ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 2024ರಲ್ಲಿ ಬರೋಬ್ಬರಿ 108 ಜನ ಮಹಿಳೆಯರು ಕಾಣೆಯಾಗಿದ್ದು, ಈ ಪೈಕಿ 24 ಜನ ಮಹಿಳೆಯರು ಪತ್ತೆಯಾಗಿಲ್ಲ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಮಹಿಳೆಯರು ಕಾಣೆಯಾಗುವುದರ ಹಿಂದೆ ದೊಡ್ಡ ಮಾಫಿಯಾ ಇದೆ. ಅಪ್ರಾಪ್ತ ಬಾಲಕಿಯರ ಅತ್ಯಾಚಾರಕ್ಕೆ ಅವರ ಸಂಬಂಧಿ ಪುರುಷರೇ ಕಾರಣರಾಗಿದ್ದಾರೆ. ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿ ಮಾಡಿ ಅವರನ್ನು ನರಕಕ್ಕೆ ತಳ್ಳಲಾಗುತ್ತಿದೆ. 7 ರಿಂದ 8ನೇ ತರಗತಿ ಓದುವಾಗ 7-8 ತಿಂಗಳ ಗರ್ಭಿಣಿಯಾದರೆ ಏನು ಮಾಡುವುದು. ತಂದೆ -ತಾಯಿ ಹೆಣ್ಣು ಮಕ್ಕಳ ಮೇಲೆ ಗಮನ ಹರಿಸಬೇಕು. ಇಲ್ಲದಿದ್ದರೆ ಅನಾಹುತ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರ ಹಕ್ಕುಗಳಿಗೆ ಗೌರವ ಬಂದಿದೆ. ಮಹಿಳೆಯರ ಮೇಲೆ ಹೂಡಿಕೆ ಮಾಡುವುದರಿಂದ ಕುಟುಂಬ, ಸಮಾಜ ಹಾಗೂ ದೇಶದ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದ್ದಾರೆ.