ವಿಶ್ವದಲ್ಲಿ ಅನೇಕ ವಿಭಿನ್ನ ರಾಷ್ಟ್ರಗಳಿವೆ. ಕೆಲವೊಂದು ಅತ್ಯಂತ ಸುಂದರ ದೇಶಗಳಾದ್ರೆ ಮತ್ತೆ ಕೆಲವು ತುಂಬಾನೆ ಅಪಾಯಕಾರಿ.. ನಾವು ಇವತ್ತು ವಿಶ್ವದ 10 ಅತ್ಯಂತ ಅಪಾಯಕಾರಿ ರಾಷ್ಟ್ರಗಳ ಬಗ್ಗೆ ತಿಳಿಯೋಣ..
- ಉತ್ತರ ಕೊರಿಯಾ
ಅಪಯಾಕಾರಿ ರಾಷ್ಟ್ರಗಳ ಬಗ್ಗೆ ಮಾತನಾಡ್ತಿದ್ದೀವಿ ಅಂದ್ರೆ ಅಲ್ಲಿ ಉತ್ತರ ಕೊರಿಯಾ ಇರಲೇಬೇಕಲ್ವ…!
ನಾರ್ತ್ ಕೊರಿಯಾದಲ್ಲಿ ಹುಚ್ಚನ ಸಾಮ್ರಾಜ್ಯವಿದೆ.. ಹುಚ್ಚು ದೊರೆ ಕಿಮ್ ನ ಆಡಳಿತದಲ್ಲಿ ಸಿಲುಕಿ ಅಲ್ಲಿನ ಜನರು ಒದ್ದಾಡುತ್ತಿದ್ದಾರೆ. ಈ ದೇಶದಲ್ಲಿನ ಜನರಿಗೆ ತಮಗಿಚ್ಛೆಯಂತೆ ನಗಲು , ಅಳಲು , ಓಡಾಲು , ಬೇಕಾದ ಕೆಲಸಕ್ಕೆ ಸೇರುವ ಸ್ವಾತಂತ್ರ್ಯವೂ ಇಲ್ಲ. ಇನ್ನೂ ಇಲ್ಲಿ ಪ್ರವಾಸಿಗರು ಏನ್ ಮಾಡ್ತಾರೆ..
ಈ ದೇಶದಲ್ಲಿ ಹುಚ್ಚ ಕಿಮ್ ಜಾನ್ ಉನ್ ನ ಭಯದಿಂದ ಯಾವ ಪ್ರವಾಸಿಗರು ಬರಲು ಇಚ್ಛಿಸುವುದಿಲ್ಲ. ಒಂದು ವೇಳೆ ಬೆರಳೆಣಿಕೆಯಷ್ಟು ಪ್ರವಾಸಕ್ಕೆ ಬಂದ್ರು ಅವರನ್ನೂ ಕೈದಿಯ ರೀತಿಯಲ್ಲೇ ಟ್ರಿಟ್ ಮಾಡಲುತ್ತದೆ.. ಈ ದೇಶದಲ್ಲಿ ಪ್ರವಾಸಿಗರು ಒಬ್ಬರೇ ಎಲ್ಲೂ ಓಡಾಡುವಂತಿಲ್ಲ. ಅವರ ಜೊತೆಗೆ ಗೈಡ್ ಗಳನ್ನ ನೀಡಲಾಗಿರುತ್ತೆ.. ತಮ್ಮದೇ ದೇಶದ ಒಂದು ಸಿಟಿಯಿಂದ ಮತ್ತೊಂದು ನಗರಕ್ಕೆ ಹೋಗಲು ಕಿಮ್ ನ ಅನುಮತಿ ಪಡೆಯುವ ಹಣೆಬಹರಹ ದೇಶದ ಜನರದ್ದಾಗಿದೆ.
- ಅಫ್ಗಾನಿಸ್ತಾನ್
ಅಫ್ಗಾನಿಸ್ತಾನದಲ್ಲಿನ ಆಂತರಿಕ ಯುದ್ಧಗಳ ಕಾರಣದಿಂದಾಗಿ ಅಲ್ಲಿನ ಜನರಿಗೆ ಸದಾ ಜೀವ ಭಯವಿರುತ್ತದೆ.. ತಾಲಿಬಾನ್ ಉಗ್ರ ಅಟ್ಟಹಾಸದಿಂದ ಇಲ್ಲಿನ ಜನರ ಜೀವನ ಶೋಚನೀಯವಾಗಿದೆ. ಅಫ್ಗಾನ್ ನ ರಾಜಧಾನಿ ಕಾಬುಲ್ ಅನ್ನ ವಿಶ್ವದ ಅತಿ ಹೆಚ್ಚು ಆತಂಕಕಾರಿ ನಗರ ಎಂದೇ ಬಿಂಬಿಸಲಾಗಿದೆ.
- ಸುಡಾನ್
ಈ ದೇಶದಲ್ಲಿ ಬಹಿರಂಗವಾಗಿಯೇ ಅಪರಾಧ ಪ್ರಕರಣಗಳು ನಡೆಯುತ್ತಲೇ ಇರುತ್ತವೆ.. ಒಂದು ಮಾತಲ್ಲಿ ಹೇಳೋದಾದ್ರೆ ಇಲ್ಲಿ ಮನುಷ್ಯರ ಜೀವಕ್ಕೆ ವಾಲ್ಯೂ ಇರೋದಿಲ್ಲ ಎಂದ್ರು ತಪ್ಪಾಗೋದಿಲ್ಲ. ಕಿತ್ತು ತಿನ್ನುವ ಬಡತನ.. ಈ ದೇಶದಲ್ಲಿ ಯಾವುದೇ ಮಹಿಳೆಯರು , ಹೆಣ್ಕಕ್ಕಳನ್ನ ಚುಡಾಯಿಸುವುದು , ಕಿರುಕುಳ ನೀಡುವುದು ಇಂತಹ ಪ್ರಕರಣಗಳು ಸಾಮಾನ್ಯವಾಗಿ ಕಂಡುಬರುತ್ತೆ. ಇಲ್ಲಿನ ಜನ ತಮ್ಮದೇ ಸರ್ಕಾರದ ಅಧ್ಯಕ್ಷನ ವಿರುದ್ಧ ಪ್ರತಿಭಟನೆಗಳನ್ನ ನಡೆಸತಾಯಿದ್ದಾರೆ. ಈ ದೇಶದಲ್ಲಿ ವಿದೇಶಿಗರ ಕಿಡ್ನಾಪ್ , ಹಣ ವಸೂಲಿ , ಕೊಲೆ ಪ್ರಕರಣಗಳು ಹೆಚ್ಚಾಗಿ ದಾಖಲಾಗಿವೆ.. ಮತ್ತು ಅನೇಕ ಆತಂಕಕಾರಿ ಸಂಘಟನೆಗಳು ಇವೆ.
- ಯೆಮನ್
ಸೌದಿ ಅರೆಬಿಯಾ ,ಯೆಮನ್ ನಡುವಿನ ಯುದ್ಧದಿಂದಾಗಿ ಇಲ್ಲಿನ ವಾತಾವರಣ ಸದಾ ಆತಂಕಕಾರಿಯಾಗಿಯೇ ಇರುತ್ತೆ.. ಇಲ್ಲಿನ ಜನ ನಿತ್ಯ ಪ್ರಾಣ ಭಯದಲ್ಲೇ ಬದುಕುತ್ತಿದ್ದಾರೆ. ಇಲ್ಲಿನ ರಾಜದಾನಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನ ಆತಂಕಿ ಸಂಘಟನೆ ತನ್ನ ಹಿಡಿತಕ್ಕೆ ತೆಗೆದುಕೊಮಡಿದೆ. ಇಲ್ಲಿ ಬಾಲಕಾರ್ಮಿಕ ,, ಮಹಿಳೆಯರ ಮೇಲೆ ಹೆಚ್ಚಿನ ದೌರ್ಜನ್ಯ ಪ್ರಕರಣಗಳು ಸರ್ವೇ ಸಾಮಾನ್ಯವಾಗಿಬಿಟ್ಟಿದೆ.. ಇಲ್ಲಿನ ಜನರಿಗೆ ಯಾವಾಗ ಹೇಗೆ ಸಾವು ಬರುತ್ತೇ ಅನ್ನೋದು ಸಹ ಗೊತ್ತಾಗದಂತಹ ಪರಿಸ್ಥಿತಿಯಿದೆ.. ಜನರ ಮನೆಗಳಿಗೆ ನುಗ್ಗಿ ಲೂಟಿ ದರೋಡೆ ಮಾಡುವ ಪ್ರಕರಣಗಳು ಈ ದೇಶದಲ್ಲಿ ಸಮಾನ್ಯ ಎಂಬಂತಾಗಿದೆ.. ಅಲ್ಲದೇ ಈ ದೇಶ ಅತಿ ಶೀಘ್ರದಲ್ಲೇ ಅಂತ್ಯ ಕಾಣಲಿದೆ ಅನ್ನೋದನ್ನ ಹಲವು ವಿಶ್ಲೇಷಣೆಗಳು ಉಲ್ಲೇಖಿಸಿವೆ. ವಿಶ್ವದ ಅತಿ ಬಡರಾಷ್ಟ್ರಗಳಲ್ಲೂ ಈ ದೇಶ ಒಂದು.
- ಲಿಬ್ಯಾ
ಆತಂಕಕಾರಿ ಸಂಘಟನೆಗಳು , ಹಾಡಹಗಲೇ ಲೂಟಿ , ದರೋಡೆ , ಮಹಿಳೆಯರಿಗೆ ಕಿರುಕುಳ , ಇದೆಲ್ಲಾ ಈ ದೇಶದಲ್ಲಿ ಕಾಮನ್.. ಇನ್ ಫ್ಯಾಕ್ಟ್ ಈ ದೇಶಕ್ಕೆ ಯಾವ ಪ್ರವಾಸಿಗರು ಸಹ ಬರುವುದಕ್ಕೆ ಇಷ್ಟಪಡುವುದಿಲ್ಲ. ಇಲ್ಲಿನ ಲೋಕಲ್ ಆತಂಕಾರಿ ಸಂಘಟನೆಗಳು ಜನರನ್ನ ಅಪಹರಿಸಿ ಅವರನ್ನ ಗುಲಾಮರನ್ನ ಮಾಡಿಕೊಂಡು ಅವರಿಂದ ಅನೇಕ ಕೆಲಸಗಳನ್ನ ಮಾಡಿಸಿಕೊಳ್ಳಲಾಗುತ್ತೆ. ಅಷ್ಟೇ ಅಲ್ಲದೇ ಧರ್ಮದ ಹೆಸರಲ್ಲಿ ಜನರನ್ನ ಪ್ರಚೋದಿಸಿ ತಪ್ಪು ದಾರಿಗೆ ಎಳೆಯಲಾಗುತ್ತದೆ.. ಇನ್ನೂ ಪ್ರವಾಸಿಗರನ್ನೂ ಕೂಡ ಅಪಹರಣ ಮಾಡುವ 99 % ಸಾಧ್ಯತೆ ಇದೆ. ಅಲ್ಲದೇ ಇಲ್ಲಿ ಮನುಷ್ಯರ ಜೀವನಕ್ಕೆ ಯಾವುದೇ ವಾಲ್ಯೂ ಇಲ್ಲ ಎನ್ನಲಾಗಿದೆ.. ಸ್ವಾತಂತ್ರ್ಯ ಸಿಕ್ಕಿದ್ದರೂ ಆತಂಕಕಾರಿ ಸಂಘಟನೆಗಳ ಗುಲಾಮಗಿರಿಯಲ್ಲಿ ಜನ ಜೀವನ ಸಾಗಿಸುತ್ತಿದ್ದಾರೆ.
- ಸಿರಿಯಾ
ವಿಶ್ವದ ಅತ್ಯಂತ ಅಪಾಯಕಾರಿ ಸಂಘಟನೆ ISIS ಗೆ ಈ ದೇಶ ಮುಖ್ಯ ಅಡ್ಡ.. ಈ ಆತಂಕಕಾರಿ ಸಂಘಟನೆ ಇಡೀ ದೇಶವನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಯೋಜನೆಯಲ್ಲಿದೆ. ಇಲ್ಲಿ ಮಹಿಲೆಯರಿಗೆ ಸುರಕ್ಷತೆಯಿಲ್ಲ.. ಮಹಿಲೆಯರನ್ನ ಅಪಹರಸಿ ಅವರನ್ನ ಗುಲಾಮರನ್ನಾಗಿಸಿ , ಲೈಂಗಿಕವಾಗಿಯೂ ಬಳಸಿಕೊಳ್ಳುವುದು , ವೇಶ್ಯಾವಾಟಿಕೆ ನಡೆಸುವಂತಹ ಪ್ರಕರಣಗಳು ಹೆಚ್ಚು. ಈ ದೇಶದಲ್ಲಿ ಹೆಣ್ಣು ಮಕ್ಕಳನ್ನ ಮಾರಾಟ ಮಾಡಲಾಗುತ್ತದೆ. ಪ್ರವಾಸಿಗರಿಗೆ ಈ ದೇಶದಲ್ಲಿ 1 % ಸುರಕ್ಷತೆಯೂ ಇಲ್ಲ. ಈ ದೇಶದಲ್ಲಿ ಪ್ರವಾಸಿಗರು ಬಂದ್ರೂ ಅವರನ್ನ ಅಪಹರಿಸಿ ಅಂಗಾಗಗಳನ್ನ ಮಾರಾಟ ಮಾಡಿ ಸಾವಿನ ದವಡೆಗೆ ತಳ್ಲಲಾಗುತ್ತದೆ.
- ಸೋಮಾಲಿಯಾ
ಲೋಕಲ್ ಆತಂಕಕಾರಿಗಳ ಸಂಘಟನೆಗಳ ಆತಂಕದಲ್ಲಿಯೇ ಇಲ್ಲಿನ ಜನರು ದಿನಗಳೆಯುತ್ತಿದ್ದಾರೆ. ಬಹಿರಂಗವಾಗಿಯೇ ಇಲ್ಲಿ ಮಹಿಳೆಯರ ಜೊತೆ ಅಸಭ್ಯ ವರ್ತನೆ ಕಿರುಕುಳ ಇದೆಲ್ಲಾ ಇಲ್ಲಿ ಸಾಮಾನ್ಯ. ನಿರುದ್ಯೋಗ ಇಲ್ಲಿನ ಜನರನ್ನ ಲೂಟಿ ದರೋಡೆ ಮಾಡಿ ಕಿತ್ತು ತಿನ್ನುವ ಪರಿಸಸ್ಥಿತಿಗೆ ದೂಡಿದೆ. ವಿದೇಶದಿಂದ ದೇಣೆಗೆ ಸಿಕ್ರೂ ಇಲ್ಲಿನ ಜನರ ಸರ್ಕಾರವೇ ನುಂಗಿ ನೀರು ಕುಡಿಯುತ್ತೆ, ಇನ್ನೂ ಇಲ್ಲಿನ ಜನರ ಅಭಿವೃದ್ಧಿ ಎಲ್ಲಿಂದ ಸಾಧ್ಯವಾಗುತ್ತದೆ. ಹೀಗಾಗಿಯೇ ವಿದೇಶಗಳಿಂದ ಫಂಡ್ ಗಳನ್ನ ಬಂದ್ ಮಾಡಲಾಗಿದೆ.
- ಮೆಕ್ಸಿಕೋ
ನಾರ್ತ್ ಅಮೆರಿಕಾದ ಅತ್ಯಂತ ಅಪಾಯಕಾರಿ ದೇಶ ಮೆಕ್ಸಿಕೋ.. ಈ ದೇಶದಲ್ಲಿ ಮಾದಕ ವಸ್ತುಗಳ ಅನಧಿಕೃತ ಮಾರಾಟ ದಂಧೆಗಳು ನಡೆಯುತ್ತಲೇ ಇರುತ್ತವೆ. ಹಾಡಹಗಲೇ ಯಾರ ಮೇಲಾದ್ರೂ ಗುಂಡು ಹಾರಿಸುವುದು ಅಥವ ಪಿಸ್ತೂಲ್ ಬಂದೂಕುಗಳ ಖರೀದಿ ಈ ದೇಶದಲ್ಲಿ ಕಾಮನ್., ರಾತ್ರಿ 8 ಗಂಟೆಯ ನಂತರ ಮೆಕ್ಸಿಕೋ ನಗರದಲ್ಲಿ ಜನರು ಹೊರಗಡೆ ಓಡಾಡುವುದಕ್ಕೆ ದೈರ್ಯ ಮಾಡುವುದಿಲ್ಲ ಎನ್ನಲಾಗುತ್ತೆ. ರಾತ್ರಿ ಹೊರಗಡೆ ಓಡಾಡುವವರು ಮಾದಕ ವ್ಯಸನಿಗಳು ಅಥವ ಡ್ರಗ್ ಸಪ್ಲೈಯರ್ ಗಳೇ ಆಗಿರುತ್ತಾರೆ ಎಂದೂ ಸಹ ಹೇಳಲಾಗುತ್ತದೆ.
- ಪಾಕಿಸ್ತಾನ್
ಭಾರತದ ನೆರೆರಾಷ್ಟ್ರ … ಬದ್ಧ ವೈರಿ ದೇಶ ಚೀನಾದ ಕುಚುಕು ರಾಷ್ಟ್ರ ಪಾಕಿಸ್ತಾನದ ಪರಿಸ್ಥಿತಿ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ.. ಒಂದು ಕಡೆ ಕಡು ಬಡತನ.. ಮತ್ತೊಂದೆಡೆ ಈ ದೇಶ ಉಗ್ರರ ನೆಲೆಬೀಡು.. ಉಗ್ರರ ತವರು ಮನೆ.. ಇಲ್ಲಿ ಆತಂಕಾರಿಗಳದ್ದೇ ರಾಜಜಬಾರ ನಡಡೆಯುತ್ತೆ.
- ಇರಾಕ್
ಆತಂಕವಾದಿಗಳ ಸಮ್ರಾಜ್ಯದಿಂದ ಇಲ್ಲಿನ ಜನ ಕಂಗಾಲಾಗಿದ್ದಾರೆ, ಹಾಡುಹಗಲೇ ಲೂಟಿ , ದರೋಡೆಯಂತಹ ಪ್ರಕರಣಗಳು ಇಲ್ಲಿ ಕಾಮನ್. ಈ ದೇಶದ ಕಾನೂನು ದುರ್ಬಲವಾಗಿದ್ದು, ಮನುಷ್ಯರ ಪ್ರಾಣಕ್ಕೆ ಇಲ್ಲಿ ಯಾವುದೇ ವಾಲ್ಯೂ ಇಲ್ಲ ಅಂದ್ರೂ ತಪ್ಪಾದಿಲ್ಲ.. ಇಲ್ಲಿ ಯಾರು ಯಾರನ್ನ ಬೇಕಾದ್ರೂ ಕೊಲೆ ಮಾಡುದ್ರೂ ಆ ಪ್ರಕರಣ ಗಂಭೀರತೆ ಪಡೆದುಕೊಳ್ಳುವುದಿಲ್ಲ.