ಫ್ರೀಟೌನ್: ಪಶ್ಚಿಮ ಆಫ್ರಿಕಾದ ಸಿಯೆರಾ ಲಿಯೋನ್ ಎನ್ನುವ ಪುಟ್ಟ ದೇಶದ ರಸ್ತೆಗಳು ಈಗ ರಕ್ತಸಿಕ್ತವಾಗಿವೆ. ತೈಲ ಟ್ಯಾಂಕರೊಂದು ಸ್ಫೋಟಗೊಂಡು ಕನಿಷ್ಠ 91 ಜನರು ಸಾವನ್ನಪ್ಪಿದ್ದಾರೆ. ಸಿಯೆರಾ ಲಿಯೋನ್ ರಾಜಧಾನಿ ಫ್ರೀಟೌನ್ನಲ್ಲಿ ಕೆಲವು ಗಂಟೆಗಳ ಹಿಂದೆ ಇಂಧನ ಟ್ಯಾಂಕರ್ ಅಪಘಾತಕ್ಕೀಡಾಗಿತ್ತು. ಅಪಘಾತದ ನಂತರ ಇಂಧನ ಸೋರಿಕೆ ಶುರುವಾಗಿದೆ. ಇದನ್ನು ನೋಡಿದ ಜನ ಇಂಧನ ಸಂಗ್ರಹಿಸಲು ಮುಗಿಬಿದ್ದಿದ್ದಾರೆ ಈ ಸಂದರ್ಭದಲ್ಲಿ ಏಕಾಏಕಿ ಟ್ಯಾಂಕರ್ ಸ್ಫೋಟಗೊಂಡು ಕನಿಷ್ಟ 91 ಜನ ಸಾವನ್ನಪ್ಪಿದ್ದಾರೆ.
ಇದು ಇಂಧನ ಸಂಗ್ರಹಕಾರರನ್ನು ಕೆರಳಿಸಿದೆ. ಅಲ್ಲಿದ್ದ ಅಂಗಡಿಗಳು ಹಾಗೂ ರಸ್ತೆಯಲ್ಲಿದ್ದ ಜನರಿಗೂ ಬೆಂಕಿ ಹೊತ್ತಿಕೊಂಡಿದೆ. ಇದರೊಂದಿಗೆ ಎಲ್ಲೆಂದರಲ್ಲಿ ಸುಟ್ಟ ಶವಗಳೇ ಕಾಣಸಿಗುತ್ತಿವೆ. ಸದ್ಯಕ್ಕೆ ಅಗ್ನಿಶಾಮಕ ದಳ ಮತ್ತು ತುರ್ತು ರಕ್ಷಣಾ ದಳಗಳು ಬಂದು ರಕ್ಷಣೆಯಲ್ಲಿ ತೊಡಗಿವೆ. ಅಗ್ನಿಯನ್ನ ನಿಯಂತ್ರಿಸುವಲ್ಲಿ ಅಲ್ಲಿನ ಸಿಬ್ಬಂದಿ ಹರಸಹಾಸ ಪಡುತ್ತಿವೆ.