ಬಾಲಿವುಡ್ ನ ಖ್ಯಾತ ನಟ ಫರಾಜ್ ಖಾನ್ ವಿಧಿವಶ
ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಾಲಿವುಡ್ ನ ಖ್ಯಾತ ನಟ ಫರಾಜ್ ಖಾನ್ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಗಬ್ಬರ್ ಸಿಂಗ್ – ಪೈಲ್ವಾನ್ ಮಧ್ಯೆ ಅಹಂ ಯುದ್ಧ..!
ಕಳೆದ ಒಂದು ತಿಂಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಫರಾಜ್ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

50 ವರ್ಷದ ಫರಾಜ್ ಖಾನ್ ಕಳೆದ ಒಂದು ವರ್ಷದಿಂದ ವಿಪರೀತ ಕೆಮ್ಮು ತೀವ್ರ ಎದೆನೋವಿನಿಂದ ಬಳಲುತ್ತಿದ್ದರು.
ಕಳೆದ ಒಂದು ತಿಂಗಳ ಹಿಂದೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬಳಿಕ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದರೆ ಇಂದು ಇಹಲೋಕ ತ್ಯಜಿಸಿದ್ದಾರೆ.
ರಾಜಕೀಯ ತಿರುವು ಪಡೆದ ಪೂನಂ ಪಾಂಡೆ ಅಶ್ಲೀಲ ವಿಡಿಯೋ..!
ಇನ್ನೂ ಫರಾಜ್ ಅವರ ನಿಧನಕ್ಕೆ ಚಿತ್ರರಂಗದ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಹಲವಾರು ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.
ಇನ್ನೂ 90ರ ದಶಕದ ಪ್ರಸಿದ್ಧ ನಟರಲ್ಲಿ ಒಬ್ಬರಾಗಿದ್ದ ಫರಾಜ್ ಖಾನ್ ಮೆಹಂದಿ, ಫರೇಬ್, ದುಲ್ಹಾನ್ ಬನೂ ಮೈನ್ ತೇರಿ ಮತ್ತು ಚಂದ್ ಬುಜ್ ಗಯಾ ಸಿನಿಮಾಗಳ ಮೂಲಕ ಖ್ಯಾತಿಗಳಿಸಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









