ಮೆಗಾಸ್ಟಾರ್ ಕುಟುಂಬದಲ್ಲಿ ಸಡಗರ ಸಂಭ್ರಮ : ನಿಹಾರಿಕಾ ದುಬಾರಿ ಗಿಫ್ಟ್ ಕೊಟ್ಟ ಚಿರಂಜೀವಿ!
ಮೆಗಾಸ್ಟಾರ್ ಚಿರಂಜೀವಿ ಸಹೋದರ ಹಾಗೂ ನಟನಾಗಿರುವ ನಾಗಬಾಬು ಅವರ ಪುತ್ರಿ ನಿಹಾರಿಕಾ ಮದುವೆಯ ತಯಾರರಿ ಜೋರು ಜೋರಾಗಿ ಸಾಗಿದೆ. ಚಿರಂಜೀವಿ ಕುಟುಂಬದಲ್ಲಿ ಸಡಗರ ಸಂಭ್ರಮ ಮನೆಮಾಡಿದೆ. ರಾಜಸ್ಥಾನದ ಉದಯ್ ಪುರದಲ್ಲಿ ನಿಹಾರಿಕಾ ಕೊನಿಡೇಲ ಅದ್ಧೂರಿ ಮದುವೆ ನಡೆಯುತ್ತಿದೆ. ನಟಿ ನಿಹಾರಿಕಾ, ಚೈತನ್ಯ ಜೊನ್ನಲಗಡ್ಡ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಲಿದ್ದಾರೆ. ಮದುವೆಗೆ ಕೌಂಟ್ ಡೌನ್ ಆರಂಭವಾಗಿದೆ. ಇನ್ನೂ ಮದುವೆಯಲ್ಲಿ ಚಿರಂಜೀವಿ, ಪವನ್ ಕಲ್ಯಾಣ್, ಅಲ್ಲು ಅರ್ಜುನ್, ರಾಮ್ ಚರಣ್ ದಂಪತಿ ಅಲ್ಲು ಅರ್ಜುನ್ ತಂದೆ, ಎಲ್ಲರೂ ಭಾಗಗಿಯಾಗಿದ್ದಾರೆ ಎಂಜಾಯ್ ಮಾಡ್ತಾಯಿದ್ದಾರೆ.
ಶೂಟಿಂಗ್ ಸ್ಪಾಟ್ ನಿಂದ ಫೋಟೋ ಶೇರ್ ಮಾಡಿದ ಕಿಚ್ಚ ಫ್ಯಾನ್ಸ್ ಗೆ ಹೇಳಿದ್ದೇನು..!
ಈಗಾಗಲೇ ಮದುವೆ ಪೂರ್ವ ಸಮಾರಂಭಗಳಾದ ಮೆಹಂದಿ , ಸಂಗೀತ, ಅರಿಶಿಣ ಸೇರಿದಂತೆ ಎಲ್ಲಾ ಶಾಸ್ತ್ರಗಳು ಅದ್ದೂರಿಯಾಗಿ ನೆರವೇರಿದೆ. ಇನ್ನೂ ಮಧುಮಗಳು ನಿಹಾರಿಕಾಳಾ ಫೊಟೋಗಳು, ಮದುವೆ ಮನೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿವೆ. ಸಿನಿಮಾ ಗಣ್ಯರು ಆಪ್ತರು ಸ್ನೇಹಿತರಿಗೆ ಮದುವೆಗೆ ಆಹ್ವಾನ ನೀಡಲಾಗಿದೆ. ಚಿರಂಜೀವಿ, ರಾಮಚರಣ್, ಹಾಗೂ ಇಡೀ ಕುಟುಂಬವೇ ಹಾಜರಿದ್ದು, ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇನ್ನೂ ನಿಹಾರಿಕಾಗಗೆ ಚಿರಂಜೀವಿ 2 ಕೋಟಿ ಬೆಲೆಬಾಳುವ ವಿಶೇಷವಾಗಿ ವಿನ್ಯಾಸ ಮಾಡಿಸಿರುವ ಡೈಮಂಡ್ ನೆಕ್ಲೇಸ್ ಗಿಫ್ಟ್ ಕೊಟ್ಟಿದ್ದಾರೆ. ಚಿರಂಜೀವಿ ನಿಡಿದ ಗಿಫ್ಟ್ ಸುದ್ದಿ ಈಗಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel