ನಾನು ಮಾಸ್ಕ್ ಧರಿಸದೆ ಹೊರಗೆ ಹೋಗುತ್ತೇನೆ. ನನ್ನನ್ನು ಬಂಧಿಸಲಿ, ಜೈಲಿನಲ್ಲಿ ಊಟ ಆದರೂ ಸಿಗುತ್ತದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಲಾಕ್ ಡೌನ್ ಪರಿಸ್ಥಿತಿಯ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಆಕ್ರೋಶ ಹೊರಹಾಕಿದ ಮಾಜಿ ಸಚಿವ ರೇವಣ್ಣ ರಾಷ್ಟ್ರದ ದೊರೆ ಹಸಿದ ಹೊಟ್ಟೆಗೆ ಅನ್ನ ಕೊಡಲಿ ಎಂದರು.
ಪ್ರಧಾನಿ ದೀಪ ಹಚ್ಚಿ ಎಂದಾಗ ಜನರು ದೀಪ ಹಚ್ಚಿದ್ದಾರೆ. ಯೋಗ ಮಾಡಿ, ಕ್ಲಾಪ್ ಮಾಡಿ ಎಂದಾಗ ಅದನ್ನು ಮಾಡಿದ್ದೇವೆ. ಪ್ರಧಾನಿ ಹಾಗೂ ಮುಖ್ಯಮಂತ್ರಿ ಹೇಳಿದ ಹಾಗೆ ಜನರು ಮಾಡಿದ್ದಾರೆ ಎಂದು ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಸಿಎಂ ಫಂಡ್ ಗೆ ರಾಜ್ಯದ ಜನರು ನೀಡಿರುವ ಹಣದ ಬಗ್ಗೆ ಶ್ವೇತ ಪತ್ರ ಹೊರಡಿಸಲಿ. ಹಣ ಇಲ್ಲ ಎಂದಾದರೆ, ಹಣ ಎಲ್ಲಿಂದ ಬರುತ್ತದೆ ಎಂದು ನಾವು ತೋರಿಸುತ್ತೇವೆ ಎಂದ ರೇವಣ್ಣ, ಜನರ ಸಮಸ್ಯೆ ಬಗ್ಗೆ ಪಕ್ಷಾತೀತವಾಗಿ ನಾವು ಕೈಜೋಡಿಸುತ್ತೇವೆ ಎಂದು ಹೇಳಿದರು. ಶಾಸಕರ ಮತ್ತು ವಿಧಾನ ಪರಿಷತ್ ಸದಸ್ಯರ ನಿಧಿ ಸ್ಥಗಿತಗೊಳಿಸಿದ್ದು, ದಯಮಾಡಿ ಶಾಸಕರ ನಿಧಿ ಸ್ಥಗಿತಗೊಳಿಸಬಾರದು ಎಂದು ಮುಖ್ಯಮಂತ್ರಿ ಗೆ ಮನವಿ ಮಾಡಿದರು.
ಫಿಫಾ ವಿಶ್ವಕಪ್‍ನಲ್ಲಿ ಆಡದಿದ್ರೂ ಜಗತ್ತನ್ನೇ ಆಡಿಸುತ್ತಿದೆ ಪಾಕಿಸ್ತಾನ..! ಏನಿದು ಸಿಯಾಲ್‍ಕೋಟ್ ರಹಸ್ಯ..?
ಇದೆಂಥಾ ವಿಪರ್ಯಾಸ ನೋಡಿ...! ಭಾರತದಂತೆ ಈ ದೇಶದಲ್ಲೂ ಫುಟ್‍ಬಾಲ್ ಕ್ರೇಝ್ ಇದ್ರೂ ಅಪ್ರತಿಮ ಅಟಗಾರರನ್ನು ತಯಾರು ಮಾಡಲು ಆಗ್ತಿಲ್ಲ. ಹೀಗಾಗಿ ಅವರು ಕೂಡ ಫಿಫಾ ವಿಶ್ವಕಪ್‍ನಲ್ಲಿ ಅರ್ಹತೆ...








