ತಂಗಿಯನ್ನ ಪ್ರೀತಿಸಿದ್ದಕ್ಕೆ ಗೆಳೆಯನ ಕತ್ತು ಕೊಯ್ದು ಕೊಲೆ
ಭೋಪಾಲ್ : ತನ್ನ ತಂಗಿಯನ್ನ ಪ್ರೀತಿಸಿದ ಗೆಳಯನ ಕತ್ತು ಕೊಯ್ದು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
22 ವರ್ಷದ ಕಿಶನ್ ನಿಹಾನಾ ಮೃತಯುವಕನಾಗಿದ್ದು, ಅನಿಲ್ ಪಾಂಚಲ್ ಕೊಲೆ ಆರೋಪಿಯಾಗಿದ್ದಾನೆ.
ಯುವಕನ ಮೃತದೇಹ ರಕ್ತದ ಮಡುವಿನಲ್ಲಿ ಪೊಲೀಸರಿಗೆ ಪತ್ತೆಯಾಗಿದ್ದು, ಯುವಕನನ್ನು ಆರೋಪಿ ಕತ್ತು ಕೂಯ್ದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿಚಾರವಾಗಿ ಮಾತನಾಡಿದ ಪೊಲೀಸರು, ಕಿಶನ್ ಸ್ನೇಹಿತ ಅನಿಲ್ ಪಂಚಲ್ ಸಹೋದರಿಯನ್ನು ಪ್ರೀತಿಸುತ್ತಿದ್ದನು.
ಈ ವಿಚಾರ ತಿಳಿದ ಅನಿಲ್ ನಿರ್ಜನ ಪ್ರದೇಶಕ್ಕೆ ಕಿಶನ್ ನನ್ನು ಕರೆದುಕೊಂಡು ಹೋಗಿ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.
ಅಲ್ಲದೆ ಆರೋಪಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.









