ಆಹಾರ ಪದಾರ್ಥಗಳನ್ನು ಹೋಮ್ ಡೆಲಿವರಿ ಮಾಡುತ್ತಿದ್ದ ಝೊಮ್ಯಾಟೊ ಕಂಪನಿ ಲಾಕ್ಡೌನ್ ಹಿನ್ನೆಲೆಯಲ್ಲಿ ದಿನಸಿ ಪದಾರ್ಥಗಳನ್ನು ಡೆಲಿವರಿ ಮಾಡುತ್ತಿದೆ. ಆದರೆ ಇದೀಗ ಮದ್ಯ ಪ್ರಿಯರಿಗಾಗಿ ಮದ್ಯವನ್ನೂ ಹೋಮ್ ಡೆಲಿವರಿ ಮಾಡಲು ನಿರ್ಧರಿಸಿದೆ.
ಸುಮಾರು 40 ದಿನಗಳ ಲಾಕ್ ಡೌನ್ ಬಳಿಕ ಇದೀಗ ಸರಕಾರ ಲಾಕ್ ಡೌನ್ ಸಡಿಲಿಕೆ ಮಾಡಿದ್ದು, ಮದ್ಯ ಪ್ರಿಯರು ಬಾರ್ ಗಳ ಮುಂದೆ ಕ್ಯೂನಲ್ಲಿ ನಿಂತು ಮದ್ಯ ಖರೀದಿಸುತ್ತಿದ್ದಾರೆ. ಈ ವೇಳೆ ಹೆಚ್ಚಿನ ಕಡೆ ನೂಕು ನುಗ್ಗಲು ಉಂಟಾಗಿದ್ದು, ಸಾಮಾಜಿಕ ಅಂತರ ಗಾಳಿಗೆ ತೂರಲಾಗಿದೆ. ಹೀಗಾಗಿ ಮದ್ಯಪ್ರಿಯರಿಗಾಗಿ ಮದ್ಯವನ್ನೂ ಹೋಮ್ ಡೆಲಿವರಿ ಮಾಡಲು ಝೊಮ್ಯಾಟೊ ಮುಂದಾಗಿದ್ದು, ಇದಕ್ಕೆ ಸರ್ಕಾರದ ಒಪ್ಪಿಗೆ ಸಿಗಬೇಕಾಗಿದೆ.
ದೇಶದ ಬಹುತೇಕ ನಗರಗಳಲ್ಲಿ ನೂರಾರು ಜನ ಉದ್ದದ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸುತ್ತಿದ್ದಾರೆ. ಕೊರೊನಾ ಹಾಟ್ಸ್ಪಾಟ್ ಆಗಿರುವ ಮುಂಬೈನಲ್ಲಿ ಬಾರ್ ಗಳನ್ನು ತೆರೆದ ಎರಡೇ ದಿನದಲ್ಲಿ ಪುನಃ ಮುಚ್ಚಲಾಗಿದ್ದು, ದೆಹಲಿಯಲ್ಲಿ ಕೊರೊನಾ ವಿಶೇಷ ಶುಲ್ಕವೆಂದು ಪ್ರತಿ ಬಾಟಲಿನ ಮೇಲೆ ಶೇ.70ರಷ್ಟು ದರವನ್ನು ಹೆಚ್ಚಿಸಲಾಗಿದೆ.
ಭಾರತದಲ್ಲಿ ಮದ್ಯವನ್ನು ಹೋಮ್ ಡೆಲಿವರಿ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ಕೈಗಾರಿಕಾ ವಿಭಾಗ ಹಾಗೂ ಅಂತರಾಷ್ಟ್ರೀಯ ಸ್ಪಿರಿಟ್ಸ್ ಆ್ಯಂಡ್ ವೈನ್ಸ್ ಅಸೋಷಿಯೇಶನ್ ಆಫ್ ಇಂಡಿಯಾ(ಐಎಸ್ಡಬ್ಲ್ಯೂಎಐ) ಈ ಕುರಿತು ಲಾಬಿ ನಡೆಸುತ್ತಿದ್ದು, ಕೊರೊನಾ ಸೋಂಕು ಕಡಿಮೆ ಹರಡಿರುವ ಪ್ರದೇಶಗಳಲ್ಲಿ ಝೊಮ್ಯಾಟೊ ಮದ್ಯ ಡೆಲಿವರಿ ಮಾಡಲು ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಝೊಮ್ಯಾಟೊ ಸಿಇಒ ಮೋಹಿತ್ ಗುಪ್ತಾ ಅವರು ಐ.ಎಸ್.ಡ.ಬ್ಲ್ಯೂ.ಎ.ಐ ಗೆ ಪತ್ರ ಬರೆದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಲವರ್ ಗೆ ಪ್ರತಿ ದಿನ ನೂರಕ್ಕೂ ಅಧಿಕ ಬಾರಿ ಕರೆ ಮಾಡುತ್ತಿದ್ದ ಯುವತಿ
ಪ್ರೀತಿಯ ಬಲೆಗೆ ಬಿದ್ದವರು ಕನಸಿನ ಲೋಕದಲ್ಲಿಯೇ ವಿಹರಿಸುವುದು ಹೆಚ್ಚು. ಪ್ರೀತಿಯ ಗೆಳೆಯ ಅಥವಾ ಗೆಳತಿ ಹತ್ತಿರದಲ್ಲಿಯೇ ಇರಬೇಕು ಎಂದು ಎಲ್ಲರೂ ಭಾವಿಸಿರುತ್ತಾರೆ. ಇಲ್ಲೊಬ್ಬಳು ಪ್ರೇಮಿ, ಪ್ರತಿ ದಿನ...