ಆಸೀಸ್ ಟೆಸ್ಟ್ ಸರಣಿ : ಟೆಲಿಫೋನ್ ನಂಬರ್ ಸುತ್ತಿದ ಭಾರತದ ಬ್ಯಾಟ್ಸ್ ಮನ್ಸ್
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲ್ಲುವ ಎಲ್ಲಾ ಅವಕಾಶಗಳನ್ನು ಕೈ ಚಲ್ಲಿದೆ. ಪಂದ್ಯದ ಮೂರನೇ ದಿನ ಎರಡನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್ ಮೆನ್ ಗಳು ಪೆವಿಲಿಯನ್ ಪರೇಡ್ ನಡೆಸಿದ್ದಾರೆ. ಆಸೀಸ್ ಬೌಲರ್ ಗಳ ದಾಳಿಗೆ ಭಾರತೀಯ ಬ್ಯಾಟ್ಸ್ ಮನ್ ಗಳು ಪತರುಗುಟ್ಟಿ ಹೋಗಿದ್ದಾರೆ. ಕೇವಲ 36 ರನ್ ಗೆ ಟೀಂ ಇಂಡಿಯಾ ಸರ್ವಪತನಗೊಂಡಿದೆ. ಆಸ್ಟ್ರೇಲಿಯಾಗೆ ಪಂದ್ಯ ಗೆಲ್ಲಲು 90 ರನ್ ಗುರಿ ನೀಡಿದೆ.
9 ರನ್ ಗೆ ಒಂದು ವಿಕೆಟ್ ಕಳೆದುಕೊಂಡು ತೃತೀಯ ದಿನದಾಟ ಆರಂಭಿಸಿದ ಭಾರತ ಮೊದಲು ನೈಟ್ ವಾಚ್ ಮ್ಯಾನ್ ಬುಮ್ರಾ ವಿಕೆಟ್ ಕಳೆದುಕೊಂಡಿತು. ಬಳಿಕ ಮಯಾಂಕ್ ಅಗರ್ವಾಲ್ ಕೂಡಾ 9 ರನ್ ಗೆ ವಿಕೆಟ್ ಒಪ್ಪಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಪೂಜಾರ (ಸೊನ್ನೆ) ಸುತ್ತಿದ್ರೆ, ಕೊಹ್ಲಿ (4), ರಹಾನೆ (ಸೊನ್ನೆ), ಹನುಮ ವಿಹಾರಿ (8) ಸಹಾ 4 ರನ್ ಗಳಿಸಿ ನಂತೆ ಟೆಲಿಫೋನ್ ನಂಬರ್ ಸುತ್ತಿದ್ರು.
ಕೊನೆಯಲ್ಲಿ ಶಮಿ ಗಾಯಗೊಂಡು ಮೈದಾನದಿಂದ ಹೊರನಡೆದರು. ಭಾರತ ಆಸೀಸ್ ಗೆ 90 ರನ್ ಗುರಿ ನೀಡಿದೆ. ಇನ್ನು ಆಸೀಸ್ ನೆಲದಲ್ಲಿ ಆಡಿದ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಆಸೀಸ್ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










