100 % ಫ್ಯಾಮಿಲಿ ಪೂರ್ತಿ ನೋಡ್ಲೇ ಬೇಕಾದ ಸಿನಿಮಾ “100”

1 min read

100 % ಫ್ಯಾಮಿಲಿ ಪೂರ್ತಿ ನೋಡ್ಲೇ ಬೇಕಾದ ಸಿನಿಮಾ “100”

100 % ಸಸ್ಪೆನ್ಸ್ ಥ್ರಿಲ್ಲಿಂಗ್ ನಿಂದ ಭರಪೂರ , ಅಧ್ಬುತ ಸಿನಿಮಾ

100 ಸಿನಿಮಾ ರಿವೀವ್..!

ರಮೇಶ್ ಅರವಿಂದ್ ಸಿನಿಮಾ ಅಂದ್ರೆ ಜನ ಹೊಸದೇನೋ ನಿರೀಕ್ಷೆ ಮಾಡಿಯೇ ಇರುತ್ತಾರೆ.. ಹಾಗೇ ರಮೇಶ್ ಅರವಿಂದ್ ಅವರು ಜನರ ನಿರೀಕ್ಷೆಯನ್ನ ರೀಚ್ ಮಾಡೋದ್ರಲ್ಲೂ ಯಾವತ್ತೂ ಹಿಂದೆ ಬಿದ್ದಿಲ್ಲ.. ಅದ್ರಲ್ಲೂ ಅವರದ್ದೇ ನಿರ್ದೇಶದ ಸಿನಿಮಾಗಳು ಅಂದ್ರೆ ಜನರ ನಿರೀಕ್ಷೆ ಮತ್ತಷ್ಟು ಹೆಚ್ಚೇ ಇರುತ್ತೆ..100 film

ಅದೇ ರೀತಿಯ ಎಲ್ಲಾ ಒಂದು ನಿರೀಕ್ಷೆ ಮುಟ್ಟಿರುವಂತಹ ಈಗಿನ ಜನರೇಷನ್ ನಲ್ಲಿ , ಹಾಟ್ ಟಾಪಿಕ್ ಆಗಿರುವ ನೈಜತೆ ಎಳೆಯನ್ನ ಇಟ್ಕೊಂಡು ರಮೇಶ್ ಅರವಿಂದ್ ಅವರು “100” ಸಿನಿಮಾವನ್ನ ಪ್ರೇಕ್ಷಕರ ಮುಂದೆ ತಂದಿದ್ದಾರೆ.. ಈ ಸಿನಿಮಾ ಮೂಲಕ ಈಗಿನ ಜನರೇಷನ್ ನಲ್ಲಿ ಯುವಕರು , ಮಕ್ಕಳು , ಟೀನೇಜರ್ಸ್ , ವಯಸ್ಕರೂ ಕೂಡ ಯಾವ ರೀತಿ ಸೋಷಿಯಲ್ ಮೀಡಿಯಾದಿಂದ ಸಮಸ್ಯೆಗೆ ಒಳಗಾಗ್ತಿದ್ದಾರೆ ಅನ್ನೋದನ್ನ ಬಹಳ ಅಚ್ಚುಕಟ್ಟಾಗಿ ಜನರಿಗೆ  ತೋರಿಸಲಾಗಿದೆ..

ರಮೇಶ್ ಅರವಿಂದ್  ಅವರ ನಿರ್ದೇಶಕ್ಕೆ 100 /100 ಮಾರ್ಕ್ಸ್ ಕೊಡಬೇಕು.. ಈ ಸಿನಿಮಾದ ಸ್ಕ್ರೀನ್ ಪ್ಲೇ ಅಂತೂ ನಿಕ್ಕೂ ಸಖತ್ತಾಗಿದೆ.. ಕ್ಷಣಕ್ಷಣಕ್ಕೂ ಥ್ರಿಲ್ ಹೆಚ್ಚಿಸೋ ಜೊತೆಗೆ ಮುಂದೇನೋ ಅನ್ನೋ ಕ್ಯೂರಿಯಾಸಿಟಿ ಕಾಡ್ತಿರುತ್ತೆ.. ಅಂದ್ಹಾಗೆ   ಈ ಸಿನಿಮಾ ತಮಿಳಿನ ತಿರುಟ್ಟೆ ಪಯಲೆ ರೀಮೇಕ್ ಆಗಿದೆ..    100 film

ರಚಿತಾ ರಾಮ್ ಅವರು ಮೊದಲ ಬಾರಿಗೇ ಯಾರಿಗೂ ನಾಯಕಿಯಾಗದೇ ಈ ಸಿನಿಮಾದಲ್ಲಿ ಒಬ್ಬ ಆದರ್ಶ ಹಾಗೂ ಅಣ್ಣನ ಪ್ರೀತಿಯ ತಂಗಿಯಾಗಿ ಕಾಣಿಸಿಕೊಂಡಿದ್ದಾರೆ.. ಈ ಸಿನಿಮಾದಲ್ಲಿ ರಚ್ಚು ಒಂದು ಒಳ್ಲೆಯ ರೋಲ್ ನಿಭಾಯಿಸಿದ್ದಾರೆ.. ಮತ್ತೊಂದ್ ಕಡೆ ನಟಿ ಪೂರ್ಣ ಅವರ ನಟನೆ ಬಗ್ಗೆಯೂ ನೋ ಕಮೆಂಟ್ಸ್.. ಒಬ್ಬ ಆದರ್ಶ ಪತ್ನಿ, ತಾಯಿ , ಸೊಸೆ , ಅತ್ತಿಗೆ ಪಾತ್ರದಲ್ಲಿ ಪೂರ್ಣ ತಮ್ಮ ಪಾತ್ರಕ್ಕೆ ಜೀವತುಂಬಿದ್ದಾರೆ..

ಡಾರ್ಕ್ ವೆಬ್ ನೇ ದುನಿಯಾ ಮಾಡಿಕೊಂಡು , ಸೋಷಿಯಲ್ ಮೀಡಿಯಾದಲ್ಲಿ ಹುಡುಗಿಯರನ್ನ ಪರಿಚಯ ಮಾಡಿಕೊಂಡು , ಅವರನ್ನ ಪ್ರೀತಿ ನಾಟಕದಲ್ಲಿ ಯಾಮಾರಿಸುತ್ತಾ, ಮೋಸ ಮಾಡಿ ಕೊನೆಗೆ ಆ ಹುಡುಗಿಯನ್ನೇ ಬ್ಲಾಕ್ ಮೇಲ್ ಮಾಡುವುದನ್ನೇ ದಂಧೆಯಾಗಿಸಿಕೊಂಡಿದ್ದ ವಿಲ್ಲನ್ ಆಗಿ , ಸೈಕೋ ಪಾತ್ರದಲ್ಲಿ ವಿಶ್ವ ಕರ್ಣ ಈ ಸಿನಿಮಾ ಮೂಲಕ ಮೊದಲ ಬಾರಿಗೆ ಸ್ಯಾಮಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ.. ನಿಜ ಹೇಳೋದಾದ್ರೆ ಸಿನಿಮಾದಲ್ಲಿ ವಿಶ್ವ ನಟನೆ ಕ್ಷಣ ಕ್ಷಣಕ್ಕೂ ಆತನ ಮೇಲಿನ ಸಿಟ್ಟನ್ನ ಹೆಚ್ಚಿಸುತ್ತಲೇ ಹೋಗುತ್ತೆ.. ಅದೇ ಒಬ್ಬ ವಿಲ್ಲನ್ ನಟನೆಗೆ ಬೇಕಾಗಿರೋ ಕ್ರೆಡಿಟ್… ವಿಶ್ವ  ಈ ಸಿನಿಮಾದಲ್ಲಿ ಹರ್ಷನಾಗಿ ಕಾಣಿಸಿಕೊಂಡಿದ್ದಾರೆ.. ಟೆಕ್ನಾಲಜಿ ಮಾಸ್ಟರ್ ಮೈಂಡ್…  ಹೇಗೆ ಟೆಕ್ನಾಲಜಿಯನ್ನೇ ಅರೆದು ಕುಡಿದು ಅದನ್ನ ಯಾವೆಲ್ಲಾ ರೀತಿಯಲ್ಲಿ ಬಳಸಿಕೊಂಡು ಹೇಗೆ ದುಡ್ಡು ಮಾಡಬಹುದು ಅನ್ನೋ ಕಲೆಯನ್ನ ಕರಗತ ಮಾಡಿಕೊಂಡು ಅದ್ಹೇಗೆ ಹುಡುಗಿಯರನ್ನ ತಮ್ಮ ಬಲೆಗೆ ಸಿಲುಕಿಸುತ್ತಾರೆ.. ತನ್ನ ಟ್ಯಾಕಲೆಂಟ್ ನಿಂದ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕಢೇಳಿದಷ್ಟು ಹಣಕ್ಕೆ ಕೆಲಸ ಗಿಟ್ಟಿಸಿಕೊಳ್ಳುವ ಸಾಮರ್ಥ್ಯವೇ ಇದ್ರು ಹುಡುಗಿಯರನ್ನ ಮೋಸ ಮಾಡಿಕೊಂಡು ಡಾರ್ಕ್ ವೆಬ್ ನೇ ಅಡಿಕ್ಷನ್ ಮಾಡಿಕೊಂಡಿದ್ದ ಸೈಕೋ ಸೈಬರ್ ಅಪರಾಧಿಯಾಗಿ ಹರ್ಷನ ನಟನೆಯೂ ಅಧ್ಬುತವಾಗಿದೆ.. ಇದ್ರಿಂದ ರಮೆಶ್ ಅರವಿಂದ್ ಅವರಿಗೆ ಯಾವ ರೀತಿ ತೊಂದರೆಯಾಗುತ್ತೆ.. ಹರ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಆಫೀಸರ್ ವಿಷ್ಣು ಮುಖಾಮುಖಿಯಾದಾಗ ಯಾವ ರೀತಿ ಕಾಳಗವಿರುತ್ತೆ ಅನ್ನೋದನ್ನ ಸಿನಿಮಾ ನೋಡಿಯೇ ಆನಂದಿಸಬೇಕು..

 

ಕ್ಷಣಕ್ಷಣಕ್ಕೂ ರಮೇಶ್ ಅವರ ಬದಲಾದ ರೂಪ ಸಿನಿಮಾದಲ್ಲಿ ಕಾಣಸಿಗುತ್ತೆ. ಸಿನಿಮಾದ ಎಡಿಟಾರ್ ಆಕಾಶ್ ಶ್ರೀವಾತ್ಸ ಅವರ ಕೆಲಸವೂ ಅಧ್ಬುತವಾಗಿದೆ.. ಅದು ಸ್ಕ್ರೀನ್ ಮೇಲೆ ಅಚ್ಚುಕಟ್ಟಾಗಿ ಕಾಣಿಸುತ್ತೆ.. ಸಿನಿಮಾವನ್ನ ಅದ್ಧೂರಿಯಾಗಿ ಸೂರಜ್ ಪ್ರೊಡಕ್ಷನ್ ಬ್ಯಾನರ್ ನ ಅಡಿ ರಮೇಶ್ ರೆಡ್ಡಿ , ಉಮಾ ನಿರ್ಮಾಣ ಮಾಡಿದ್ದಾರೆ..

ರಾಜು ತಾಳಿಕೋಟೆ, ಶೋಭ್ ರಾಜ್ ಅವರ ಸ್ವಲ್ಪ ಕಾಮಿಡಿ , ಸ್ವಲ್ಪ ವಿಲ್ಲನೇಸ್ಟಿಕ್ ಅವತಾರ , ಹಿರಿಯ ಪೊಲೀಸ್ ಅಧಿಕಾರಿಯಾಗಿ  ಪ್ರಕಾಶ್ ಬೆಲ್ವಾಡಿ ಅವರ ನಟನೆ, ಬೇಬಿಸ್ಮಯ, ಮಾಲತಿ ಸುಧೀರ್ ಅವರ ನಟನೆ ಅದ್ಭುತವಾಗಿದೆ..    ಛಾಯಾಗ್ರಾಹಕ ಸತ್ಯ ಹೆಗಡೆ ಅವರ ಕ್ಯಾಮೆರಾ ಮ್ಯಾಜಿಕ್ ಆನ್ ಸ್ಕ್ರೀನ್ ಮೇಲೆ ಮೋಡಿ ಮಾಡಿದೆ..  ಧನಂಜಯ ಕೊರಿಯಾಗ್ರಾಫಿ , ಶ್ರೀನಿವಾಸ್ ಕಲಾಲ್ ಸಂಕಲನ , ಜಾಲಿ ಬಾಸ್ಟಿನ್, ಡಾ.ರವಿವರ್ಮ ಸಾಹಸ, ಗುರು ಕಶ್ಯಪ್ ಸಂಭಾಷಣೆ ಸಿನಿಮಾದ ಮೆರಗು ಹೆಚ್ಚಿಸಿದೆ..

ಸೋಷಿಯಲ್ ಮೀಡಿಯಾ , ಫೇಸ್ ಬುಕ್ , ಇನ್ಸ್ಟಾ, ವಾಟ್ಸಾಪ್ , ಟ್ವಿಟ್ಟರ್ ಇವೆಲ್ಲದ್ರಿಂದ ಒಳ್ಳೆಯದ್ದೂ ತುಂಬಾನೆ ಇದ್ರೂ ಕೆಲವೊಮ್ಮೆ ಇದೇ ಪ್ಲಾಟ್ ಫಾರ್ಮ್ ಗಳ ಮೂಲಕ   ಎಷ್ಟೆಲ್ಲಾ ತೊಂದರೆಗಳಾಗುತ್ವೆ , ಟೆಕ್ನಾಲಜಿ ಬೆಳದಂತೆ ಅಭಿವೃದ್ಧಿಯ ಜೊತೆಗೆ ದೊಡ್ಡ ತೊಂದರೆಗಳು ಕಾಡುತ್ವೆ ಅನ್ನೋದನ್ನ ನಾವೀ ಸಿನಿಮಾ ಮೂಲಕ ನೋಡಿ ತಿಳಿದದುಕೊಳ್ಳಬಹುದು..

ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿ  ಅಸಹಾಯಕ ಸ್ಥಿತಿಗೆ ತಲುಪಿದಾಗ ಅನಿವಾರ್ಯತೆಯಿಂದ ತೆಗೆದುಕೊಳ್ಳುವ ನಿರ್ಧಾರ ಕಥೆಯ ದಿಕ್ಕನ್ನೇ ಬದಲಾಯಿಸಿಬಿಡುತ್ತೆ.. ಅಬ್ಬಬ್ಬಾ ಇದೊಂದು ಸಖತ್ ಥ್ರಿಲ್ಲರ್ , ಸಸ್ಪೆನ್ಸ್ ಕಥೆ ಅಂತ ಸಿನಿಮಾ ನೋಡಿ ಥಿಯೇಟರ್ ನಿಂದ ಹೊರ ಬರುತ್ತಾ ನಿಮಗೆ ಅನ್ಸುತ್ತೆ.. ಮಾತ್ ಮಾತಿಗೂ ಸಿನಿಮಾದಲ್ಲಿ ಟ್ವಿಸ್ಟ್ ಇದೆ..

ಅದ್ರಲ್ಲೂ  ಪವರ್ ಫುಲ್  ರವಿ ಬಸ್ರೂರು ಅವರ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಜೊತೆ ರಮೇಶ್ ಅವರ ಥ್ರಿಲ್ಲಿಂಗ್ ನಟನೆ  ಚೆರ್ರಿ ಆನ್ ದ ಟಾಪ್… ರಮೇಶ್ ಅರವಿಂದ್ ಅವರು ಭಿನ್ನ ವಿಭಿನ್ನ ಒಮ್ಮೆ ಪ್ರಾಮಾಣಿಕ ನಿಷ್ಠಾವಂತ ಪೊಲೀಸ್ ಆಫಿಸರ್ ಆದ್ರೆ , ಮತ್ತೊಮ್ಮೆ ಫ್ಯಾಮಿಲಿ ಮ್ಯಾನ್ , ಹೆಂಡತಿಯನ್ನ ಜೀವಕ್ಕಿಂದ ಹೆಚ್ಚು ಪ್ರೀತಿಸೋ ಗಂಡನಾಗಿ , ಮಗಳನ್ನ ಪ್ರಾಣದಂತೆ ನೋಡಿಕೊಳ್ಳುವ ಅಪ್ಪನಾಗಿ , ತಂಗಿಯ ಕಣ್ಣಲ್ಲಿ ನೀರು ಬಾರದಂತೆ ನೋಡಿಕೊಳ್ಳುವ ಅಣ್ಣನಾಗಿ , ಮತ್ತೆ ಕೆಲವೊಮ್ಮೆ ಖುದ್ದು ವಿಲ್ಲನ್  ಆಗಿಯೂ ಸಿನಿಮಾದಲ್ಲಿ ಅಧ್ಬುತ ನಟನೆ ಮಾಡಿದ್ದಾರೆ..

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದ ಯುವತಿಯರ ಸರಣಿ ಆತ್ಮಹತ್ಯೆಯಿಂದ  ಕಥೆ ಪ್ರಾರಂಭವಾಗಿ , ಆ ಹುಡುಗಿಯರ ಕೊಲೆಗೆ ಕಾರಣನಾಗಿದ್ದ ಸೈಕೋ ಅಂತ್ಯದಲ್ಲಿ ಈ ರೋಮಾಂಚನಕಾರಿ ಸಿನಿಮಾ ಮುಗಿಯುತ್ತೆ.. ತಮಿಳಿನ ಸಿನಿಮಾದ ರೀಮೇಕ್ ಆದ್ರೂ ಶೇ 50 ರಷ್ಟು ಭಾಗಗಳನ್ನ ಬದಲಾವಣೆ ಮಾಡಲಾಗಿದೆ..

ಸಿನಿಮಾದಲ್ಲಿ ಈಗಿನ ಜನರೇಷನ್ , ಸೋಷಿಯಲ್ ಮೀಡಿಯಾ ಅಡಿಕ್ಷನ್ ,   ಫೋನ್ ಟ್ಯಾಪಿಂಗ್ , ಹ್ಯಾಕಿಂಗ್ ,  ಬ್ಲಾಕ್ ಮೇಲಿಂಗ್ ಈ ರೀತಿಯಾದ ಈಗಿನ  ಹಾಟ್ ಟಾಪಿಕ್ ಗಳನ್ನೇ ಇಟ್ಟುಕೊಂಡು ಅದನ್ನ ಸ್ಕ್ರೀನ್ ಪ್ಲೇ ನಲ್ಲಿ ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ ರಮೇಶ್ ಅರವಿಂದ್ ಅವರು..

ಒಟ್ಟಾರೆಯಾಗಿ ಸಿನಿಮಾದ ಕಥೆ, ಸಿನಿಮಾದ ಸ್ಕ್ರೀನ್ ಪ್ಲೇ , ತಂತ್ರಜ್ಞಾನ ತಂಡದ ಅದ್ಭುತ ಕೆಲಸ , ರವಿ ಬಸ್ರೂರು ಮ್ಯೂಸಿಕ್ , ರಮೇಶ್ ಅರವಿಂದ್ ಅವರ ನಿರ್ದೇಶನ , ನಟನೆ , ಅದ್ಭುತ ಎಡಿಟಿಂಗ್ ನಿಂದ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ..

ಸಿನಿಮಾದಲ್ಲಿ ಸೆಂಟಿಮೆಂಟ್ ಇದೆ.. ಕಾಮಿಡಿಯಿದೆ.. ಕೊಂಚ ಲವ್ ಸೀನ್ಸ್ ಇದೆ. ಭರಪೂರ ಥ್ರಿಲ್ಲಿಂಗ್ , ಆಕ್ಷನ್ ಸೀನ್ಸ್ ಇದೆ.. ಟ್ವಿಸ್ಟ್ ಗಳಿಂದ ತುಂಬಿದೆ.. ನೈಜತೆ ಈ ಸಿನಿಮಾದ ಮೌಲ್ಯ ದುಪ್ಪಟ್ಟಾಗಿಸಿದೆ.. ಇದಿಷ್ಟು ಸಿನಿಮಾದ ರಿವೀವ್…. ಆದ್ರೆ ಈ ಸಿನಿಮಾ ತಪ್ಪದೇ ವೀಕ್ಷಣೆ ಮಾಡ್ಲೇ ಬೇಕಾದ ಚಿತ್ರ..  ಥಿಯೇಟರ್ ನಲ್ಲಿ ಕುಟುಂಬ ಸಮೇತ ನೋಡಬಹುದಾದ ಒಂದು ಅದ್ಭುತ ಸಿನಿಮಾ.. ಇದು ಸಾಕ್ಷಾ ಟಿವಿ ರಿವೀವ್..

100 ಸಿನಿಮಾಗೆ ಈ ಎಲ್ಲಾ ಅಂಶಗಳಿಂದ 9/10 ಕ್ಕೆ ಅಂಕಗಳನ್ನ ಆರಾಮಾಗಿ ಕೊಡಬಹುದು.. ನೀವು ಸಿನಿಮಾ ನೋಡಿ ಡಿಸೈಡ್ ಮಾಡಿ ನೀವು ಈ ಸಿನಿಮಾಗೆ ಎಷ್ಟ್ ಮಾರ್ಕ್ಸ್ ಕೊಡ್ತೀರಾ…

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd