ಬಸ್ ಗಳಲ್ಲಿ ಲಗೇಜ್ (Luggage) ದರ ಹೆಚ್ಚಳ ಮಾಡಿದ KSRTC
ಕೆಲ ದಿನಗಳ ಹಿಂದಯಷ್ಟೆ ಆಟೋ ಚಾರ್ಜ್ ನ ಪ್ರಯಾಣದ ದರ ಏರಿಕೆಯಾಗಿತ್ತು, ಓಲಾ ಊಬರ್ ನಂತ ಟ್ಯಾಕ್ಸಿಗಳನ್ನ ಜಿ ಎಸ್ ಟಿ ವ್ಯಾಪ್ತಿಗೆ ಸೇರಿಸಿದ್ದರಿಂದ ಅವುಗಳ ಪ್ರಯಾಣ ದರ ಕೂಡ ಜಾಸ್ತಿಯಾಗಿದೆ ಈಗ ಸಾಲಿಗೆ ಕೆ ಎಸ್ ಆರ್ ಟಿ ಸಿ ಸಹ ಸೇರಿಕೊಂಡಿದೆ.
ಪ್ರಯಾಣಿಕರ ಲಗೇಜ್ಗಳ ದರವನ್ನ ಕೆ ಎಸ್ ಆರ್ ಟಿ ಸಿ ನಿಗಮವು ಜಾಸ್ತಿ ಮಾಡಿ ಆದೇಶ ಹೊರಡಿಸಿದೆ. ಇದರಿಂದ ಶ್ರೀ ಸಾಮನ್ಯನಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. , ನಷ್ಟದ ನೆಪವೊಡ್ಡಿ KSRTC ಬಸ್ ಗಳಲ್ಲಿ ಲಗೇಜ್ ದರ ಪರಿಷ್ಕರಣೆ ಮಾಡಿದೆ.
ನೂತನ ದರಗಳು ಇದೇ ಡಿಸೆಂಬರ್ 10 ರಿಂದಲೇ ಜಾರಿಗೆ ಬರಲಿವೆ. ಪ್ರತಿ ಸ್ಟೇಜ್ ಆಧಾರದ ಮೇಲೆ ಲಗೇಜ್ ದರ ನಿಗದಿಪಡಿಸಲಾಗಿದೆ.
ಪರೀಷ್ಕೃತ ಲಗೇಜ್ ದರದ ಪಟ್ಟಿ ಇಂತಿದೆ.
1 ರಿಂದ 5 ಹಂತ ಹಿಂದಿನ ದರ ರೂ.5 ಈಗಿನ ದರ ರೂ.5.
6 ರಿಂದ 10ನೇ ಹಂತ ಹಿಂದಿನ ದರ ರೂ.10 ನೂತನ ದರ ರೂ.10
11 ರಿಂದ 15ನೇ ಹಂತ ಹಿಂದಿನ ದರ ರೂ.15 ನೂತನ ದರ ರೂ.17..
16 ರಿಂದ 20ನೇ ಹಂತ ಹಿಂದಿನ ದರ ರೂ.18 ನೂತನ ದರ ರೂ.21
21 ರಿಂದ 25ನೇ ಹಂತ ಹಿಂದಿನ ದರ ರೂ.21 ನೂತನ ದರ ರೂ.24
26 ರಿಂದ 30ನೇ ಹಂತ ಹಿಂದಿನ ದರ ರೂ.25 ನೂತನ ದರ ರೂ.28
31 ರಿಂದ 35ನೇ ಹಂತ ಹಿಂದಿನ ದರ ರೂ.29 ನೂತನ ದರ ರೂ.32
36 ರಿಂದ 40ನೇ ಹಂತ ನೂತನ ದರ ರೂ.36
ಹಿಂದಿನ ದರ ರೂ.33
41 ರಿಂದ 45ನೇ ಹಂತ ನೂತನ ದರ ರೂ.39
ಹಿಂದಿನ ದರ ರೂ.36
46 ರಿಂದ 50ನೇ ಹಂತ ನೂತನ ದರ ರೂ.43
ಹಿಂದಿನ ದರ ರೂ.40
51 ರಿಂದ 55ನೇ ಹಂತ ನೂತನ ದರ ರೂ.47
ಹಿಂದಿನ ದರ ರೂ.44
56 ರಿಂದ 60ನೇ ಹಂತ ನೂತನ ದರ ರೂ.51
ಹಿಂದಿನ ದರ ರೂ.48
61 ರಿಂದ 65ನೇ ಹಂತ ನೂತನ ದರ ರೂ.54
ಹಿಂದಿನ ದರ ರೂ.51
66 ರಿಂದ 70- ನೂತನ ದರ ರೂ.58
ಹಿಂದಿನ ದರ ರೂ.55
156 -160 ಹಂತ 123 ರಿಂದ 126 ಏರಿಕೆ