madagaja
‘ಮದಗಜ’ ಮೂರನೇ ಹಂತದ ಶೂಟಿಂಗ್ ಶೀಘ್ರವೇ ಆರಂಭ..! ಎಲ್ಲಿ, ಯಾವಾಗ ಗೊತ್ತಾ..!
ಕನ್ನಡ ಚಿತ್ರರಂಗದಲ್ಲಿ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ , ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಮದಗಜ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈಗಾಗಲೇ ವಾರಣಾಸಿಯಲ್ಲಿ ಮೊದಲ ಹಂತದ ಶೂಟಿಂಗ್ ಮುಗಿದಿತ್ತು. ನಂತರ ಮೈಸೂರಿನಲ್ಲಿ ಎರಡನೇ ಹಂತದ ಶೂಟಿಂಗ್ ಮಾಡಲಾಗಿತ್ತು. ಇದೀಗ ಮೂರನೇ ಹಂತದ ಶೂಟಿಂಗ್ ಗೆ ಸಜ್ಜಾಗಿದೆ ಮದಗಜ ಸಿನಿಮಾತಂಡ.
ಹೌದು ಡಿಸೆಂಬರ್ 1ರಿಂದ ಬೆಂಗಳೂರಿನಲ್ಲಿ ಮೂರನೇ ಹಂತದ ಚಿತ್ರೀಕರಣ ಬಿರುಸಿನಿಂದ ಆರಂಭವಾಗಲಿದೆ. ಬೆಂಗಳೂರಿನಲ್ಲಿ ಅದ್ಧೂರಿ ಸೆಟ್ ನಿರ್ಮಿಸಿ ಮದಗಜ ಶೂಟಿಂಗ್ ಮಾಡುವ ಪ್ಲಾನ್ ಚಿತ್ರತಂಡದ್ದು. ಅಂದ್ಹಾಗೆ ಎಚ್ ಎಂ ಟಿ ಫ್ಯಾಕ್ಟರಿಯಲ್ಲಿ ಸೆಟ್ ನಿರ್ಮಾಣವಾಗಲಿದೆಯಂತೆ.
ಹೈದರಾಬಾದ್ ನಿಂದ ಬೆಂಗಳೂರಿಗೆ ವಾಪಸ್ಸಾಗಿದ್ದ ಕಿಚ್ಚ ಇದೀಗ ಕೇರಳಕ್ಕೆ ಪಯಣ..!
ಚಿತ್ರಕ್ಕೆ ಮಹೇಶ್ ಕುಮಾರ್ ಅವರು ಆಕ್ಷನ್ ಕಟ್ ಹೇಳ್ತಿದ್ದು, ರಾಬರ್ಟ್ ಚಿತ್ರ ನಿರ್ಮಿಸಿರುವ ಉಮಾಪತಿ ಶ್ರೀನಿವಾಸ್ ಮದಗಜ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಚಿತ್ರಕ್ಕೆ ನವೀನ್ ಕುಮಾರ್ ಅವರು ಛಾಯಾಗ್ರಹಣವಿದ್ದು, ರವಿ ಬಸ್ರೂರು ಸಂಗೀತ ನಿರ್ದೇಶನವಿದೆ. ಚೇತನ್ ಕುಮಾರ್, ರವಿಬಸ್ರೂರು ಈ ಚಿತ್ರಕ್ಕೆ ಸಾಹಿತ್ಯ ರಚಿಸಲಿದ್ದಾರೆ.
ಇನ್ನೂ ಉಗ್ರಂ ಖ್ಯಾತಿಯ ರೋರಿಂಗ್ ಸ್ಟಾರ್ ಶ್ರೀಮುರುಳಿ ಅವರು ನಾಯಕರಾಗಿರುವ ಈ ಚಿತ್ರದ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಕುತೂಹಲ ಹೆಚ್ಚಿದೆ. ಈ ಸಿನಿಮಾವೊಂದು ಪಕ್ಕಾ ಫ್ಯಾಮಿಲಿ, ಆಕ್ಷನ್, ಥ್ರಿಲ್ಲರ್ ಆಗಿರಲಿದೆ. ಚಿತ್ರದಲ್ಲಿ ಮುರುಳಿ ಡೇರಿಂಗ್ ಲುಕ್ ನಲ್ಲೇ ಮಾಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಚಿತ್ರದಲ್ಲಿ ಶ್ರೀಮುರಳಿಗೆ ಆಶಿಕಾ ರಂಗನಾಥ್ ಅವರು ಜೋಡಿಯಾಗಿದ್ದು, ತೆಲುಗು ನಟ ಜಗಪತಿ ಬಾಬು ಪ್ರಮುಖ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ತಾಯಿದ್ದಾರೆ.
‘ಚಾರ್ಲಿ’ ಜೊತೆ ಕಾಶ್ಮೀರಕ್ಕೆ ಹೊರಟ ಸಿಂಪಲ್ ಸ್ಟಾರ್..!
ಯೂಟ್ಯೂಬ್ ನಲ್ಲಿ ಎಲ್ಲಾ ರೆಕಾರ್ಡ್ ಗಳನ್ನ ಬ್ರೇಕ್ ಮಾಡಿದ “ಬುಟ್ಟ ಬೊಮ್ಮ” ಸಾಂಗ್ ..!
ಬಿಗ್ ಬಾಸ್ ಸೀಸನ್ 8ಕ್ಕೆ ತಯಾರಾಗ್ತಿದ್ದಾರಂತೆ ಕಿಚ್ಚ ಸುದೀಪ್..!
madagaja
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







