ತೋತಾಪುರಿ ಚಿತ್ರದ ಹಾಡಿನ ಟೀಸರ್ ರಿಲೀಸ್…..
ನೀರ್ ದೋಸೆ ಯಂತಹ ಹಿಟ್ ಸಿನಿಮಾ ಕೊಟ್ಟಿದ್ದ ನಿರ್ದೇಶಕ ವಿಜಯ್ಪ್ರಸಾದ್ ಹಾಗೂ ನವರಸ ನಾಯಕ ಜಗ್ಗೇಶ್ ಕಾಂಬಿನೇಷನ್ನಲ್ಲಿ ಮೂಡಿ ಬರ್ತೀರೋ ಬಹು ನಿರೀಕ್ಷಿತ ಚಿತ್ರ ತೋತಾಪುರಿ ಹಾಡಿನ ಟೀಸರ್ ರಿಲೀಸ್ ಆಗಿದೆ. ತೋತಾಪುರಿ ಸಿನಿಮಾ. ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ತೋತಾಪುರಿ ಸಿನಿಮಾದ ಹಾಡಿನ ಟೀಸರ್ನ ಸಣ್ಣ ಗ್ಲಿಂಪ್ಸ್ ಒಂದನ್ನ ಅನಾವರಣ ಮಾಡಿದೆ…
ಸಿನಿಮಾದಲ್ಲಿ ನಾಯಕ ಜಗ್ಗೇಶನಿಗೆ ನಾಯಕಿಯಾಗಿ ನಟಿ ಅದಿತಿ ಪ್ರಭುದೇವ ನಟಿಸಿದ್ದಾರೆ..ಮುಸ್ಲೀಂ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ, ಜಗ್ಗೇಶ್ ಅವರನ್ನ ಇಂಪ್ರೆಸ್ ಮಾಡುವ ರೀತಿ ಹಾಡು ಮೂಡಿ ಬಂದಿದೆ.. ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಕ್ಯಾಚಿಯಾಗಿ ಟ್ಯೂನ್ ಹಾಕಿದ್ದಾರೆ.
ತೋತಾಪುರಿ ಸಿನಿಮಾದಲ್ಲಿ ಸ್ಟಾರ್ ನಟರ ದಂಡೇ ಇದೆ, ಡಾಲಿ ಧನಂಜಯ್ ಸುಮನ್ ರಂಗನಾಥ್ ವಿಶೇಷ ಪಾತ್ರದಲ್ಲು ನಟಿಸಿದ್ದರೆ ದತ್ತಣ್ಣ ಮತ್ತು ವೀಣಾ ಸುಂದರ್ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. Teaser release of the song from Thotapuri kannada cinema