ್ ಜಿಲ್ಲೆಯ ಸಿವಿಲ್ ಸರ್ಜನ್ ಡಾ ಸಂಜಯ್ ಬೋಡಾಡೆ ಹೇಳಿದ್ದಾರೆ.
ತಲೆನೋವು, ಸೌಮ್ಯ ಜ್ವರ ರ್ಯಾಶ್ ಸ್ , ಕೆಂಪು ಕಣ್ಣು ಅಥವಾ ಕಾಂಜಂಕ್ಟಿವಿಟಿಸ್ , ಸ್ನಾಯು ಮತ್ತು ಕೀಲು ನೋವು , ಆಯಾಸ , ಹೊಟ್ಟೆ ನೋವು ಮುಂತಾದ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.. 2-7 ದಿನಗಳವರೆಗೆ ಈ ರೋಗಲಕ್ಷಣಗಳು ಇರುತ್ತವೆ.. ಕೆಲವೊಮ್ಮೆ ಯಾವುದೇ ರೋಗಲಕ್ಷಣಗಳು ಕಾಣಿಸಿಕೊಳ್ಳದೇ ಇರುವ ಸಾಧ್ಯತೆಯೂ ಇದೆ..