COVID-19 UPDATE | ಬೆಂಗಳೂರಲ್ಲಿ ಇಂದು 18 ಸಾವಿರ ಕೋವಿಡ್ ಕೇಸ್ 18 thousand covid 19 cases in Bangalore today saaksha tv
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಅಬ್ಬರ ಮುಂದುವರೆದಿದ್ದು, ಇಂದು 18 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್ ಗಳು ಪತ್ತೆಯಾಗಿವೆ.
ಮಂಗಳವಾರ 10,800 ಕೋವಿಡ್ ಕೇಸ್, ಬುಧವಾರ 15,617 ಕೇಸ್, ಇಂದು 18,374 ಜನರಲ್ಲಿ ಕೋವಿಡ್ ದೃಢಪಟ್ಟಿದ್ದು, ಇದರಿಂದ ಸಿಲಿಕಾನ್ ಸಿಟಿ ಕೊರೊನಾ ಹಾಪ್ ಸ್ಪಾಟ್ ಆಗಿ ಪರಿಣಮಿಸಿದೆ.
ಇಂದು ದಕ್ಷಿಣ ವಲಯ 3,003, ಬೆಂಗಳೂರು ಪೂರ್ವ 2,996, ಮಹದೇವಪುರ 2,181 , ಪಶ್ಚಿಮ 2,110, ಬೊಮ್ಮನಹಳ್ಳಿ ವಲಯದಲ್ಲಿ 2096, ದಾಸರಹಳ್ಳಿ 367, ಆರ್ ಆರ್ನಗರ 1,362, ಯಲಹಂಕ 1,233, ಅನೇಕಲ್ 698, ಬೆಂಗಳೂರು ಹೊರವಲಯ 1,288 ಸೇರಿ ಒಟ್ಟು 18,374 ಕೇಸ್ ಗಳು ಪತ್ತೆಯಾಗಿವೆ.