ಹೊಡೆಯೋಕೆ ಬಂದಾಗ ನಾನು ತೋಳು ತಟ್ಟಿದ್ದು ನಿಜ : ಭೀಮಾನಾಯ್ಕ್
ಬಳ್ಳಾರಿ : ಬಿಜೆಪಿಯವರು ಹೊಡೆಯೋಕೆ ಬಂದಾಗ ನಾನು ತೋಳು ತಟ್ಟಿದ್ದು ನಿಜ. ಅವರು ಹೊಡೆದ್ರು ಹೊಡೆಸ್ಕೋ ಬೇಕಾ..? ಎಂದು ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಹೇಳಿದ್ದಾರೆ.
ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ಮಧ್ಯೆ ಗಲಾಟೆ ನಡೆದಿತ್ತು. ಈ ವೇಳೆ ಶಾಸಕ ಭೀಮಾನಾಯ್ಕ್ ಅವರು ತೋಳು ತಟ್ಟಿ ಬಿಜೆಪಿಗೆ ಸವಾಲ್ ಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಘಟನೆ ಬಗ್ಗೆ ಇಂದು ಬಳ್ಳಾರಿಯ ಎಸ್ಪಿ ಕಚೇರಿ ಬಳಿ ಮಾತನಾಡಿದ ಭೀಮಾನಾಯ್ಕ್, ಹಗರಿಬೊಮ್ಮನ ಹಳ್ಳಿ ಪುರಸಭೆ ಗಲಾಟೆ ವೇಳೆ ಬಿಜೆಪಿ ಗೂಂಡಾ ಸಂಸ್ಕøತಿ ಮೆರೆದಿದೆ.
ಬಿಜೆಪಿಯವರು ಆಂಧ್ರಪ್ರದೇಶದಿಂದ ಗುಂಡಾಗಳನ್ನು ಪುರಸಭೆ ಚುನಾವಣೆ ವೇಳೆ ಕಕೊರ್ಂಡು ಬಂದಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ
ಬಿಜೆಪಿ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರಿಗೆ ರಕ್ಷಣೆ ಇಲ್ಲ. ಘಟನೆಗೆ ಸಂಬಂಧಿದಂತೆ ನಾನು ಎಸ್ಪಿ ಅವರಿಗೆ ದೂರು ಕೊಟ್ಟಿದ್ದೇನೆ. ನಮಗೆ ರಕ್ಷಣೆ ಬೇಕಿದೆ.
ನೀರಿನ ದರ ಏರಿಕೆ : ರಾಜ್ಯ ಸರ್ಕಾರದ ವಿರುದ್ಧ ಸುರ್ಜೇವಾಲಾ ಕಿಡಿ
ನಾನು ಈ ಘಟನೆ ಸಂಬಂಧಿಸಿದಂತೆ ಗೃಹ ಮಂತ್ರಿಗಳಿಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರಿಗೆ ಪತ್ರ ಬರೆಯುವೆ ಎಂದು ತಿಳಿಸಿದರು.
ಇನ್ನು ಈ ಘಟನೆಯಲ್ಲಿ ಮಾಜಿ ಶಾಸಕ ನೇಮಿರಾಜ್ ನಾಯ್ಕ್ ಕೈವಾಡ ಇದೆ ಎಂದು ಆರೋಪಿಸಿದ ಭೀಮಾನಾಯ್ಕ್, ನೇಮಿರಾಜ್ ನಾಯ್ಕ್ ಅವರ ಬೆಂಬಲಿಗರು ನಮ್ಮ ಪಟ್ಟಣ ಪಂಚಾಯತ್ ಸದಸ್ಯರನ್ನು ಹೈಜಾಕ್ ಮಾಡಲು ಪ್ರಯತ್ನ ಮಾಡಿದ್ದಾರೆ.
ನಮ್ಮ ಉಪಾಧ್ಯಕ್ಷರನ್ಮು ಹೊತ್ತುಕೊಂಡು ಹೋಗಲು ಬಂದಾಗ, ಗರಗದ ಪ್ರಕಾಶ್ ಬಾಲೇ ಅಂತ ಕರೆದ್ರು, ಅವರು ಹೊಡೆಯೋಕೆ ಬಂದ್ರು. ಹೊಡೆಯೋಕೆ ಬಂದಾಗ ನಾನು ತೋಳು ತಟ್ಟಿದ್ದು ನಿಜ. ಅವರು ಹೊಡೆದ್ರು ಹೊಡೆಸ್ಕೋ ಬೇಕಾ..? ಎಂದು ಭೀಮಾನಾಯ್ಕ್ ಪ್ರಶ್ನೆ ಮಾಡಿದರು.
ಇದೇ ವೇಳೆ ಮಾಜಿ ಶಾಸಕ ನೇಮಿರಾಜ್ ವಿರುದ್ಧ ಹರಿಹಾಯ್ದ ಶಾಸಕ ಭೀಮಾನಾಯ್ಕ್, ಎರಡು ಬಾರಿ ಸೋಲಿಸಿ ಜನ ನಿಮ್ಮನ್ನು ಸೋಲಿಸಿದ್ದಾರೆ. ಆದ್ರೂ ನಿಮಗೆ ಬುದ್ದಿ ಬಂದಿಲ್ಲಾ.
ಚುನಾವಣಾ ರಾಜಕೀಯ ಮಾಡಬೇಕು ಹೊರತು, ಈ ರೀತಿ ರಾಜಕೀಯ ದ್ವೇಷ ಮಾಡೋದಲ್ಲ. 2023 ರಲ್ಲಿ ಚುನಾವಣೆ ಇದೆ ಬಾ, ಸ್ಪರ್ಧೆ ಮಾಡು, ಜನ ಆಶೀರ್ವಾದ ಮಾಡಿದ್ರೆ ನೀನು ಆಡಳಿತ ಮಾಡು. ಅದನ್ನು ಬಿಟ್ಟು ಗುಂಡಾ ಸಂಸ್ಕೃತಿ ತೋರಿಸೋದು ಸರಿಯಲ್ಲ ಎಂದು ಕಿಡಿಕಾರಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel