ಶಾಮನಿಸಂ – ಅಲೌಕಿಕ ವಿಚಾರದ ಬೆನ್ನುಬಿದ್ದ ಯುವತಿ ನಾಪತ್ತೆ…
ಅಲೌಕಿಕ ವಿಚಾರಗಳಲ್ಲಿ ಆಸಕ್ತಿ ಬೆಳೆಸಿಕೊಂಡ ಹದಿನೇಳು ವರ್ಷದ ಹುಡುಗಿಯೊಬ್ಬಳು 2 ತಿಂಗಳಿನಿಂದ ಕಾಣೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಶಾಮನಿಸಂ ಎಂಬ ಪುರಾತನ ಧಾರ್ಮಿಕ ಆಚಾರದ ಬಗ್ಗೆ ತಿಳುದುಕೊಳ್ಳುವು ಕುತೂಹಲದಿಂದ ಕಾಣೆಯಾಗಿರಬಹುದು ಎಂದು ಪೊಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಶಾಮನಿಸಂ ಎಂಬುದೊಂದು ಧಾರ್ಮಿಕ ಆಚರಣೆಯಾಗಿದ್ದು ಇದನ್ನ ಅಭ್ಯಾಸ ಮಾಡಿದರು ಆತ್ಮಗಳೊಂದಿಗೆ ಸಂಹವಹನ ಮಾಡುತ್ತಾರೆ. ಆತ್ಮಗಳ ಪ್ರಪಂಚದ ಮೂಲಕ ಆಧ್ಯಾತ್ಮಿಕ ಮತ್ತು ದೈಹಿಕ ಸಮಸ್ಯೆಗಳನ್ನು ಗುಣಪಡಿಸುವ ಪ್ರಾಚೀನ ಅಭ್ಯಾಸವಾಗಿದೆ.
ಬೆಂಗಳೂರಿನ ಅನುಷ್ಕಾ ಎಂಬ ಯುವತಿ ಅಕ್ಟೋಬರ್ 31 ರಂದು ಎರಡು ಜೊತೆ ಬಟ್ಟೆ ಮತ್ತು 2,500 ರೂ.ನಗದು ಸಮೇತ ತನ್ನ ಮನೆಯಿಂದ ಹೊರಟಿರುವುದಾಗಿ ಪೋಷಕರು ಹೇಳಿದ್ದಾರೆ.
ಶಾಮನಿಸಂ ತಂತ್ರದ ಬಗ್ಗೆ ಆನ್ ಲೈನ್ ನಲ್ಲಿ ಆಗಾಗ ಓದುತ್ತಿದ್ದಳು ಎಂದು ಪೋಷಕರು ತಿಳಿಸಿದ್ದಾರೆ. ಅನುಷ್ಕಾ 12ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಶಾಮನಿಸಂನತ್ತ ಆಕರ್ಷಿತರಾದರು. ಆಕೆಯ ಪೋಷಕರು ಆಧ್ಯಾತ್ಮಿಕ ಜೀವನ ಮತ್ತು ಸೈಕೆಡೆಲಿಕ್ ಶಿಕ್ಷಣ ತಜ್ಞರಾಗಿದ್ದು ಇದರಿಂದ ಮಗಳು ಪ್ರಭಾವಿತರಾಗಿದ್ದಳು. ಶಾಮನಿಸಂ ಅನ್ನು ಅಭ್ಯಾಸ ಮಾಡುವ ಬಯಕೆಯ ಬಗ್ಗೆ ಅವರೊಂದಿಗೆ ಮಾತನಾಡುತ್ತಿದ್ದಳು ಎಂದು ಪೋಷಕರು ತಿಳಿಸಿದ್ದಾರೆ.
Karnataka: Family members of a minor girl, missing for the last 2 months from Bengaluru, suspect a 'shamanism' connection to her disappearance
"She told us that she wanted to do shamanism type of meditation. We told her to learn it at home only," says her mother Archana (1/2) pic.twitter.com/3su6RpuGDP
— ANI (@ANI) December 30, 2021
ಆಕೆಯ ಮೇಲೆ ಯಾರೋ ಪ್ರಭಾವಿಸಿದ್ದಾರೆ ಎಂದು ಆಕೆಯ ಸ್ವಂತ ನಿರ್ಣಯವನ್ನ ತೆಗೆದುಕೊಳ್ಳುವ ಸ್ಥಿಯಲ್ಲಿ ಇಲ್ಲದಿರಬಹುದು ಎಂದು ತಂದೆ ಅಭಿಷೇಕ್ ಹೇಳಿದ್ದಾರೆ.
ಈ ಕೇಸ್ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿದ್ದು ಹಲವು ಸ್ಥಲಗಳಲ್ಲಿ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸುತ್ತಿದ್ದಾರೆ. ಈ ಕುರಿತು ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದು ಯುವತಿಯ ಸುಳಿಸು ಸಿಕ್ಕ ಕೂಡಲೆ ತಿಳಿಸುವಂತೆ ಸಾರ್ವಜನಿಕರ ಮೊರೆ ಹೋಗಿದ್ದಾರೆ.