ಕಲಬುರಗಿ : ಭಾರಿ ಪ್ರಮಾಣದ ಮಳೆ Rain ಹಿನ್ನೆಲೆ ಪ್ರವಾಹ ವೀಕ್ಷಸಲೆಂದು ಕಲಬುರಗಿ ಜಿಲ್ಗೆಗೆ ಭೇಟಿ ನೀಡಿದ್ದ ಕಂದಾಯ ಸಚಿವ ಆರ್.ಅಶೋಕ್ (R Ashok), ಕೇವಲ 10 ನಿಮಿಷದಲ್ಲಿ ಪ್ರವಾಹ ವೀಕ್ಷಣೆ ಮಾಡಿ ವಾಪಸ್ ಆಗಿದ್ದಾರೆ.
ನಿರಂತರ ಮಳೆಗೆ ಕಲಬುರಗಿ ಜಿಲ್ಲೆ ನಲುಗಿ ಹೋಗಿದ್ದು, ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯಗಳು ನಾಶವಾಗಿವೆ. ಮಳೆಯಿಂದಾಗಿ ಅದೆಷ್ಟೋ ಮಂದಿ ಸೂರು ಕಳೆದುಕೊಂಡು ಬೀದಿಗೆ ಬಂದಿದ್ದಾರೆ.
ಈ ಹಿನ್ನೆಲೆ ಇಂದು ಆರ್ ಆಶೋಕ್ (R Ashok) ಮತ್ತು ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ಹಾಗೂ ಸುರಪುರ ಶಾಸಕ ರಾಜೂಗೌಡ ಅವರು ಮಹಾಮಳೆ ಜಲಾವೃತವಾಗಿರುವ ಕಲಬುರಗಿ ತಾಲೂಕಿನ ಸೈಯದ್ ಚಿಂಚೋಳಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ : ಶಾಪವಾಯ್ತು ಮುಂಗಾರು.. ಮಳೆ ಹಾನಿ 15 ಸಾವಿರ ಕೋಟಿ ರೂ. : ಮುಂದಿನ ವಾರ ಮತ್ತೊಂದು ರೌದ್ರ ಮಳೆ
ಇದಾದ ನಂತರ ಗ್ರಾಮದ ಗಂಜಿ ಕೇಂದ್ರಕ್ಕೂ ಭೇಟಿ ಕೊಟ್ಟಿದ್ದರು. ಈ ವೇಳೆ ನಮ್ಮನ್ನು ಬೇರೆ ಕಡೆ ಸ್ಥಳಾಂತರ ಮಾಡಿ ಎಂದು ಕೈ ಮುಗಿದು ಗ್ರಾಮದ ಮಹಿಳೆಯರು ಬೇಡಿಕೊಂಡರು.
ಆದರೆ ಇಂತಹ ಸಂದರ್ಭದಲ್ಲಿ ಅವರ ಜೊತೆಯಲ್ಲಿ ಇದ್ದು ಧೈರ್ಯ ಹೇಳಬೇಕಾದ ಜನಪ್ರತಿನಿಧಿಗಳು ಕಾಟಾಚರಕ್ಕೆ ಕೇವಲ 10 ನಿಮಿಷ ಸ್ಥಳದಲ್ಲಿದ್ದು, ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಮತ್ತಷ್ಟು ಹದಗೆಟ್ಟ ಕರ್ನಾಟಕದ ಪ್ರವಾಹ ಪರಿಸ್ಥಿತಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









