ಮನುಷ್ಯನ ಪ್ರಾಣ ತೆಗೆದ ಮಂಗ..!
ದೆಹಲಿ: ಮಂಗವೊಂದು ಮನುಷ್ಯನ ತಲೆಯ ಮೇಲೆ ಇಟ್ಟಿಗೆ ಎತ್ತಿ ಹಾಕಿ ಕೊಂದಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಮೊಹಮ್ಮದ್ ಕುರುಬಾನ್ ಎನ್ನುವ ಮುವತ್ತು ವರ್ಷದ ವ್ಯಕ್ತಿ ಮೃತ ದುರ್ದೈವಿಯಾಗಿದ್ದಾನೆ. ಈತ ಸೆಂಟ್ರಲ್ ದೆಹಲಿಯಲ್ಲಿ ಅಂಗಡಿಗಳಿಗೆ ಬ್ಯಾಗ್ ಗಳನ್ನ್ ಮಾರುವ ಕೆಲಸ ಮಾಡುತ್ತಿದ್ದ.
ನಿರ್ಮಾಣ ಹಂತದಲ್ಲಿದ್ದ ಎರಡನೇ ಮಹಡಿಯ ಕಟ್ಟಡದಿಂದ ಕೋತಿಗಳು ಇಟ್ಟಿಗೆಯನ್ನ ಎತ್ತಿ ಮೊಹಮದ್ ಕುರುಬಾನ್ ತಲೆಯ ಮೇಲೆ ಹಾಕಿದ್ದವು . ತಕ್ಷಣವೇ ಆ ವ್ಯಕ್ತಿಯನ್ನ ಹಾಸ್ಪಿಟಲ್ ಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಮಂಗಗಳಿಂದ ಇದೀಗ ಮನುಷ್ಯರು ಹೆದರಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ.
ಮಂಗ ಓಂ ಪ್ರಕಾಶ ಎಂಬಾತನ ಮನೆ ಮೇಲೆ ಕುಳಿತಿತ್ತು. ಮಂಗಗಳಿಂದ ಟ್ಯಾಂಕ್ ಗಳನ್ನು ರಕ್ಷಣೆ ಮಾಡಲು ಆ ಮನೆ ಮೇಲೆ ಇಟ್ಟಿಗೆ ಇಡಲಾಗಿತ್ತು. ಈ ವೇಳೆ ಮಂಗ ಇಟ್ಟಿಗೆ ತೆಗೆದು ಮೊಹಮ್ಮದ್ ಕುರ್ಬಾನ್ ಮೇಲೆ ಎಸೆದಿದೆ. ಒಟ್ಟಾರೆಯಾಗಿ ಮಂಗ 2 ಇಟ್ಟಿಗೆ ಎಸೆದಿದೆ. ಅದ್ರಲ್ಲಿ ಒಂದು ಕುರ್ಬಾನ್ ತಲೆಗೆ ತಾಕಿದ್ದು, ಮತ್ತೊಂದು ಪಕ್ಕದ ಮನೆ ಮೇಲೆ ಬಿದ್ದಿದೆ. ಘಟನೆಯಲ್ಲಿ ಕುರ್ಬಾನ್ ಪ್ರಾಣ ಕಳೆದುಕೊಳ್ಳುವಂತಾಗಿದೆ.








