tulasi pooja
ತುಳಸಿ ಪೂಜೆಯ ವೈಶಿಷ್ಠ್ಯತೆ, ವಿಧಿ- ವಿಧಾನ, ಪುರಾಣ – ಇತಿಹಾಸ
ತುಳಸಿ ಪೂಜೆ.. ಪ್ರತಿ ವರ್ಷ ದೀಪಾವಳಿಯ ಜೊತೆಗೂಡಿ ಬರುವ, ಆಚರಿಸಲಾಗುವ ಹಬ್ಬ. ತುಳಸಿ ಹಬ್ಬವನ್ನ ಹಿಂದೂಗಳು ಅತ್ಯಂತ ಶ್ರದ್ಧೆ ಭಕ್ತಿ ಸಂಭ್ರಮದಿಂದ ಆಚರಣೆ ಮಾಡ್ತಾರೆ. ಮನೆಮುಂದೆ ತುಳಸಿ ಗಿಡಕ್ಕೆ ಅಲಂಕಾರ ಮಾಡಿ ಅದಕ್ಕೆ ಪೂಜೆ ಮಾಡಿ ಮಹಿಳೆಯರು ಮುತ್ತೈದೆಯರನ್ನ ಕರೆಸಿ ಅರಿಶಿಣ ಕುಂಕುಮ ಕೊಡುವ ಸಂಪ್ರದಾಯವಿದೆ. ಅಂದ್ಹಾಗೆ ತುಳಿಸ ಪೂಜೆ ಮಾಡುವುದರಿಂದ ಮನೆಗೆ ಲಕ್ಷ್ಮಿ ಒಲಿಯುತ್ತಾಳೆ ಎಂಬ ನಂಬಿಕೆಯಿದೆ. ದೀಪಾವಳಿ ಜೊತೆಗೂಡಿ ಬರುವ ತುಳಸಿ ಹಬ್ಬಕ್ಕೆ ಅನೇಕ ವೈಶಿಷ್ಠ್ಯವಿದೆ.
ಇನ್ನೂ ಜಗತ್ ಪಾಲಕ ಶ್ರೀ ವಿಷ್ಣು ಹಾಗೂ ತುಳಿಸಿಯ ವಿವಾಹದಂತೆ ತುಳಸಿ ಹಬ್ಬ ಆಚರಿಸಲಾಗುತ್ತದೆ. ಚಾಂದ್ರಮಾನ ಕಾರ್ತಿಕಮಾಸ ಶುಕ್ಲಪಕ್ಷದ 19ನೇ ದಿನವಾದ ದ್ವಾದಶಿಯಂದು ಈ ಹಬ್ಬವನ್ನು ಆಚರಣೆ ಮಾಡಲಾಗುತ್ತೆ. ಕಾರ್ತಿಕ ಮಾಸ ಶ್ರೀ ಹರಿಗೆ ಪ್ರಿಯವಾದ ಮಾಸ. ಅದಕ್ಕಾಗಿ ತಾಯಿ ಲಕ್ಷ್ಮಿ ದೇವಿಗೂ ಈ ಮಾಸ ಪ್ರಿಯವಾದದ್ದು. ಈ ತಿಂಗಳಲ್ಲಿ ವಿಷ್ಣು ಯೋಗ ನಿದ್ರೆಯಿಂದ ಎಚ್ಚರವಾಗ್ತಾನೆ. ಆಗ ಜಗತ್ತಿನಲ್ಲಿ ಸಂತೋಷ ಮತ್ತು ಕೃಪೆಯ ಮಳೆಯಾಗುತ್ತದೆ. ತಾಯಿ ಲಕ್ಷ್ಮಿ ಭೂಮಿಗೆ ಬಂದು ಭಕ್ತರಿಗೆ ಕೃಪೆ ತೋರುತ್ತಾಳೆಂಬ ನಂಬಿಕೆಯಿದೆ.
ಮಕ್ಕಳ ಅಪೌಷ್ಟಿಕತೆ ನಿವಾರಿಸಲು ಸಾವಯವ ನುಗ್ಗೆ ಪೌಡರ್
ಪೂಜಾ ವಿಧಾನ
ಬೆಳಿಗ್ಗೆ ದೀಪ ಬೆಳಗಿಸಿ ತುಳಸಿ ಪೂಜೆ ಮಾಡಬೇಕು. ಪೂಜೆ ಮಾಡಿದ ನಂತರ ಕುಟುಂಬದ ಸಂತೋಷಕ್ಕೆ ಪ್ರಾರ್ಥನೆ ಮಾಡಬೇಕು. ತುಳಸಿಗಿಡದೊಂದಿಗೆ ಬೆಟ್ಟದನೆಲ್ಲಿಕಾಯಿ ಗಿಡವನ್ನೂ ನೆಟ್ಟು ಪೂಜಿಸುವ ಸಂಪ್ರದಾಯ ಹಿಂದಿನಿಂದಲೂ ಇದೆ. ಉತ್ಥಾನ ದ್ವಾದಶೀ ದಿವಸ ಬೆಳಗ್ಗೆ ಕಾಯಿಸಹಿತವಾದ ಬೆಟ್ಟದನೆಲ್ಲಿಗಿಡವನ್ನು ನೆಟ್ಟು ಅಲ್ಲಿ ಭಗವಂತನನ್ನು ಕೂರಿಸಿ ನೀರಾಜನಾದಿಗಳಿಂದ ಪುಜಿಸುತ್ತಾರೆ. ರಾತ್ರಿಯಲ್ಲಿ ಬೃಂದಾವನವನ್ನು ಪುಷ್ಪಾದಿಗಳಿಂದಲಂಕರಿಸಿ ಭಗವಂತನನ್ನು ಆ ಬೃಂದಾವನ ದಲ್ಲಿಟ್ಟು ಉತ್ಸವಮಾಡುತ್ತಾರೆ. ಮನೆಗಳಲ್ಲಿ ಬೃಂದಾವನವನ್ನು ಪುಜಿಸಿ ದೀಪಗಳಿಂದ ಅಲಂಕರಿಸಿ ಪುಜಿಸುತ್ತಾರೆ. ರಾತ್ರಿ ಭಗವಂತನಿಗೆ ಕ್ಷೀರಾನ್ನನಿವೇದನ ಒಂದು ವಿಶೇಷ. ಹೊಸ ನೆಲ್ಲಿಕಾಯನ್ನು ಈ ದ್ವಾದಶಿಯಿಂದ ಉಪಯೋಗಿಸಲು ಪ್ರಾರಂಭಿಸುತ್ತಾರೆ. ಕ್ಷೀರಾಬ್ಧಿ ಯಲ್ಲಿ ಶಯನಿಸಿದ ಭಗವಂತ ಈ ದ್ವಾದಶಿಯಲ್ಲಿ ತುಲಸೀ ಆವಾಸವಾದ ಬೃಂದಾವನದಲ್ಲಿ ತುಲಸೀ ಲಕ್ಷ್ಮಿಯರೊಡನೆ ಏಳುವುದರ ಸಂಕೇತವಾಗಿ ಈ ಪೂಜೆ ಇಂದಿಗೂ ನಡೆಯುವ ರೂಢಿಯಿದೆ.
ಪುರಾಣ , ಇತಿಹಾಸ
ಇನ್ನೂ ತುಳಸಿ ಹಬ್ಬ ಆಚರಣೆ ಹಿಂದೆ ಪೌರಾಣಿಕ ಕಥೆಗಳು ಇವೆ. ಪುರಾಣಗಳ ಪ್ರಕಾರ ದೇವತೆಗಳೂ, ದಾನವರೂ ಕ್ಷೀರಸಾಗರವನ್ನು ಕಡೆದಾಗ ಕೊನೆಯಲ್ಲಿ ಅಮೃತಕಲಶ ಬಂತು. ಅದನ್ನು ಕೈಗೆ ತೆಗೆದುಕೊಂಡ ವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಬಾಷ್ಪಗಳು ಆ ಕಲಶದಲ್ಲಿ ಬಿದ್ದು ಅದರಿಂದ ಒಂದು ಸಣ್ಣ ಗಿಡ ಹುಟ್ಟಿತು. ಅದಕ್ಕೆ ತುಲನೆ ಇಲ್ಲವಾದ್ದರಿಂದ,ತುಳಸಿ ಎಂದು ಹೆಸರಿಟ್ಟು, ಲಕ್ಷ್ಮಿಯೊಂದಿಗೆ ತುಳಸಿಯನ್ನೂ ವಿಷ್ಣುವು ಮದುವೆಯಾದನು ಎಂದೂ ಸಹ ಹೇಳಲಾಗುತ್ತೆ.
ಇನ್ನೊಂದು ಪುರಾಣದ ಪ್ರಕಾರ ತುಳಸಿ, ಜಲಂಧರನ ಹೆಂಡತಿಯಾದ ವೃಂದ. ರಾಕ್ಷಸನಾದ ಜಲಂಧರನ ಕಿರುಕುಳ ತಾಳಲಾರದೇ ದೇವತೆಗಳು ವಿಷ್ಣುವಿನ ಸಹಾಯಕ್ಕೆ ಮೊರೆ ಹೋಗಿದ್ದ ಸಂದರ್ಭದಲ್ಲಿ ಪತಿವ್ರತೆಯಾದ ವೃಂದಳ ತಪೋಶಕ್ತಿಯಿಂದ ಜಲಂಧರನು ಅತ್ಯಂತ ಶಕ್ತಿಶಾಲಿಯಾದನಂತೆ. ಆಗ ವಿಷ್ಣು ಜಲಂಧರನ ವೇಷ ಧರಿಸಿ ವೃಂದಳ ಪಾತಿವ್ರತ್ಯ ಶಕ್ತಿಯನ್ನು ಭಂಗ ಮಾಡಿದನಂತೆ. ಈ ಸಂದರ್ಭದಲ್ಲಿ ಜಲಂಧರನು ರಣಭೂಮಿಯಲ್ಲಿ ಮರಣಹೊಂದಿದ್ದನು. ಇದೇ ಕೋಪಕ್ಕೆ ವಿಷ್ಣುವಿಗೆ ವೃಂದ ಶಾಪ ನೀಡಿ , ತನ್ನ ಪತಿಯ ಶವದೊಂದಿಗೆ ಬೂದಿಯಾದಳಂತೆ. ಮುಂದೆ ಆ ವೃಂದಳೇ ತುಳಸಿಯಾಗಿ ಪಾರ್ವತಿ ತಯಾರಿಸಿದ ಬೃಂದಾವನದಲ್ಲಿ ಜನ್ಮತಾಳಿ , ನಂತರ ಇವಳೇ ರುಕ್ಮಿಣಿಯಾಗಿ ಜನ್ಮ ಪಡೆದು ಕಾರ್ತಿಕ ಶುದ್ಧ ದ್ವಾದಶಿಯಂದು ಕೃಷ್ಣನನ್ನು ಮದುವೆಯಾದಳೆಂಬ ಪ್ರತೀತಿಯಿದೆ.
ವೈಶಿಷ್ಠ್ಯತೆ
ತುಳಸಿ ಪೂಜೆ ದಿವಸದಲ್ಲಿ ದೀಪೋತ್ಸವ ವಿಶೇಷ ಪುಣ್ಯಪ್ರದ. ಈ ದ್ವಾದಶಿಯಲ್ಲಿ ಧಾತ್ರೀ ತುಲಸೀ ಸಹಿತ ಲಕ್ಷ್ಮೀನಾರಾಯಣನನ್ನು ಪುಜಿಸುವುದರಿಂದ ಸರ್ವವಿಧವಾದ ಪಾತಕಗಳೂ ನಶಿಸುತ್ತವೆ ಎಂಬ ನಂಬಿಕೆಯಿದೆ. ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಈ ಮಾಸದಲ್ಲಿ ದೀಪಾವಳಿ, ಗೋಪೂಜೆ, ತಾಯಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ.
tulassi pooja
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel