ADVERTISEMENT
Friday, October 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಚಿನ್, ಗಂಗೂಲಿಗೆ ಅಡ್ಡಗಾಲು ಹಾಕಿರುವುದರ ಹಿಂದಿತ್ತು ದ್ರಾವಿಡ್ ದೂರದೃಷ್ಟಿ…!

admin by admin
June 29, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಸಚಿನ್, ಗಂಗೂಲಿಗೆ ಅಡ್ಡಗಾಲು ಹಾಕಿರುವುದರ ಹಿಂದಿತ್ತು ದ್ರಾವಿಡ್ ದೂರದೃಷ್ಟಿ…!

2007ರ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪ್ರಶಸ್ತಿ ಗೆದ್ದುಕೊಂಡಿತ್ತು. ಮಹೇಂದ್ರ ಸಿಂಗ್ ಧೋನಿಯವರ ಚೊಚ್ಚಲ ನಾಯಕತ್ವದಲ್ಲೇ ಟೀಮ್ ಇಂಡಿಯಾಗೆ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ಒಲಿದುಬಂತು. ಯುವ ಆಟಗಾರರ ದಂಡನ್ನು ಹೊಂದಿದ್ದ ಧೋನಿ ಪಡೆ ಪ್ರಶಸ್ತಿ ಗೆಲ್ಲುತ್ತೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ಆದ್ರೆ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿದ್ದ ಧೋನಿ ಬಾಯ್ಸ್ ಇತಿಹಾಸವನ್ನೇ ನಿರ್ಮಿಸಿದ್ದರು. ಇದು ಈಗ ಇತಿಹಾಸ
ಅಂದ ಹಾಗೇ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾದ ತ್ರಿಮೂರ್ತಿಗಳು ಆಡಿರಲಿಲ್ಲ. ಸಚಿನ್, ಸೌರವ್ ಮತ್ತು ದ್ರಾವಿಡ್ ತಂಡದಲ್ಲಿ ಇರಲಿಲ್ಲ. ಈ ನಡುವೆ ಕೆರೆಬಿಯನ್ ವಿಶ್ವಕಪ್ ಸೋಲು ಕೂಡ ಟೀಮ್ ಇಂಡಿಯಾದ ಹಿರಿಯ ಆಟಗಾರರ ಮೇಲೆ ಗಾಢವಾದ ಪರಿಣಾಮ ಬೀರಿತ್ತು. ಆದ್ರೂ ಸಚಿನ್, ಸೌರವ್, ದ್ರಾವಿಡ್ ತಂಡದಲ್ಲಿರಬೇಕಿತ್ತು ಎಂಬ ಭಾವನೆ ಕೂಡ ಮೂಡಿತ್ತು. ಆದ್ರೆ ಆಗೀನ ಆಯ್ಕೆ ಸಮಿತಿ ಹೊಸ ಪ್ರಯೋಗಕ್ಕೆ ಮುಂದಾಗಿತ್ತು. ಅಲ್ಲದೆ ಆ ಪ್ರಯೋಗದ ರೂವಾರಿ ರಾಹುಲ್ ದ್ರಾವಿಡ್ ಎಂಬುದು ಹಲವರಿಗೆ ಗೊತ್ತಿಲ್ಲ.
ಈ ವಿಚಾರವನ್ನು ಅಂದಿನ ಟೀಮ್ ಇಂಡಿಯಾದ ಮ್ಯಾನೇಜರ್ ಲಾಲ್‍ಚಂದ್ ರಜಪೂತ್ ಬಹಿರಂಗಗೊಳಿಸಿದ್ದಾರೆ. ಭವಿಷ್ಯದ ಟೀಮ್ ಇಂಡಿಯಾಗೆ ನೀಲ ನಕ್ಷೆ ರಚಿಸಿದ್ದು ಕೂಡ ರಾಹುಲ್ ದ್ರಾವಿಡ್. ವಿಪರ್ಯಾಸ ಅಂದ್ರೆ ರಾಹುಲ್ ದ್ರಾವಿಡ್ 2011ರ ವಿಶ್ವಕಪ್ ಗೆಲುವಿನ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲು ವಿಫಲರಾಗಿರುವುದು.
ಅಂದ ಹಾಗೇ, ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಸಚಿನ್, ಗಂಗೂಲಿಗೆ ಆಡುವ ಆಸೆ ಇತ್ತು. ಆದ್ರೆ ಅವರ ಆಸೆಯನ್ನು ಭಗ್ನಗೊಳಿಸಿದ್ದು ರಾಹುಲ್ ದ್ರಾವಿಡ್.
ಹೌದು. ರಾಹುಲ್ ದ್ರಾವಿಡ್, ಸಚಿನ್ ಮತ್ತು ಗಂಗೂಲಿಯವರ ಬಳಿ ಟಿ-ಟ್ವೆಂಟಿ ವಿಶ್ವಕಪ್ ಆಡುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದರಂತೆ. ಯುವ ಆಟಗಾರರಿಗೆ ಅವಕಾಶ ನೀಡೋಣ ಅನ್ನೋ ಅಭಿಪ್ರಾಯವನ್ನು ದ್ರಾವಿಡ್ ಅವರು ಸಚಿನ್ ಮತ್ತು ಗಂಗೂಲಿ ಬಳಿ ಹೇಳಿದ್ದರು ಅಂತ ರಜಪೂತ್ ಹೇಳಿಕೊಂಡಿದ್ದಾರೆ.
ಇನ್ನು ಸಚಿನ್‍ಗೆ ವಿಶ್ವಕಪ್ ಗೆಲ್ಲಲು ಆಗಲಿಲ್ಲ ಅನ್ನೋ ಕೊರಗು ಕಾಡುತ್ತನೇ ಇತ್ತು. ಹಲವಾರು ವರ್ಷಗಳಿಂದ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿ ಹಲವಾರು ದಾಖಲೆಗಳನ್ನು ಮಾಡಿದ್ರೂ ಸಚಿನ್‍ಗೆ ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ ಅನ್ನೋ ನೋವು ಕೂಡ ಇತ್ತು. ಇದನ್ನು ಸಚಿನ್ ಆಗಾಗ ನನ್ನ ಬಳಿ ಹೇಳಿಕೊಳ್ಳುತ್ತಿದ್ದರು. ಆದ್ರೆ 2011ರ ವಿಶ್ವಕಪ್ ಗೆಲ್ಲುವ ಮೂಲಕ ಸಚಿನ್ ತನ್ನ ಆಸೆಯನ್ನು ಈಡೇರಿಸಿಕೊಂಡ್ರು ಎಂದು ಲಾಲ್‍ಚಂದ್ ರಜಪೂತ್ ಹೇಳಿದ್ದಾರೆ.

Related posts

ಅಂದು ಗುರು ಇಂದು ವಿರೋಧಿ ಸುಧಾಕರ್ ಮತ್ತು ಪ್ರದೀಪ್ ಈಶ್ವರ್ ನಡುವೆ ಶುರುವಾಯ್ತು ರಾಜಕೀಯ ಕೆಸರೆರಚಾಟ

ಅಂದು ಗುರು ಇಂದು ವಿರೋಧಿ ಸುಧಾಕರ್ ಮತ್ತು ಪ್ರದೀಪ್ ಈಶ್ವರ್ ನಡುವೆ ಶುರುವಾಯ್ತು ರಾಜಕೀಯ ಕೆಸರೆರಚಾಟ

October 2, 2026
ಚಿನ್ನದ ಪದಕ ಗೆದ್ದರೂ ಅಭಿನಂದಿಸುವ ಸೌಜನ್ಯ ತೋರದ ಕರ್ನಾಟಕ ಸರ್ಕಾರ:ಅಪ್ಪಟ ಕನ್ನಡತಿ ಪೂವಮ್ಮಗೆ ರಾಜ್ಯದಲ್ಲಿ ಸಿಗದ ಮನ್ನಣೆ- ಚಿನ್ನ ಗೆದ್ದ ಸಾಧಕಿಯನ್ನು ಅಭಿನಂದಿಸದ ಸರ್ಕಾರದ ವಿರುದ್ಧ ಕ್ರೀಡಾ ಪ್ರೇಮಿಗಳ ಆಕ್ರೋಶ

ಚಿನ್ನದ ಪದಕ ಗೆದ್ದರೂ ಅಭಿನಂದಿಸುವ ಸೌಜನ್ಯ ತೋರದ ಕರ್ನಾಟಕ ಸರ್ಕಾರ:ಅಪ್ಪಟ ಕನ್ನಡತಿ ಪೂವಮ್ಮಗೆ ರಾಜ್ಯದಲ್ಲಿ ಸಿಗದ ಮನ್ನಣೆ- ಚಿನ್ನ ಗೆದ್ದ ಸಾಧಕಿಯನ್ನು ಅಭಿನಂದಿಸದ ಸರ್ಕಾರದ ವಿರುದ್ಧ ಕ್ರೀಡಾ ಪ್ರೇಮಿಗಳ ಆಕ್ರೋಶ

October 2, 2026

2007ರ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ನಾನು ಟೀಮ್ ಇಂಡಿಯಾದ ಮ್ಯಾನೇಜರ್ ಆಗಿದ್ದೆ. ಇದೊಂದು ದೊಡ್ಡ ಸವಾಲಿನ ಕೆಲಸವಾಗಿತ್ತು. ಯಾಕಂದ್ರೆ ನಮ್ಮದು ಯುವ ತಂಡ. ತಂಡದಲ್ಲಿ ಕೆಲವೊಂದು ಹಿರಿಯ ಆಟಗಾರರು ಇದ್ರು. ನನಗೆ ಒಂದು ಉತ್ತಮ ಅವಕಾಶ ಸಿಕ್ಕಿತ್ತು. ತಂಡಕ್ಕೆ ಕೋಚ್ ಆಗಿ ಕೆಲಸ ಮಾಡೋದು. ಹಾಗೇ ಧೋನಿಯ ಚೊಚ್ಚಲ ನಾಯಕತ್ವದ ತಂಡಕ್ಕೂ ಕೋಚ್ ಆಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತ್ತು ಎಂದು 13 ವರ್ಷಗಳ ಹಿಂದಿನ ಘಟನೆಯನ್ನು ರಜಪೂತ್ ಅವರು ನೆನಪಿಸಿಕೊಂಡ್ರು.
ಇನ್ನು ತಂಡದ ಡ್ರೆಸಿಂಗ್ ರೂಂನ ವಾತಾವರಣ ತುಂಬಾನೇ ಚೆನ್ನಾಗಿತ್ತು. ನಾವು ನಿರ್ದಿಷ್ಟವಾದ ಗುರಿಯನ್ನು ಹೊಂದಿದ್ದೇವು. ನಾವು ಟೆನ್ಷನ್‍ಗೆ ಒಳಪಡಬಾರದು. ನಾವು ಟೆನ್ಷನ್ ನೀಡಬೇಕು. ಇದು ತಂಡದ ಮುಖ್ಯ ಉದ್ದೇಶವಾಗಿತ್ತು. ನಾವು ನಮ್ಮ ಸಾಮಥ್ರ್ಯದ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದೇವು. ಬೇರೆಯವರು ಏನು ಹೇಳ್ತಾರೆ ಅನ್ನೋದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಹೀಗೆ ಟಿ-ಟ್ವೆಂಟಿ ವಿಶ್ವಕಪ್ ಗೆಲುವು ಹಲವು ಬದಲಾವಣೆಗಳಿಗೆ ಕಾರಣವಾಗಿತ್ತು. ಅಲ್ಲದೆ ಕೆಲವು ಹಿರಿಯ ಆಟಗಾರರು ತಂಡದಲ್ಲಿ ಸ್ಥಾನ ಪಡೆಯಲು ಪರದಾಟ ನಡೆಸಬೇಕಾಯ್ತು. ಆದ್ರೆ ಯುವ ಹಾಗೂ ಹಿರಿಯ ಆಟಗಾರರ ಹೊಂದಾಣಿಕೆಯಿಂದ ಟೀಮ್ ಇಂಡಿಯಾ ಬಲಿಷ್ಠ ತಂಡವಾಗಿ ರೂಪುಗೊಳ್ಳಲು ಸಾಧ್ಯವಾಯ್ತು ಅಂತಾರೆ ಲಾಲ್‍ಚಂದ್ ರಜಪೂತ್.

Tags: Rahul DravidSachin TendulkarSourav Ganguly
ShareTweetSendShare
Join us on:

Related Posts

ಅಂದು ಗುರು ಇಂದು ವಿರೋಧಿ ಸುಧಾಕರ್ ಮತ್ತು ಪ್ರದೀಪ್ ಈಶ್ವರ್ ನಡುವೆ ಶುರುವಾಯ್ತು ರಾಜಕೀಯ ಕೆಸರೆರಚಾಟ

ಅಂದು ಗುರು ಇಂದು ವಿರೋಧಿ ಸುಧಾಕರ್ ಮತ್ತು ಪ್ರದೀಪ್ ಈಶ್ವರ್ ನಡುವೆ ಶುರುವಾಯ್ತು ರಾಜಕೀಯ ಕೆಸರೆರಚಾಟ

by Shwetha
October 2, 2026
0

ಚಿಕ್ಕಬಳ್ಳಾಪುರ: ರಾಜಕಾರಣದಲ್ಲಿ ಶಾಶ್ವತ ಶತ್ರುಗಳೂ ಇಲ್ಲ ಮಿತ್ರರೂ ಇಲ್ಲ ಎಂಬ ಮಾತಿಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಈಗ ಸಾಕ್ಷಿಯಾಗುತ್ತಿದೆ. ಚುನಾವಣೆ ಮುಗಿದ ಹೊಸತರಲ್ಲಿ ಅಣ್ಣ... ಗುರು... ಎಂದು...

ಚಿನ್ನದ ಪದಕ ಗೆದ್ದರೂ ಅಭಿನಂದಿಸುವ ಸೌಜನ್ಯ ತೋರದ ಕರ್ನಾಟಕ ಸರ್ಕಾರ:ಅಪ್ಪಟ ಕನ್ನಡತಿ ಪೂವಮ್ಮಗೆ ರಾಜ್ಯದಲ್ಲಿ ಸಿಗದ ಮನ್ನಣೆ- ಚಿನ್ನ ಗೆದ್ದ ಸಾಧಕಿಯನ್ನು ಅಭಿನಂದಿಸದ ಸರ್ಕಾರದ ವಿರುದ್ಧ ಕ್ರೀಡಾ ಪ್ರೇಮಿಗಳ ಆಕ್ರೋಶ

ಚಿನ್ನದ ಪದಕ ಗೆದ್ದರೂ ಅಭಿನಂದಿಸುವ ಸೌಜನ್ಯ ತೋರದ ಕರ್ನಾಟಕ ಸರ್ಕಾರ:ಅಪ್ಪಟ ಕನ್ನಡತಿ ಪೂವಮ್ಮಗೆ ರಾಜ್ಯದಲ್ಲಿ ಸಿಗದ ಮನ್ನಣೆ- ಚಿನ್ನ ಗೆದ್ದ ಸಾಧಕಿಯನ್ನು ಅಭಿನಂದಿಸದ ಸರ್ಕಾರದ ವಿರುದ್ಧ ಕ್ರೀಡಾ ಪ್ರೇಮಿಗಳ ಆಕ್ರೋಶ

by Shwetha
October 2, 2026
0

ಮಂಗಳೂರು: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಅಪ್ಪಟ ಕನ್ನಡತಿ ಎಂ ಆರ್ ಪೂವಮ್ಮ ಅವರ ಅಪ್ರತಿಮ ಸಾಧನೆಯನ್ನು ರಾಜ್ಯ...

ಸಬ್ಸಿಡಿ ಎಲ್‌ಪಿಜಿಗೆ ಇಂದಿನಿಂದ ಆಧಾರ್ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ?

ಸಬ್ಸಿಡಿ ಎಲ್‌ಪಿಜಿಗೆ ಇಂದಿನಿಂದ ಆಧಾರ್ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ?

by Shwetha
October 2, 2026
0

2026ರ ಅಕ್ಟೋಬರ್ 1ರಿಂದ ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್ ಪಡೆಯಲು ಬಯೋಮೆಟ್ರಿಕ್ ಆಧಾರ್ ದೃಢೀಕರಣ (BAA) ಕಡ್ಡಾಯವಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಇ-ಕೆವೈಸಿ ಪೂರ್ಣಗೊಳಿಸದ ಗ್ರಾಹಕರು ಸಿಲಿಂಡರ್...

ನೀಲಿ ಶಾಲು ಸಮಾನತೆಯ ಸಂಕೇತ ನಾನು ದಲಿತ ವಿರೋಧಿಯಲ್ಲ: ದಲಿತ ವಿರೋಧಿ ಎಂಬ ಟೀಕೆಗೆ ಪ್ರತಾಪ್ ಸಿಂಹ ಖಡಕ್ ಕೌಂಟರ್

ಪ್ರಕಾಶ್ ರಾಜ್ ಮತ್ತು ಪ್ರದೀಪ್ ಈಶ್ವರ್ ಇಬ್ಬರೂ ಹುಚ್ಚರು: ಹುಚ್ಚರನ್ನ ಯಾರಾದ್ರೂ ಜೈಲಿಗೆ ಹಾಕ್ತಾರಾ ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ

by Shwetha
October 2, 2026
0

ಮೈಸೂರು: ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಇಂದು ತಮ್ಮ ವಿರೋಧಿಗಳ ವಿರುದ್ಧ ಚಾಟಿ ಬೀಸಿದ್ದು, ನಟ ಪ್ರಕಾಶ್ ರಾಜ್ ಮತ್ತು ಶಾಸಕ ಪ್ರದೀಪ್ ಈಶ್ವರ್...

ವಿಧಾನಸೌಧದ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’: ಕರವೇ ವಿರೋಧ

ವಿಧಾನಸೌಧದ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’: ಕರವೇ ವಿರೋಧ

by Shwetha
October 2, 2026
0

ವಿಧಾನಸೌಧದ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ ಆಯೋಜಿಸಲು ಮುಂದಾಗಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತೀವ್ರ ವಿರೋಧ ವ್ಯಕ್ತಪಡಿಸಿದೆ.ಈ ಕುರಿತು ಸಾಮಾಜಿಕ ಜಾಲತಾಣ Xನಲ್ಲಿ ಪ್ರತಿಕ್ರಿಯಿಸಿರುವ ಕರವೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram