ಎಚ್ಚರ : ರಾಜ್ಯಕ್ಕೆ ಅಪ್ಪಳಿಸಲಿದೆ ಮತ್ತೊಂದು ಚಂಡಮಾರುತ
ಬೆಂಗಳೂರು : ರಾಜ್ಯಾದ್ಯಂತ ಬೀಳುತ್ತಿರುವ ಅಕಾಲಿಕ ಮಳೆಗೆ ಜನರು ರೋಸಿ ಹೋಗಿದ್ದಾರೆ. ಸದ್ಯ ಒಂದೆರೆಡು ದಿನ ರಿಲೀಫ್ ಕೊಟ್ಟಿರುವ ವರುಣ ಮತ್ತೊಂದು ರೂಪದಲ್ಲಿ ಮತ್ತೆ ಬರಲಿದ್ದಾನೆ, ಕಾಡಲಿದ್ದಾನೆ.
ಬಂಗಾಳ ಕೊಲ್ಲಿ ಸಮುದ್ರದ ಭಾಗದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ನ.26ರ ವೇಳೆಗೆ ಚಂಡ ಮಾರುತವಾಗಿ ಬದಲಾಗುವ ಸಾಧ್ಯತೆ ಇದೆ, ಇದರಿಂದ ಪುದುಚೇರಿ, ತಮಿಳುನಾಡು, ಆಂಧ್ರ ಪ್ರದೇಶದ ಕರಾವಳಿ ಭಾಗಕ್ಕೆ ಚಂಡಮಾರುತ ಬಂದಪ್ಪಳಿಸಲಿದೆ.
ಕರ್ನಾಟಕ ರಾಜ್ಯದ್ಯಂತ ದಕ್ಷಿಣ ಒಳನಾಡಿನ ಬಹುತೇಕ ಕಡೆ ಮೂರ್ನಾಲ್ಕು ದಿನ ಮಳೆಯಾಗುವ ಸಾಧ್ಯತೆ ಇದೆ. ಅದರಲ್ಲೂ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಚಾಮರಾಜನಗರ, ತುಮಕೂರು ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಲಿದ್ದಾನೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ಚಂಡಮಾರುತವನ್ನ ಎದುರಿಸಲು ದಕ್ಷಿಣ ಭಾರತ ರಾಜ್ಯಗಳು ಸಿದ್ದತೆ ಮಾಡಿಕೊಳ್ಳುತ್ತಿವೆ.








