ಬೆಂಗಳೂರಿನಲ್ಲಿ 1 ರಿಂದ 9 ಶಾಲೆಗಳು ಓಪನ್
ಬೆಂಗಳೂರು : ನಿರೀಕ್ಷೆಯಂತೆ ಸೋಮವಾರದಿಂದ ಬೆಂಗಳೂರಿನಲ್ಲಿ ಒಂದರಿಂದ ಒಂಭತ್ತರವರೆಗಿನ ಶಾಲೆಗಳು ತೆರೆಯುವುದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. 1 to 9 schools open in Bangalore
ಕೊರೊನಾ ನಿಯಂತ್ರಣಕ್ಕೆ ಜಾರಿಯಲ್ಲಿದ್ದ ಶೇ 50ರಷ್ಟು ರೂಲ್ಸ್ಗೆ ಎಲ್ಲೆಡೆಯಿಂದ ವಿರೋಧ ವ್ಯಕ್ತವಾಗಿತ್ತು. ಮುಖ್ಯವಾಗಿ 50 : 50 ರೂಲ್ಸ್ ಸಡಿಲಿಕೆ ಮಾಡುವಂತೆ ಹೋಟೆಲ್ ಉದ್ಯಮ, ಮದ್ಯ ಮಾರಾಟ ಉದ್ಯಮ, ಸಿನಿಮಾ, ನಾಟಕ ರಂಗಗಳಿಂದ ಬೇಡಿಕೆಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ ಸಡಿಲಿಕೆ, ಬೆಂಗಳೂರಲ್ಲಿ ಶಾಲಾರಂಭ ಸೇರಿದಂತೆ ವಿವಿಧ ವಿಷಯಗಳ ಕುರಿತಾಗಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ಸಭೆ ನಡೆಯಿತು. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆ ಸಚಿವರು, ಹಿರಿಯ ಅಧಿಕಾರಿಗಳು, ಕೋವಿಡ್ ತಜ್ಞರು ಭಾಗವಹಿಸಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಬಿ.ಸಿ.ನಾಗೇಶ್ ಅವರು, ಬೆಂಗಳೂರಿನಲ್ಲಿ 1 ರಿಂದ 9ನೇ ತರಗತಿ ಶಾಲೆಗಳು ಸೋಮವಾರದಿಂದ ಆರಂಭವಾಗಲಿವೆ ಎಂದು ಸ್ಪಷ್ಟಪಸಿದರು. ಶಾಲೆಗಳಲ್ಲಿ ಕೊರೊನಾ ನಿಯಮಾವಳಿಗಳನ್ನು ಪಾಲಿಸುತ್ತಾ ಶಾಲೆಗಳಲ್ಲಿ ತರಗತಿಗಳನ್ನು ನಡೆಸಬಹುದು ಎಂದರು.
ಅಲ್ಲದೇ ಶಾಲೆಯ ಯಾವುದಾರೂ ತರಗತಿಯ ವಿದ್ಯಾರ್ಥಿಯಲ್ಲಿ ಸೋಂಕು ಕಾಣಿಸಿಕೊಂಡರೇ ಆ ತರಗತಿಗೆ ಮಾತ್ರ ರಜೆ ನೀಡಲಾಗುತ್ತದೆ. ಉಳಿದಂತೆ ಶಾಲೆ ನಡೆಯುತ್ತದೆ. ಇನ್ನು ಎಷ್ಟು ದಿನ ಶಾಲೆಗಳಿಗೆ ರಜೆ ನೀಡಬೇಕು ಎನ್ನುವುದು ಸ್ಥಳೀಯ ಜಿಲ್ಲಾಧಿಕಾರಿಗಳು ನಿರ್ಧಾರ ಮಾಡುತ್ತಾರೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.