ವಿಶ್ವದಲ್ಲೇ ಅತಿ ಹೆಚ್ಚು  ಸ್ಪಾನಿಷ್ ಮಾತನಾಡುವ 2ನೇ ದೇಶ ಕೊಲಂಬಿಯಾ…ಭಾರತದ ನಂತರ ಅತಿ ಹೆಚ್ಚು ರಾಷ್ಟ್ರೀಯ  ರಜೆಗಳು ಸಿಗುವ ದೇಶ..!

1 min read

ವಿಶ್ವದಲ್ಲೇ ಅತಿ ಹೆಚ್ಚು  ಸ್ಪಾನಿಷ್ ಮಾತನಾಡುವ 2ನೇ ದೇಶ ಕೊಲಂಬಿಯಾ…ಭಾರತದ ನಂತರ ಅತಿ ಹೆಚ್ಚು ರಾಷ್ಟ್ರೀಯ  ರಜೆಗಳು ಸಿಗುವ ದೇಶ..!

ದಕ್ಷಿಣ ಅಮೆರಿಕಾ ಉತ್ತರದಲ್ಲಿ ಸ್ಥಿತವಾಗಿರುವ ಕೊಲಂಬಿಯಾ ದೇಶ ಸಾಕಷ್ಟು ವಿಚಾರಗಳಲ್ಲಿ ಪ್ರಸಿದ್ಧಿ ಪಡೆದಿದೆ.. ಆದ್ರೆ ಈ ದೇಶದಕ್ಕೆ ಕೆಲ ಡಾರ್ಕ್ ಸೈಡ್ ಗಳು ಕೂಡ ಇವೆ.. 10 % ರಷ್ಟು ಅಮೇಜಾನ್ ಕಾಡು ಈ ದೇಶದಲ್ಲಿ ಆವರಿಸಸಿದೆ..

ಸೌತ್ ಅಮೆರಿಕಾದ ಕೊಲೊಂಬಿಯಾ ದೇಶ.. ಕ್ರಿಸ್ಟೋಫರ್ ಕೊಲಂಬಸ್ ಅವರ ಹೆಸರನ್ನ ಆಧರಿಸಿ ಈ ದೇಶಕ್ಕೆ ಕೊಲಂಬಿಯಾ ಹೆಸರನ್ನ ಇಡಲಾಗಿದೆ.. ಈ ದೇಶದಲ್ಲಿ ಇಂದಿಗೂ ಬಹುತೇಕ ಕಡೆಗಳಲ್ಲಿ ಕೊಲಂಬಸ್ ಪ್ರತಿಮೆಗಳನ್ನ ಕಾಣಬಹುದು.

ಈ ದೇಶದ ಕರೆನ್ಸಿ – ಕೊಲಂಬಿಯನ್ ಪೇಸೋ – ಇದರ ಮೌಲ್ಯ ಬಾರತೀಯ ರೂಪಾಯಿಗಿಂತಲೂ ತೀರ ಕಡಿಮೆ ( ಅಂದ್ರೆ  ಸುಮಾರು 50 ಕೊಲಂಬಿಯನ್ ಪೇಸೋ 1 ರೂಪಾಯಿಗೆ ಸಮ)  

ಇಡೀ ವಿಶ್ವದಲ್ಲಿ ಅತಿ ಹೆಚ್ಚು ವಿವಿಧ ಬಗೆಯ ಚಿಟ್ಟೆಗಳು ಈ ದೇಶದಲ್ಲಿವೆ..

ಅಧಿಕೃತ ಹೆಸರು ರಿಪಬ್ಲಿಕ್ ಆಫ್ ಕೊಲಂಬಿಯಾ – ಒಟ್ಟು ಜನಸಂಖ್ಯೆ ಸುಮಾರು 5 ಕೋಟಿ

ರಾಜಧಾನಿ – ಬೊಗೊಟೋ , ಈ ದೇಶವನ್ನ ಗೇಟ್ ವೇ ಟು ಸೌತ್ ಅಮೆರಿಕಾ ಅಂತಲೂ ಕರೆಯಲಾಗುತ್ತೆ.

80 % ಜನ ನಗರದಲ್ಲಿ ವಾಸವಾಗಿದ್ರೆ 20% ಜನರು ಹಳ್ಳಿಗಳಲ್ಲಿ ಜೀವನ ನಡೆಸುತ್ತಿದ್ದಾರೆ.

ಇಲ್ಲಿನ ಸುಮಾರು 90 %ರಷ್ಟು ಜನರು ಕ್ಯಾಥೋಲಿಕ್ಸ್.

ಇಲ್ಲಿನ ಹೆಚ್ಚಿನ ಜನ ಸಂಖ್ಯೆ  ಬಳಸುವ ಭಾಷೆ ಸ್ಪಾನಿಷ್ , ಹಾಗೂ ಇಡೀ ವಿಶ್ವದಲ್ಲೇ ಅತಿ ಹೆಚ್ಚು  ಸ್ಪಾನಿಷ್ ಮಾತನಾಡುವ 2ನೇ ದೇಶ ಕೊಲಂಬಿಯಾ. ಮೊದಲನೇಯದ್ದು ಮೆಕ್ಸಿಕೋ.

ಅಧಿಕೃತ ಭಾಷೆ ಸ್ಪಾನಿಷ್ ಆದ್ರೂ ಕೆಲವೆಡೆ ಪ್ರಾದೇಶಿಕವಾಗಿ ಇಂಗ್ಲಿಷ್ ಅಧಿಕೃತವಾಗಿದೆ.. ಈ ಭಾಷೆಗಳು ಬಿಟ್ಟು ಬೇರೆ ಭಾಷೆಗಳನ್ನ ಮಾತನಾಡುವ ಜನರು ಸಹ ಈ ದೇಶದಲ್ಲಿದ್ದಾರೆ.

ಈ ದೇಶವನ್ನ ಅತ್ಯಂತ ಹಳೆಯ ದೇಶ ಎಂದೂ ಸಹ ಪರಿಗಣಿಸಲಾಗುತ್ತದೆ.. ಅಲ್ಲದೇ 20 ಸಾವಿರ ವರ್ಷಗಳ ಹಿಂದಿನಿಂದಲೂ ಇಲ್ಲಿನ ಜನರು ವಾಸಿಸುತ್ತಿದ್ದಾರೆ ಎನ್ನಲಾಗುತ್ತೆ.

ವಿಶೇಷ ಅಂದ್ರೆ ಈ ದೇಶದಲ್ಲಿ ಯಾರೂ ಕೂಡ ತಮಗಿಂತ ದೊಡ್ಡವರ ಮಾತನ್ನ ಅಲ್ಲೆಗಳೆಯೋದಿಲ್ಲ.. ನಿರಾಕರಿಸುಚವುದಿಲ್ಲ.. ತಮಗಿಂತ ವಯಸ್ಸಿನಲ್ಲಿ ದೊಡ್ಡವರು ಏನೇ ಹೇಳಿದರು ಅದನ್ನ ಕೇಳುತ್ತಾರೆ ಚಾಚೂ ತಪ್ಪದೇ ಪಾಲಿಸುತ್ತಾರೆ.. ಮನೆಯಲ್ಲಿ ಹಿರಿಯರು ಏನಾದ್ರೂ ಒಂದು ನಿಯಮ ಹಾಕಿದ್ರೆ ಆ ಮನೆಯವರು ಅದನ್ನ ಪರಿಪಾಲನೆ ಮಾಡ್ತಾರೆ

ಭಾರತದ ನಂತರ ಅತಿ ಹೆಚ್ಚು ರಾಷ್ಟ್ರೀಯ  ರಜೆಗಳು ಸಿಗುವ ದೇಶ ಕೊಲಂಬಿಯಾ.

ಭಾರತದಲ್ಲಿ 1 ವರ್ಷಕ್ಕೆ 21 ರಾಷ್ಟ್ರೀಯ ರಜೆಗಳಿವೆ.. ಕೊಲಂಬಿಯಾದಲ್ಲಿ 18 ರಾಷ್ಟ್ರೀಯ ರಜೆಗಳು ಸಿಗುತ್ತವೆ..

ಈ ದೇಶದ ರಾಜಧಾನಿ ಬೊಗೊಟೋ ಸಖತ್ ಕಲರ್ ಫುಲ್.. ಕಾರಣ .. ಇಲ್ಲಿನ ಸ್ಟ್ರೀಟ್ ಆರ್ಟ್. ಸ್ಟ್ರೀಟ್ ಆರ್ಟ್ ವಿಚಾರಕ್ಕೆ ಬಂದ್ರೆ ಬೊಗೋಟೋವನ್ನ ಮೆಕ್ ಆಫ್ ಆರ್ಟ್ಸ್ ಸ್ಟ್ರೀಟ್ ಆರ್ಟ್ಸ್ ಎಂದೂ ಸಹ ಕಲರೆಯಲಾಗುತ್ತದೆ.. ಇದೇ ಸ್ಟ್ರೀಟ್ ಆರ್ಟ್ ನಿಂದಾಗಿ ಇಡೀ ನಗರ ಸಖತ್ ಕಲರ್ ಫುಲ್ ಆಗಿ ಕಾಣಿಸುತ್ತೆ. ಪ್ರತಿ ಗೋಡೆಗಳ ಮೇಲೂ ಆಕರ್ಶಕ ಚಿತ್ರಗಳು ಕಾಣಿಸುತ್ತವೆ..

ಇಲ್ಲಿನ ಜನರಲ್ಲಿ ಡ್ಯಾನ್ಸ್ ನ ಕ್ರೇಜ್ ತುಂಬಾ ಇದೆ.

ಎಲ್ ಡೊರಾಡೋ …. ಈ ಪದವನ್ನ ನೀವು ಬಹುಶಃ KGF ಸಿನಿಮಾದಲ್ಲಿ ಕೇಳಿರುತ್ತೀರಾ… ಇಲ್ಲ ಕೆಲವೊಂದು ಗೇಮ್ಸ್ ಗಳಲ್ಲಿ  ಕೇಳ್ತಿರುತ್ತೀರಾ… ಆದ್ರೆ ಈ ಹೆಸರಿನ ನಗರ ನಿಜಕ್ಕೂ ಇರೋದು ಎಲ್ಲಿ ಗೊತ್ತಾ..? ಇದೇ ದೇಶದಲ್ಲಿ..

ಈ ದೇಶದಲ್ಲಿ ಫುಟ್ ಬಾಲ್ ಮೇಲಿನ ಕ್ರೇಜ್ ಎಷ್ಟರ ಮಟ್ಟಿಗೆ ಇದೆ ಅಂದ್ರೆ ಇಲ್ಲಿನ ಪ್ರತಿ ವಿಚಾರಗಳ ಜೊತೆಗೂ ಫುಟ್ ಬಾಲ್ ಅನ್ನಮ ಕನೆಕ್ಟ್ ಮಾಡಲಾಗುತ್ತೆ… ಅಷ್ಟು ಎಮೋಷನಲ್ ಆಗಿ ಇಲ್ಲಿನ ಜನ ಫುಟ್ ಬಾಲ್ ಜೊತೆಗೆ ಕನೆಕ್ಟ್ ಆಗಿದ್ದಾರೆ.. ಅಲ್ದೇಬಹುತೇಕರು , ಮಕ್ಕಳಿಂದ ಹಿಡಿದು ಎಲ್ಲರೂ ಫುಟ್ ಬಾಲ್ ಗೇಮ್ ಅನ್ನ ಆಡುತ್ತಾರೆ.. ನಮ್ಮ ಬಾರತದಲ್ಲಿ ಜನ ಹೇಗೆ ಕ್ರಿಕೆಟ್  ಇಷ್ಟ ಪಡ್ತಾರೋ ಅದೇ ರೀತಿ ಇಲ್ಲಿನ ಜನ ಫುಟ್ ಬಾಲ್ ಇಷ್ಟ ಪಡ್ತಾರೆ..

ಕೊಲಂಬಿಯಾದಲ್ಲಿ ಹೆಚ್ಚು ಹಣ್ಣುಗಳನ್ನ ಬೆಳೆಯಲಾಗುತ್ತದೆ. ವಿಶ್ವಾದ್ಯಂತ ರಫ್ತು ಮಾಡಲಾಗುತ್ತೆ.. ಅಲ್ಲದೇ ದೇಶದ ಆರ್ಥಿಕತೆಯ ಪ್ರಮುಖ ಮೂಲವೂ ಹೌದು.. ಇದರ ಹೊರತಾಗಿ ಇಲ್ಲಿನ ಕಾಫಿ  ವರ್ಲ್ಡ್ ಫೇಮಸ್..

ಈ ದೇಶದಲ್ಲಿ ಸಿಗುವ ರೀತಿಯಾದ ಆಹಾರಗಳು ಇಡೀ ವಿಶ್ವದಲ್ಲೇ ಎಲ್ಲೂ ಸಿಗೋದಿಲ್ಲ. ಇಲ್ಲಿನ ಸೀ ಫುಡ್ ವರ್ಲ್ಡ್ ಫೇಮಸ್..  ಇಲ್ಲಿ  ಬಗೆಬಗೆಯ ಆಹಾರಗಳು ಸಿಗುತ್ತೆ. ಅದ್ರಲ್ಲೂ ಇಲ್ಲಿನ ಬಂಡೇಜಾ ಪೈಸಾ ವಿಶ್ವದ ಪ್ರಸಿದ್ಧ ಡಿಶ್ ಅಂತಲೇ ಹೇಳಲಾಗಿದೆ..

ಈ ದೇಶದಲ್ಲಿರುವ ಪ್್ರತಿ ರೇಡಿಯೋ ಸ್ಟೇಶನ್ಸ್ ಹಾಗೂ ಟಿ ವಿ ಚಾನಲ್ ಗಳಲ್ಲಿ ದಿನಕ್ಕೆ 2 ಬಾರಿ ಈ ದೇಶದ ರಾಷ್ಟ್ರೀಯ ಗೀತೆ ಪ್ರಸಾರ ಮಾಡುವುದು ಕಡ್ಡಾಯ.. ಬೆಳಿಗ್ಗೆ 6 ಗಂಟೆ ಹಾಗೂ ಸಂಜೆ 6 ಗಂಟೆಗೆ ರಾಷ್ಟ್ರೀಯ ಗೀತೆಯನ್ನ ಪ್ರಸಾರ ಮಾಡಲಾಗುತ್ತೆ..

ರಿವರ್ಸ್ ಆಫ್ 5 ಕಲರ್ಸ್  ( 5 ಬಣ್ಣಗಳ ನದಿ ) ಅಥವ ಕ್ರಿಸ್ ಟೇಲ್ಸ್.  ಇದು ತನ್ನ ಅದ್ಭುತ ವಿಶೇಷತೆ ಹಾಗೂ ಸೌಂದರ್ಯದಿಂದ ಪ್ರವಾಸಿಗರನ್ನ ತನ್ನತ್ತ ಆಕರ್ಶಿಸುವ ವಿಶ್ವಪ್ರಸಿದ್ಧ ಸುಂದರ ತಾಣಗಳಲ್ಲಿ ಒಂದು.. ಈ ನದಿಯ ಬಣ್ಣ ಹಳದಿ , ಹಸಿರು , ನೀಲಿ , ಕೆಂಪು ಹಾಗೂ ಕಪ್ಪು ಬಣ್ಣಗಳಲ್ಲಿ ಬದಲಾಗುತ್ತಲೇ ಇರುತ್ತದೆ.. ಈ ಅದ್ಭುತ ಜೂನ್ ನಿಂದ ಹಿಡಿದು ನವೆಂಬರ್ ವರೆಗೂ ಕಾಣಸಿಗುತ್ತೆ.

ಅಮೇಜಾನ್ ಕಾಡಿನಲ್ಲಿ ಏಲಿಯನ್ಸ್ ಗಳು ನೆಲೆಸಿದ್ದಾರೆ ಎಂದು ಈ ದೇಶದ ಜನ ನಂಬುತ್ತಾರೆ.. ವಿಜ್ ಕ್ರಾಫ್ಟ್ , ಅಂದ ವಿಶ್ವಾಸ , ಬ್ಲಾಕ್ ಮ್ಯಾಜಿಕ್ ಗಳನ್ನೇ ಇಲ್ಲಿನ ಕೆಲ ಮಹಿಳೆಯರು ವೃತ್ತಿ ಆಗಿಸಿಕೊಂಡಿದ್ದಾರೆ.

ಕೊಲಂಬಿಯಾ ಇಡೀ ವಿಶ್ವದಲ್ಲಿ ಕುಖ್ಯಾತಿ ಪಡೆದಿರುವ ದೊಡ್ಡ ಕಾರಣ.. ನಶೆ.. ಡ್ರಗ್ಸ್.. ಇಡೀ ವಿಶ್ವಾದ್ಯಂತ  ಬ್ಯಾನ್ ಆಗಿರುವ ಎಲ್ಲಾ ರೀತಿಯಾದ ಡ್ರಗ್ಸ್ ಇಲ್ಲಿ ಸಿಗುತ್ತೆ. ಇದೇ ದೇಶದಲ್ಲೇ ಅತಿ ಹೆಚ್ಚು ನಶೆಯ ಸೇವನೆ ಮಾಡಲಾಗುತ್ತದೆ.. ( ಮದ್ಯಪಾನ , ಧೂಮೊಪಾನ , ಡ್ರಗ್ಸ್ ಇತರೇ).

ಕೊಲಂಬಿಯಾದ ಮತ್ತೊಂದು ನೆಗೆಟಿವ್ ಪಾರ್ಟ್ ಅಂದ್ರೆ ಇಡೀ ವಿಶ್ವದ ದೊಡ್ಡ ದೊಡ್ಡ ಡಾನ್ ಗಳು ಇದೇ ದೇಶದಲ್ಲಿಯೇ ಇದ್ದಾರೆ..ಹೀಗಾಗಿಯೇ ಈ ದೇಶವನ್ನ ಅಪರಾಧಿಗಳ ಅಡ್ಡ ಅಂತಲೇ ಕರೆಯಲಾಗುತ್ತೆ.

ಈ ದೇಶದಲ್ಲಿನ ಬೀಚ್ ಗಳು  ಪ್ರವಾಸಿಗರನ್ನ ಸೆಲೆಯುತ್ತೆ.. ಈ ದೇಶದಲ್ಲಿ ಸುಮಾರು 300ಕ್ಕೂ ಹೆಚ್ಚು ಸಮುದ್ರ ತಟಗಳಿವೆ.. ದಿನ ಬೆಳಿಗ್ಗೆ ಪಾರ್ಟಿಗಳಲ್ಲಿ  ಇಲ್ಲಿನ ಜನ ಕಲೆದುಹೋಗಿರುತ್ತಾರೆ..   

ಇನ್ನೂ ಹಲವಾರು ರಿಪೋರ್ಟ್ ಗಳ ಅನುಸಾರ ವಿಶ್ವದಲ್ಲೇ ಅತಿ ಹೆಚ್ಚು ಖುಷಿಯಾಗಿರುವ ದೇಶ  ಕೊಲಂಬಿಯಾ.. ಇಲ್ಲಿನ ಜನರು ಸದಾ ಖುಷಿಯಾಗಿರುತ್ತಾರೆ..       ಹಾಡುವುದು ಕುಣಿಯುವುದು ಇಲ್ಲಿನ ಜನರ ದೈನಂದಿನ ಬದುಕಿನ ಅವಿಬಾಜ್ಯ ಅಂಗ ಅಂದ್ರೂ  ತಪ್ಪಾಗೋದಿಲ್ಲ..  ಮ್ಯೂಸಿಕ್ ಕೇಳಿಸೋಹಾಗಿಲ್ಲ ಡ್ಯಾನ್ಸ್ ಶುರು ಮಾಡ್ತಾರೆ ಅಂತಾರಲ್ಲಾ ಹಾಗೆ.. ಇನ್ನೂ ಫೇಮಸ್ ಸಿಂಗರ್ ಶಕೀರಾ ಬಗ್ಗೆ ಗೊತ್ತೇ ಇರಬಹುದು.. ಈ  ಗಾಯಕಿ ಕೊಲಂಬಿಯಾ ದೇಶದವರೇ..

ಕಪ್ಪೆಗಳು ಸದಾ ಒಟಗುಡುವುದಕ್ಕೆ ಈ ಕಾರಣವಿದೆ..!

20,70,000 ಖಾತೆಗಳನ್ನ ನಿಷೇಧಿಸಿದ WHATSAPP

ವಿಶ್ವದ ಅತಿ ಹೆಚ್ಚು ದ್ವೀಪಗಳು ಈ ದೇಶದಲ್ಲಿದೆ… ಇಲ್ಲಿನ ಪ್ರಾಕೃತಿಕ ಸೌಂದರ್ಯ ಎಂಥವರನ್ನೂ ಮೂಕವಿಸ್ಮಿತರನ್ನಾಗಿಸುತ್ತೆ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd