4 ವಿಭಿನ್ನ ಸಿಹಿ ತಿನಿಸುಗಳ ರೆಸಿಪಿಗಳು

1 min read

1. ಮಂಗಳೂರು ಶೀರಾ/ಕೇಸರಿಬಾತ್

ಬೇಕಾಗುವ ಸಾಮಾಗ್ರಿಗಳು :

1/4 ಕಪ್ ರವೆ
1 ದೊಡ್ಡ ಗಾಜಿನ ನೀರು
1/2 ಕಪ್ ಸಕ್ಕರೆ
2 ಪಿಂಚ್ ಕೇಸರಿ ಬಣ್ಣ
4 ದೊಡ್ಡ ಚಮಚ ತುಪ್ಪ
1/4 ಚಮಚ ಏಲಕ್ಕಿ ಪುಡಿ
8-10 ಕೇಸರಿ ಎಳೆಗಳು
ಅಗತ್ಯವಿರುವಷ್ಟು ಗೋಡಂಬಿ, ಡ್ರೈಫ್ರೂಟ್ಸ್ Saakshatv cooking recipes Mangalore sheera
Saakshatv cooking recipes Mangalore sheera

ಮಾಡುವ ವಿಧಾನ :

ಬಾಣಲೆಯಲ್ಲಿ 3 ಚಮಚ ತುಪ್ಪ ಬಿಸಿ ಮಾಡಿ, ನಂತರ ರವೆ ಸೇರಿಸಿ ಕೆಂಪಗಾಗುವಂತೆ ಹುರಿಯಿರಿ.
ನಂತರ ಬಿಸಿನೀರು ಸೇರಿಸಿ ಉಂಡೆಗಳಿಲ್ಲದಂತೆ ಮಿಶ್ರ ಮಾಡಿ ಬೇಯಿಸಿ.
ಈಗ ಸಕ್ಕರೆ ಸೇರಿಸಿ , ಕೇಸರಿ ಬಣ್ಣ ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿ.
Saakshatv cooking recipes Mangalore sheera
ಅದಕ್ಕೆ ಒಂದು ಚಮಚ ತುಪ್ಪ ಸೇರಿಸಿ. ಅಂತಿಮವಾಗಿ ಏಲಕ್ಕಿ ಪುಡಿ ಮತ್ತು ಗೋಡಂಬಿ ಸೇರಿಸಿ ಮಿಶ್ರ ಮಾಡಿ.

ಕೇಸರಿ ಎಳೆಗಳು ಮತ್ತು ಡ್ರೈಫ್ರೂಟ್ಸ್‌ಗಳಿಂದ ಅಲಂಕರಿಸಿ . ಸವಿಯಾದ ಮಂಗಳೂರು ಶೀರಾ ರೆಡಿ..

ಇನ್ನಷ್ಟು ಅಡುಗೆ ರೆಸಿಪಿಗಾಗಿ ಗೂಗಲ್ ನಲ್ಲಿ Saakshatv cooking ಎಂದು ಸರ್ಚ್ ಮಾಡಿ.

2. ಅನ್ನ ಮಿಕ್ಕಿದ್ದರೆ ತಯಾರಿಸಿ ಸಿಹಿಯಾದ ರಸಗುಲ್ಲಾ !

ಬೇಕಾಗುವ ಸಾಮಗ್ರಿಗಳು

ಅನ್ನ – 2 1/2 ಕಪ್
ಮೈದಾ – 1 ಟೀಸ್ಪೂನ್
ಹಾಲಿನ ಪುಡಿ – 1 ಟೀಸ್ಪೂನ್
ತುಪ್ಪ – 1 ಟೀಸ್ಪೂನ್
ಕಾರ್ನ್ ಪ್ಲೋರ್ – 1 ಟೀಸ್ಪೂನ್

ಸಕ್ಕರೆ ‌ಪಾಕ‌ ತಯಾರಿಸಲು

ಸಕ್ಕರೆ 1 ಕಪ್
ನೀರು ‌1 ಕಪ್
ಏಲಕ್ಕಿ ಪುಡಿ
ನಿಂಬೆ ರಸ
Saakshatv cooking recipes rice rasgulla
Saakshatv cooking recipes rice rasgulla

ಮಾಡುವ ‌ವಿಧಾನ

ಉಳಿದ ಅನ್ನವನ್ನು ‌ ಮಿಕ್ಸಿಯಲ್ಲಿ ನೀರು ಹಾಕದೆ ರುಬ್ಬಿಕೊಳ್ಳಿ. ನಂತರ ತುಪ್ಪದಿಂದ ಗ್ರೀಸ್ ಮಾಡಿದ ಪಾತ್ರೆಗೆ ಅದನ್ನು ಹಾಕಿ.
ಅದಕ್ಕೆ ಮೈದಾ ಹಿಟ್ಟು, ಹಾಲಿನ‌ ಹುಡಿ ಮತ್ತು ಕಾರ್ನ್ ಪ್ಲೋರ್ ಸೇರಿಸಿ‌ ಚೆನ್ನಾಗಿ ಮಿಕ್ಸ್ ಮಾಡಿ.
ಈ ಮಿಶ್ರಣವನ್ನು ಹಿಟ್ಟಿನಂತೆ ಚೆನ್ನಾಗಿ ಕಲೆಸಿಕೊಳ್ಳಿ. ಹೆಚ್ಚು ನಾದಿದಷ್ಷು ರಸಗುಲ್ಲಾ ಮೃದುವಾಗುತ್ತದೆ.
ಬಳಿಕ ಆ ಹಿಟ್ಟಿನಿಂದ ‌ಚಿಕ್ಕ ‌ಚಿಕ್ಕ‌ ಉಂಡೆಗಳನ್ನು ಮಾಡಿ. ಅವುಗಳು ಒಡೆದಿಲ್ಲ ಎಂಬುದನ್ನು ಖಾತ್ರಿ ‌ಪಡಿಸಿಕೊಳ್ಳಿ.
ಬಳಿಕ ಒಂದು ಪಾತ್ರೆಯಲ್ಲಿ ‌ 1 ಕಪ್ ಸಕ್ಕರೆ ಮತ್ತು 1 ಕಪ್ ನೀರನ್ನು ತೆಗೆದುಕೊಂಡು ಚೆನ್ನಾಗಿ ಕುದಿಸಿ. ಅದಕ್ಕೆ ನಿಂಬೆ ರಸ ಮತ್ತು ಏಲಕ್ಕಿ ಪುಡಿ ಹಾಕಿ ಸಕ್ಕರೆ ಪಾಕ ತಯಾರಿಸಿ.
Saakshatv cooking recipes rice rasgulla

ಪಾಕ ಸಿದ್ಧವಾದ ನಂತರ ಸಕ್ಕರೆ ಪಾಕದಲ್ಲಿ, ರಸಗುಲ್ಲಾವನ್ನು ಚೆನ್ನಾಗಿ ಬೇಯಿಸಿ.‌ ಸಕ್ಕರೆ ‌ಪಾಕದ ಪಾತ್ರೆಯನ್ನು ಅರ್ಧ ಮುಚ್ಚಿ ಮಧ್ಯಮ ಉರಿಯಲ್ಲಿ 2 ರಿಂದ 3 ನಿಮಿಷ ಬೇಯಿಸಿ. 2 ನಿಮಿಷಗಳ ನಂತರ, ರಸಗುಲ್ಲಾಗಳ ಇನ್ನೊಂದು ಬದಿಯನ್ನು ಬೇಯಿಸಿ. ಇದರ ನಂತರ, ಕಡಿಮೆ ಉರಿಯಲ್ಲಿ 10 ರಿಂದ 15 ನಿಮಿಷಗಳ ಕಾಲ ಬೇಯಿಸಿ.
ಸ್ವಲ್ಪ ತಣ್ಣಗಾದ ಬಳಿಕ‌ ಸರ್ವ್ ಮಾಡಿ. ಸಿಹಿಯಾದ ರಸಗುಲ್ಲಾವನ್ನು‌ ಸವಿಯಿರಿ.

ಇನ್ನಷ್ಟು ಅಡುಗೆ ರೆಸಿಪಿಗಾಗಿ ಗೂಗಲ್ ನಲ್ಲಿ Saakshatv cooking ಎಂದು ಸರ್ಚ್ ಮಾಡಿ.

3. ನಿಮಿಷದಲ್ಲಿ ಅತಿ ಸುಲಭದಲ್ಲಿ ಮಾಡಿ ಕೊರಿಯಾದ ಫೇಮಸ್ ಶುಗರ್ ಕ್ಯಾಂಡಿ..!

ಕೊರಿಯಾದಲ್ಲಿ ಸ್ಟ್ರೀಟ್ ಫುಡ್ ಗಳಲ್ಲಿ ಫೇಮಸ್ ಶುಗರ್ ಕ್ಯಾಂಡಿ , ಮಕ್ಕಳಿಗೆ ಬಹಳ ಇಷ್ಟವಾಗುವ ಸ್ವೀಟ್ ಕ್ಯಾಂಡಿ ಮಾಡುವುದು ತುಂಬಾನೆ ಸಿಂಪಲ್.
ಪದಾರ್ಥಗಳು
ಐಸ್ ಸ್ಟಿಕ್ಸ್
ಸಕ್ಕರೆ
ಬೇಕಿಂಗ್ ಸೋಡಾ
ಮಾಡುವ ವಿಧಾನ
ಮೊದಲಿಗೆ ಐಸ್ ಸ್ಟಿಕ್ಸ್ ನ ಬಿಡಿ ಬಿಡಿಯಾಗಿ ಒಂದಕ್ಕೊಂದು ತಾಗದಂತೆ ಜಾಗ ಬಿಟ್ಟು ಇಡಿ. ಒಂದು ಚಿಕ್ಕ ಪ್ಯಾನ್ ಅನ್ನ ಲೋ ಫ್ಲೇಮ್ ನಲ್ಲಿ ಸ್ಯಾಸ್ ಮೇಲೆ ಕಾಯಲಿಕ್ಕೆ ಇಡಿ ಅದಕ್ಕೆ 1 ಚಮಚ ಸಕ್ಕರೆ ಹಾಕಿ. ಸಕ್ಕರೆ ಇನ್ನೇನು ಒಂದು ಕುದಿ ಬರುತ್ತಿದ್ದಂತೆ ಒಂದು ಚಿಟಕಿಗಿಂತಲೂ ಕಡಿಮೆ ಬೇಕಿಂಗ್ ಸೋಡಾ ಹಾಗಿ ಚೆನ್ನಾಗಿ ಐಸ್ ಸ್ಟಿಕ್ ನಲ್ಲಿ ಕಲಸಿ ಪಟ್ ಅಂತ ಬದಿಗೆ ಇಟ್ಟಿರುವ ಒಂದು ಐಸ್ ಸ್ಟಿಕ್ ನ ಮೇಲ್ಭಾಕ್ಕೆ ವೃತ್ತಾಕಾರದಲ್ಲಿ ಹಾಕಿ. ನೆನಪಿರಲಿ ಐಸ್ ಸ್ಟಿಕ್ ನ ಕೆಳ ಭಾಗ ಕೈಯಲ್ಲಿ ಹಿಡಿಯುವಷ್ಟು ಜಾಗ ಬಿಟ್ಟಿರಬೇಕು. ಸಕ್ಕರೆ ಮಿಶ್ರಣ ಐಸ್ ಸ್ಟಿಕ್ ಮೇಲೆ ಸುರಿದ ಕೆಲವೇ ಸೆಂಕೆಂಡ್ ಗಳಲ್ಲಿ ಅದು ಗಟ್ಟಿಯಾಗುತ್ತೆ. ಆದ್ರೆ ಬಾಯಿಗೆ ಇಟ್ಟರೆ ಕಾಟನ್ ಕ್ಯಾಂಡಿಯಂತೆಯೇ ಕರಗಿಬಿಡುತ್ತೆ. ಈ ಕ್ಯಾಂಡಿ ಮಕ್ಕಳಿಗೆ ತುಂಬಾನೆ ಇಷ್ಟವೂ ಆಗುತ್ತೆ.

4. ಮನೆಯಲ್ಲೇ ಸುಲಭವಾಗಿ ತಯಾರಿಸಿ ಚಾಕೊಲೇಟ್‌

ಬೇಕಾಗುವ ಸಾಮಗ್ರಿಗಳು

ಅಮುಲ್ ಹಾಲಿನಪುಡಿ – 3 ಕಪ್
ಕೊಕೊ ಪುಡಿ – 1 ಕಪ್
ಸಕ್ಕರೆ – 2 ಕಪ್
ಬೆಣ್ಣೆ – 1/2 ಕಪ್
ಅಗತ್ಯವಿರುವಷ್ಟು ಗೋಡಂಬಿ, ಪಿಸ್ತಾ ಚೂರುಗಳು Saakshatv cooking recipes chocolate

Saakshatv cooking recipes chocolate

ಹಾಲಿನ ಪುಡಿ ಮತ್ತು ಕೊಕೊ ಪುಡಿಯನ್ನು ಚೆನ್ನಾಗಿ ಬೆರೆಸಿ ಅಥವಾ ಮಿಕ್ಸಿಯಲ್ಲಿ ಹಾಕಿ ಎರಡು ಪುಡಿಗಳನ್ನು ಚೆನ್ನಾಗಿ ಬೆರೆಸಿ.

ನಂತರ ದಪ್ಪವಾದ ಕೆಳಭಾಗದ ಪಾತ್ರೆಯಲ್ಲಿ ಅಥವಾ ಕಡಾಯಿಯಲ್ಲಿ ತೆಗೆದುಕೊಳ್ಳಿ.
ಅದನ್ನು ಬಿಸಿಮಾಡಿ. ನೀರು ಹಾಕಿ. ನೀರು ಬಿಸಿಯಾದಾಗ ಅದಕ್ಕೆ ಸಕ್ಕರೆ ಬೆರೆಸಿ ಚೆನ್ನಾಗಿ ಕಲಸಿ.

ಸಕ್ಕರೆ ನೀರಿನಲ್ಲಿ ಸಂಪೂರ್ಣವಾಗಿ ಕರಗಿ, ಮಿಶ್ರಣವು ಕುದಿಯಲು ಪ್ರಾರಂಭಿಸಿದಾಗ ಅದಕ್ಕೆ ಬೆಣ್ಣೆ ಸೇರಿಸಿ. ಜ್ವಾಲೆಯನ್ನು ಕಡಿಮೆ ಇರಿಸಿ.

ಬೆಣ್ಣೆ ಸಂಪೂರ್ಣವಾಗಿ ಕರಗಿಸಿದಾಗ ಅದಕ್ಕೆ ಕೊಕೊ ಹಾಲಿನ ಪುಡಿ ಮಿಶ್ರಣವನ್ನು ಸೇರಿಸಿ.

ಯಾವುದೇ ಉಂಡೆಗಳು ರೂಪುಗೊಳ್ಳದಂತೆ ಅದನ್ನು ಚೆನ್ನಾಗಿ ಕಲಕಿ ಮಿಶ್ರಣ ಮಾಡಿ.

ಮಿಶ್ರಣ ಗಟ್ಟಿಯಾಗುತ್ತಾ ಬಂದಾಗ ಅದನ್ನು ಕೆಳಗಿಳಿಸಿ.
ಬೇಕಿದ್ದರೆ ಹುರಿದ ಗೋಡಂಬಿ, ಪಿಸ್ತಾ ತುಂಡುಗಳನ್ನು ಮಿಶ್ರಣಕ್ಕೆ ಸೇರಿಸಿ.

Saakshatv cooking recipes chocolate

ಅದನ್ನು ತಣ್ಣಗಾಗಲು ಬಿಡಿ. ಸ್ವಲ್ಪ ಬೆಚ್ವಗಿರುವಾಗ ಮಿಶ್ರಣವನ್ನು ತೆಗೆದುಕೊಂಡು ಸಣ್ಣ ಚಾಕೊಲೇಟ್ ಚೆಂಡನ್ನು ತಯಾರಿಸಿ.
ಅಥವಾ ಒಂದು ಟ್ರೇ ಅನ್ನು ತೆಗೆದುಕೊಂಡು ಅದಕ್ಕೆ ಬೆಣ್ಣೆ ಸವರಿ ಅದರ ಮೇಲೆ ಚಾಕೊಲೇಟ್ ಮಿಶ್ರಣವನ್ನು ಹರಡಿ. ಈಗ ಬೇಕಾದ ಯಾವುದೇ ಆಕಾರದ ಚಾಕೊಲೇಟ್ ಅನ್ನು ಮಿಶ್ರಣದಿಂದ ತಯಾರಿಸಿ.

ಮನೆಯಲ್ಲೇ ತಯಾರಿಸಿದ ಚಾಕೊಲೇಟ್‌ಗಳನ್ನು ಸವಿಯಿರಿ.

ಸೂಚನೆ – ನೀವು ರೆಫ್ರಿಜರೇಟರ್‌ನಲ್ಲಿ ಇರಿಸುವುದಾದರೆ ಸೆಲ್ಲೋಫೇನ್ ಫಿಲ್ಮ್‌ನಿಂದ ಮುಚ್ಚಿದ ಬಟ್ಟಲಿನಲ್ಲಿ ಇರಿಸಿ ಅಥವಾ ಚಾಕೊಲೇಟ್‌ಗಳನ್ನು ಗಾಳಿಯಾಡದ ಪಾತ್ರೆಯಲ್ಲಿ ಹಾಕಿಡಿ

ಇನ್ನಷ್ಟು ಅಡುಗೆ ರೆಸಿಪಿಗಾಗಿ ಗೂಗಲ್ ನಲ್ಲಿ Saakshatv cooking ಎಂದು ಸರ್ಚ್ ಮಾಡಿ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd