ನಮ್ಮ ಅಧ್ಯಕ್ಷ ದಕ್ಷ.. ನಿಮ್ಮ ಅಧ್ಯಕ್ಷ ವಿದೂಷಕ : ಕೈ-ಬಿಜೆಪಿ ಮಧ್ಯೆ ಟ್ವಿಟ್ಟರ್ ವಾರ್
ಬೆಂಗಳೂರು : ಕಾಂಗ್ರೆಸ್ – ಬಿಜೆಪಿ ಮಧ್ಯೆ ಟ್ವಿಟ್ಟರ್ ವಾರ್ ಮುಂದುವರಿದಿದೆ. ನಮ್ಮಲ್ಲಿ ಅರ್ಹತೆ, ದಕ್ಷತೆಗೆ ಪ್ರಾಮುಖ್ಯತೆ ಅದರಂತೆಯೇ ದಕ್ಷ ಅಧ್ಯಕ್ಷರನ್ನ ಹೊಂದಿದ್ದೇವೆ. ನಿಮ್ಮಲ್ಲಿ ಇನ್ಯಾರದ್ದೋ ಸಂಘ’ಡದಲ್ಲಿ ಕುಣಿಯುವ ಗೊಂಬೆಗೆ ಮನ್ನಣೆ, ಅದರಂತೆಯೇ ವಿದೂಷಕನನ್ನು ಹೊಂದಿದ್ದೀರಿ ಎಂದು ಬಿಜೆಪಿಯನ್ನು ಕಾಂಗ್ರೆಸ್ ಕಿಚಾಯಿಸಿದೆ.
ಹೊಡೆಯೋಕೆ ಬಂದಾಗ ನಾನು ತೋಳು ತಟ್ಟಿದ್ದು ನಿಜ : ಭೀಮಾನಾಯ್ಕ್
ರಾಜರಾಜೇಶ್ವರಿನಗರದಲ್ಲಿ ಕಾಂಗ್ರೆಸ್ ನ ಕುಸುಮಾ ಅವರನ್ನು ಸೋಲಿಸಲು ಸಿದ್ದರಾಮಯ್ಯ, ಶಿರಾದಲ್ಲಿ ಟಿ.ಬಿ ಜಯಚಂದ್ರ ಅವರನ್ನು ಸೋಲಿಸಲು ಡಿ.ಕೆ.ಶಿವಕುಮಾರ್ ಪ್ಲಾನ್ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದರು.
ಇದಕ್ಕೆ ರಾಜ್ಯ ಕಾಂಗ್ರೆಸ್ ಟ್ಟಿಟ್ಟರ್ ನಲ್ಲಿ ಆಚಾರವಿಲ್ಲದ ನಾಲಿಗೆ, ವಿಚಾರವಿಲ್ಲದ ತಲೆ ಹೊಂದಿದ ಕಾಮಿಡಿ ಕಿಲಾಡಿ ನಳಿನ್ ಕುಮಾರ್ ಕಟೀಲ್ ಅವರ ಮಾತುಗಳು ಯಕ್ಷಗಾನದಲ್ಲಿ ಬರುವ ಹಾಸ್ ಪ್ರಸಂಗದಂತೆ… ನಳಿನ್ ಅವರೇ ದೊಡ್ಡವರ ಬಗ್ಗೆ ಮಾತಾಡಿದರೆ ದೊಡ್ಡವನಾಗುತ್ತೇನೆ ಎನ್ನುವ ಭ್ರಮೆ ಬಿಡಿ ಎಂದು ಕುಟುಕಿದ್ದರು.
ಕಾಂಗ್ರೆಸ್ ನ ಈ ಟ್ವೀಟ್ ಬಾಣಕ್ಕೆ ಪ್ರತಿ ಬಾಣ ಬಿಟ್ಟ ಬಿಜೆಪಿ ಆಚಾರವಿಲ್ಲದ ನಾಲಿಗೆ ಯಾವುದು ಕಾಂಗ್ರೆಸ್..? ಕಾಡುಮನುಷ್ಯ, ಅಲೆಮಾರಿ, ಬೆನ್ನೆಲುಬಿಲ್ಲದವ ಎಂದಿದ್ದು ಸಭ್ಯತನವೇ..?
ನಾನು ಪಕ್ಷದ ಕಾರ್ಯಕರ್ತ. ನಾಳೆ ಸ್ಥಾನ ತ್ಯಜಿಸು ಎಂದು ಹೇಳಿದರೂ ತ್ಯಜಿಸುತ್ತೇನೆ ಎಂದು ಹೇಳುವ ನಮ್ಮ ಅಧ್ಯಕ್ಷರೆಲ್ಲಿ. ಜೈಲಿನಿಂದ ಹೊರಗೆ ಬಂದರೂ ಮೇಲಿನವರನ್ನು ಮೆಚ್ಚಿಸಿ ಅಧ್ಯಕ್ಷ ಸ್ಥಾನ ಪಡೆದ ನಿಮ್ಮ ಅಧ್ಯಕ್ಷರೆಲ್ಲಿ ಎಂದು ಕಾಂಗ್ರೆಸ್ ಗೆ ಟಾಂಗ್ ನೀಡಿದೆ.
ನೀರಿನ ದರ ಏರಿಕೆ : ರಾಜ್ಯ ಸರ್ಕಾರದ ವಿರುದ್ಧ ಸುರ್ಜೇವಾಲಾ ಕಿಡಿ
ಬಿಜೆಪಿಯ ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ನಮ್ಮಲ್ಲಿ ಅರ್ಹತೆ ದಕ್ಷತೆಗೆ ಪ್ರಾಮುಖ್ಯತೆ ಅದರಂತೆಯೇ ದಕ್ಷ ಅಧ್ಯಕ್ಷರನ್ನ ಹೊಂದಿದ್ದೇವೆ. ನಿಮ್ಮಲ್ಲಿ ಇನ್ಯಾರದ್ದೋ ಸಂಘಡದಲ್ಲಿ ಕುಣಿಯುವ ಗೊಂಬೆಗೆ ಮನ್ನಣೆ, ಅದರಂತೆಯೇ ವಿದೂಷಕನನ್ನು ಹೊಂದಿದ್ದೀರಿ.
ಡಾಲರ್ ತಜ್ಞನೆಂಬ ಕುಖ್ಯಾತಿಯ ನಳಿನ್ ಕುಮಾರ್ ಕಟೀಲ್ ಕೆಲವರ ಸಂತೋಷಕ್ಕಾಗಿ ಕೂರಿಸಿದ ನೆಪಮಾತ್ರದ ಅಧ್ಯಕ್ಷ ಎನ್ನುವುದು ತಿಳಿದಿರುವ ವಿಷಯ.
ಬಿ.ಎಸ್.ಯಡಿಯೂರಪ್ಪ ಬಗ್ಗೆ ಪುಂಖಾನುಪುಂಖವಾಗಿ ಟೀಕೆಗಳ ಮಳೆಗೈದರೂ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನ ನಿಗ್ರಹಿಸಲಾಗದ ಬೆನ್ನೆಲುಬಿಲ್ಲದ ಅಧ್ಯಕ್ಷ ಎಂದು ನಿಮ್ಮ ಪಕ್ಷದವರೇ ಹೇಳುತ್ತಿದ್ದಾರೆ.. ಕೊಂಚ ಕಿವಿಗೊಟ್ಟು ಕೇಳಿಸಿಕೊಳ್ಳಿ.. ಎಂದು ತಿರುಗೇಟು ನೀಡಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








