ಚಿತ್ರದುರ್ಗ: ದರ್ಶನ್ ಮತ್ತು ಗ್ಯಾಂಗ್ ನಿಂದ ಹತ್ಯೆಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ನಿವಾಸಕ್ಕೆ ಫಿಲ್ಮ್ ಚೆಂಬರ್ (Karnataka Film Chamber) ತಂಡ ಭೇಟಿ ನೀಡಿ, ಸಾಂತ್ವನ ಹೇಳಿ ಪರಿಹಾರ ವಿತರಿಸಿತು.
ಈ ವೇಳೆ ವಾಣಿಜ್ಯ ಮಂಡಳಿಯಿಂದ 5 ಲಕ್ಷ ರೂ. ಪರಿಹಾರ ನೀಡಲಾಯಿತು. ಮುಂದೆ ಕುಟುಂಬಕ್ಕೆ ಯಾವ ರೀತಿಯ ಸಹಾಯ ಅವಸ್ಯವಿದೆಯೋ ಆ ರೀತಿ ಶಾಶ್ವತ ಪರಿಹಾರ ನೀಡುವುದಾಗಿ ಭರವಸೆ ನೀಡಿತು.
ಈ ವೇಳೆ ಮಾತನಾಡಿದ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು (Sa Ra Govindu), ತಪ್ಪು ಮಾಡುವುದು ಮನುಷ್ಯನ ಸಹಜ ಗುಣ. ಆದರೆ, ತಪ್ಪು ಈ ರೀತಿ ನಡೆಯಬಾರದು. ಇದಕ್ಕೆ ಚಿತ್ರರಂಗ ಹೊಣೆ ಅಲ್ಲ ಅವರೊಬ್ಬರಿಂದ ನಾವೆಲ್ಲ ತಲೆ ತಗ್ಗಿಸುವ ಕೆಲಸವಾಗಿದೆ ಎಂದು ಕಿಡಿಕಾರಿದರು.
ಜನರು ಸಿನಿಮಾ ನಟರೆಂದರೆ ಗೌರವ ನೀಡುತ್ತಿದ್ದರು. ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್ ಅವರ ಹೆಸರಿಗೂ ಅಷ್ಟೇ ಗೌರವ ಕೊಡುತ್ತಿದ್ದರು. ಆದ್ರೆ ಇತ್ತೀಚೆಗೆ ಯುವ ನಟರಿಂದ ಚಿತ್ರರಂಗ ದಾರಿ ತಪ್ಪುತ್ತಿದೆ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ತನಿಖೆ ನಡಿಸುತ್ತಿದೆ. ಆ ತಾಯಿ ಕೇಳಿಕೊಳ್ಳುತ್ತಿರೋದು ಒಂದೇ ತಪ್ಪು ಮಾಡಿವರಿಗೆ ಶಿಕ್ಷೆ ನೀಡಬೇಕು ಅಂತ. ಖಂಡಿತ ಅದು ಆಗುತ್ತದೆ. ನಾವು ಇಂದು ಆ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೇವೆ ಎಂದರು.
ಫಿಲ್ಮ್ ಚೆಂಬರ್ ಅಧ್ಯಕ್ಷ ಎನ್.ಎಂ ಸುರೇಶ್ (NM Suresh) ಮಾತನಾಡಿ, ದರ್ಶನ್ ಬ್ಯಾನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ನಿರ್ಧಾರ ನಾವು ಮಾಡೊಕೆ ಆಗಲ್ಲ. ಕಲಾವಿದರ ಸಂಘ ನಿರ್ಮಾಪಕರ ಸಂಘ ಕೂಡ ಇದೆ. ಅಲ್ಲಿ ಸಭೆ ನಡೆದ ನಂತರ ನಿರ್ಧಾರ ಕೈಗೊಳ್ಳಲಾಗುತ್ತದೆ. ಹಿಂದೆಯೂ ರಾಜಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಅಂಬರೀಶ್ ಗೂ ಫ್ಯಾನ್ಸ್ ಇದ್ದರು. ಆದರೆ, ಇತ್ತೀಚಿನ ಪ್ಯಾನ್ಸ್ ಪ್ರಚೋದನೆ ಒಳಗಾಗುತ್ತಿದ್ದಾರೆ. ಈ ರೀತಿ ಮಾಡಬಾರದು ಎಂದು ಹೇಳಿದರು.