ADVERTISEMENT
Friday, June 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports IPL 2020

ಕಿಂಗ್ಸ್ 11 ವರ್ಸಸ್ ಸೂಪರ್ ಕಿಂಗ್ಸ್ : ಸೋಲಿನ ಸುಳಿಯಿಂದ ಮುಕ್ತಿ ಯಾರಿಗೆ?

admin by admin
October 4, 2020
in IPL 2020, Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ದುಬೈ : 13 ನೇ ಆವೃತ್ತಿಯ ಇಂದಿನ ಎರಡನೇ ಪಂದ್ಯದಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿರುವ ಕಿಂಗ್ಸ್ 11 ಪಂಜಾಬ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಗೆಲುವಿಗಾಗಿ ಸೆಣೆಸಾಟ ನಡೆಸಲಿವೆ.

ಟೂರ್ನಿಯಲ್ಲಿ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿದ್ದ ಸಿಎಸ್ ಕೆ ಹ್ಯಾಟ್ರಿಕ್ ಸೋಲುಂಡು ಕಂಗಾಲಾಗಿದೆ. ಇತ್ತ ಅತ್ಯುತ್ತಮ ಪ್ರದರ್ಶನ ಹೊರತಾಗಿ ಕಿಂಗ್ಸ್ 11 ಪಂಜಾಬ್ ತಂಡ ಗೆಲುವಿನ ಅಂಚಿನಲ್ಲಿ ಪಂದ್ಯವನ್ನು ಕೈ ಚೆಲ್ಲುತ್ತಿದೆ. IPL2020

Related posts

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

ಮೇಲ್ಮನೆ ಕದನ…ಸೋಲು ಗೆಲುವಿನ ಲೆಕ್ಕಾಚಾರ..!

June 18, 2026
10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

June 18, 2026

ತಂಡಗಳ ಬಲಾಬಲ ಹೀಗಿದೆ

ಐಪಿಎಲ್ ಇತಿಹಾಸದಲ್ಲೇ ಧೋನಿ ಸಾರಥ್ಯದ ಚೆನ್ನೈ ತಂಡ ಬಲಿಷ್ಠ ತಂಡ ಎಂದು ಗುರುತಿಸಿಕೊಂಡಿದೆ. ಆದ್ರೆ ಈ ಆವೃತ್ತಿಯಲ್ಲಿ ಸೋಲಲೆಂದೇ ಆಟವಾಡುತ್ತಿರುವ ರೀತಿ ಚೆನ್ನೈ ಪ್ರದರ್ಶನವಿದೆ.

ಇದನ್ನೂ ಓದಿ : IPL2020 | 3ನೇ ಗೆಲುವಿಗಾಗಿ ಮುಂಬೈ- ಹೈದರಾಬಾದ್ ಗುದ್ದಾಟ

ಇತ್ತ ಕನ್ನಡಿಗರಿಂದಲೇ ತುಂಬಿರುವ ಪಂಜಾಬ್ ತಂಡ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. ಪಂದ್ಯ ಸೋತರು ತಂಡ ಎಲ್ಲರ ಗಮನ ಸೆಳೆಯುತ್ತಿದೆ.

ಚೆನ್ನೈ ಸೂಪರ್ ಕಿಂಗ್ಸ್

ಸಿಎಸ್ ಕೆ ತಂಡದ ಬಲ ಎಂದ್ರೆ ಅದು ಸಂಘಟಿತ ಹೋರಾಟ. ಎಂತಹದ್ದೇ ಪರಿಸ್ಥಿತಿ ಬಂದರೂ ಗೆಲುವಿಗಾಗಿ ಹೋರಾಡೋದು ಚೆನ್ನೈ ತಂಡದ ತಾಕತ್ತು. ಆದ್ರೆ ಈ ಬಾರಿ ಸಿಎಸ್ ಕೆ ಗಾಂಡೀವಿ ಇಲ್ಲದ ಅರ್ಜುನ ರೀತಿ ಪ್ರದರ್ಶನ ನೀಡುತ್ತಿದೆ. IPL 2020 CSK Dhoni

ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ಆರಂಬಿಕ ಆಟಗಾರರು ವಿಫಲರಾಗುತ್ತಿದ್ದಾರೆ. ಬ್ಯಾಟಿಂಗ್ ನಲ್ಲಿ ವಾಟ್ಸನ್ ಪದೇ ಪದೆ ವೈಫಲ್ಯ ಅನುಭವಿಸುತ್ತಿರುವುದು ತಂಡಕ್ಕೆ ತಲೆನೋವು ತರಿಸಿದೆ. ಗಾಯದ ನಂತರ ಕಂಬ್ಯಾಕ್ ಮಾಡಿರುವ ರಾಯುಡು ಕಳೆದ ಪಂದ್ಯದಲ್ಲಿ ಅಬ್ಬರಿಸಲಿಲ್ಲ. ಡು ಪ್ಲೆಸಿಸ್ ಮತ್ತು ನಾಯಕ ಧೋನಿಯನ್ನು ಹೊರತುಪಡಿಸಿ ಯಾವೊಬ್ಬ ಆಟಗಾರರೂ ಹೇಳಿಕೊಳ್ಳುವಂತ ಉತ್ತಮ ಪ್ರದರ್ಶನ ತೋರುತ್ತಿಲ್ಲ. ಆದರೆ ಕಳೆದ ಪಂದ್ಯದಲ್ಲಿ 50 ರನ್ ಸಿಡಿದ್ದ ಜಡೇಜಾ ಮೇಲೆ ತಂಡ ಭರವಸೆ ಹೊಂದಿದೆ.

ಬೌಲಿಂಗ್ ವಿಚಾರಕ್ಕೆ ಬಂದ್ರೆ ಸಿಎಸ್ ಕೆ ಆಟಗಾರರು ಸಾಕಷ್ಟು ಸುಧಾರಿಸಬೇಕಿದೆ. ಜಡೇಜಾ, ಪೀಯೂಷ್ ಚಾವ್ಲಾ, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್ ದುಬಾರಿಯಾಗುತ್ತಿದ್ದಾರೆ.

ಕಿಂಗ್ಸ್ 11 ಪಂಜಾಬ್

ಕನ್ನಡಿಗ ಕೆ.ಎಲ್. ರಾಹುಲ್ ನೇತೃತ್ವದ ಪಂಜಾಬ್ ತಂಡ, ಸಮರ್ಥ ಆಟಗಾರರನ್ನ ಹೊಂದಿದ್ದರೂ ಗೆಲುವು ಸಾಧಿಸಲು ಆಗುತ್ತಿಲ್ಲ. ಕಳೆದ ಪಂದ್ಯವನ್ನು ಹೊರತುಪಡಿಸಿದ್ರೆ ರಾಹುಲ್, ಮಾಯಾಂಕ್ ಅಗರ್ವಾಲ್ ಇಬ್ಬರು ಬೊಂಬಾಟ್ ಪ್ರದರ್ಶನ ನೀಡಿದ್ದಾರೆ. ಇವರಿಗೆ ಮ್ಯಾಕ್ಸ್ ವೆಲ್, ಕರುಣ್ ನಾಯರ್, ಪೊರನ್ ಸಾಥ್ ನೀಡಬೇಕಿದೆ.IPL 2020 Kings 11 Punjab

ಪಂಜಾಬ್ ಬೌಲಿಂಗ್ ವಿಭಾಗದಲ್ಲಿ ಶೆಲ್ಡನ್ ಕಾಟ್ರೆಲ್ ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ರು. ಆದ್ರೆ ಮೊಹಮ್ಮದ್ ಶಮಿ, ರವಿ ಬಿಷ್ನೋಯಿ, ನೀಶಮ್, ಕೆ.ಗೌತಮ್ ದುಬಾರಿಯಾಗುತ್ತಿದ್ದು, ಸುಧಾರಿಸಬೇಕಿದೆ.

ಚೆನ್ನೈ ತಂಡದ್ದೇ ಮೇಲು ಗೈ

ಐಪಿಎಲ್ ಮೊದಲ ಆವೃತ್ತಿಯಿಂದ ಇಲ್ಲಿಯವರೆಗೆ ಈ ಎರಡು ತಂಡಗಳು 22 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ 9 ಪಂದ್ಯಗಳಲ್ಲಿ ಪಂಜಾಬ್ ಗೆಲುವು ಸಾಧಿಸಿದ್ರೆ, 13 ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಸಿಎಸ್ ಕೆ ಮೇಲುಗೈ ಸಾಧಿಸಿದೆ.

ದುಬೈ ಅಂಗಳದಲ್ಲಿ ಮ್ಯಾಚ್ ನಡೆಯುತ್ತಿರುವುದರಿಂದ ಮೊದಲು ಬ್ಯಾಟ್ ಮಾಡೋದು ಉತ್ತಮ.

Tags: chennai super kingscskDHONIIPL 2020k l rahulkings 11 punjabrahul
ShareTweetSendShare
Join us on:

Related Posts

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

ಮೇಲ್ಮನೆ ಕದನ…ಸೋಲು ಗೆಲುವಿನ ಲೆಕ್ಕಾಚಾರ..!

by admin
June 18, 2026
0

ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ ಏಳು ಸ್ಥಾನಗಳಿಗೆ ಎಂಟು ಅಭ್ಯರ್ಥಿಗಳು ಕಣಕ್ಕಿಳಿದಿರುವುದರಿಂದ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿದೆ. ಕಾಂಗ್ರೆಸ್ ಐದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ-ಜೆಡಿಎಸ್ ಮೈತ್ರಿ ಮೂರು...

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

by Shwetha
June 18, 2026
0

ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಸಮಯ ಪಾಲನೆ ಮತ್ತು ಶಿಸ್ತಿನ ಪರ್ವ ಆರಂಭವಾಗಲಿದೆ. ನೌಕರರು ಕಚೇರಿಗೆ ಬಾರದೆ ಅಥವಾ ತಡವಾಗಿ ಬಂದು ಹಾಜರಾತಿ ದಾಖಲಿಸುವ ಹಳೆಯ...

5 ರಾಜ್ಯಗಳಲ್ಲಿ ಅವಧಿಗೆ ಮುನ್ನ ಚುನಾವಣೆ ಇಲ್ಲ; ನಿಗದಿತ ವೇಳಾಪಟ್ಟಿಯಂತೆ ಮತದಾನ

5 ರಾಜ್ಯಗಳಲ್ಲಿ ಅವಧಿಗೆ ಮುನ್ನ ಚುನಾವಣೆ ಇಲ್ಲ; ನಿಗದಿತ ವೇಳಾಪಟ್ಟಿಯಂತೆ ಮತದಾನ

by Shwetha
June 18, 2026
0

ದೇಶದ ಐದು ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಹಾಗೂ ಗೋವಾ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಅವಧಿಗೆ ಮುನ್ನ ನಡೆಯಲಿವೆ ಎಂಬ ಊಹಾಪೋಹಗಳಿಗೆ ಕೇಂದ್ರ...

₹25,400 ಕೋಟಿ ಒಪ್ಪಂದ; ಪಿಜ್ಜಾ ಹಟ್ ವ್ಯವಹಾರ ಮಾರಾಟಕ್ಕೆ ನಿರ್ಧಾರ

₹25,400 ಕೋಟಿ ಒಪ್ಪಂದ; ಪಿಜ್ಜಾ ಹಟ್ ವ್ಯವಹಾರ ಮಾರಾಟಕ್ಕೆ ನಿರ್ಧಾರ

by Shwetha
June 18, 2026
0

ಜಾಗತಿಕ ಆಹಾರ ಉದ್ಯಮದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಯಮ್.ಕಾಮ್ ತನ್ನ ಅಧೀನದಲ್ಲಿರುವ ಪ್ರಸಿದ್ಧ ಪಿಜ್ಜಾ ಹಟ್ ವ್ಯವಹಾರದ ಕೆಲವು ಭಾಗಗಳನ್ನು ಎರಡು ಪ್ರತ್ಯೇಕ ಒಪ್ಪಂದಗಳ ಮೂಲಕ ಒಟ್ಟು...

ಮುಂಬೈನಲ್ಲಿ ಕಣ್ಣೀರು ಬಿಡದಿಯಲ್ಲಿ ಮೌನ – ಡಿಕೆಶಿ ರಿಯಲ್ ಎಸ್ಟೇಟ್ ಮಾಫಿಯಾಗೆ 2 ಲಕ್ಷ ಮರಗಳು ಬಲಿ? : ರಾಹುಲ್ ಗಾಂಧಿಯ ಪರಿಸರ ಹೋರಾಟದ ಅಸಲಿ ಮುಖವಾಡ ಕಳಚಿದ ಅಶೋಕ್.

ಮುಂಬೈನಲ್ಲಿ ಕಣ್ಣೀರು ಬಿಡದಿಯಲ್ಲಿ ಮೌನ – ಡಿಕೆಶಿ ರಿಯಲ್ ಎಸ್ಟೇಟ್ ಮಾಫಿಯಾಗೆ 2 ಲಕ್ಷ ಮರಗಳು ಬಲಿ? : ರಾಹುಲ್ ಗಾಂಧಿಯ ಪರಿಸರ ಹೋರಾಟದ ಅಸಲಿ ಮುಖವಾಡ ಕಳಚಿದ ಅಶೋಕ್.

by Shwetha
June 18, 2026
0

ಬೆಂಗಳೂರು: ಬಿಡದಿ ಟೌನ್‌ಶಿಪ್‌ ಯೋಜನೆಯ ಹೆಸರಿನಲ್ಲಿ ಸಾವಿರಾರು ಎಕರೆ ಫಲವತ್ತಾದ ಭೂಮಿ ಮತ್ತು ಲಕ್ಷಾಂತರ ಮರಗಳನ್ನು ನಾಶಪಡಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನಸಭೆಯ ಪ್ರತಿಪಕ್ಷ ನಾಯಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram