ಸಿನಿಮಾ ಮಂದಿಗೆ ಗುಡ್ ನ್ಯೂಸ್ : ಶೇ.100ರಷ್ಟು ಚಿತ್ರಮಂದಿರಗಳ ಭರ್ತಿಗೆ ಅವಕಾಶ

1 min read
Theatre

ಸಿನಿಮಾ ಮಂದಿಗೆ ಗುಡ್ ನ್ಯೂಸ್ : ಶೇ.100ರಷ್ಟು ಚಿತ್ರಮಂದಿರಗಳ ಭರ್ತಿಗೆ ಅವಕಾಶ theatres SAAKSHA TV

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿನಿಮಾ ಮಂದಿಗೆ ಶುಭ ಸುದ್ದಿ ಕೊಟ್ಟಿದ್ದಾರೆ.

ಕೊರೊನಾ ಪಾಸಿಟಿವಿಟಿ ದರ ಶೇಕಡಾ 1 ಕ್ಕಿಂತ ಕಡಿಮೆ ಇರುವಂತ ಜಿಲ್ಲೆಗಳಲ್ಲಿ ಅಕ್ಟೋಬರ್ 1 ರಿಂದ ಶೇ.100ರಷ್ಟು ಚಿತ್ರಮಂದಿರಗಳ ಭರ್ತಿಗೆ ಅವಕಾಶ ನೀಡಿದ್ದಾರೆ.

ಅಲ್ಲದೆ ಅಕ್ಟೋಬರ್ 3 ರಿಂದ ಪಬ್, 6 ರಿಂದ 12ನೇ ತರಗತಿಗಳನ್ನು ಶೇ.100 ಆರಂಭಿಸಲು ಅವಕಾಶ ನೀಡಿದ್ದಾರೆ.

theatres SAAKSHA TV

ಮುಖ್ಯಮಂತ್ರಿಗಳು ಇಂದು ಕೋವಿಡ್ ನಿಯಂತ್ರಣ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಪಾಸಿಟಿವಿಟಿ ದರ ಶೇ 1 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಚಿತ್ರಮಂದಿರಗಳ ಸಂಪೂರ್ಣ ಭರ್ತಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ನೈಟ್ ಕಫ್ರ್ಯೂ ಬಗ್ಗೆ ಮಾತನಾಡಿ, ರಾತ್ರಿ ಕಪ್ರ್ಯೂ ವೇಳೆಯನ್ನು ರಾತ್ರಿ 10 ರಿಂದ 5ಕ್ಕೆ ನಿಗದಿ ಪಡಿಸಲಾಗಿದೆ ಎಂದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd