ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರಪತಿಗಳಿಂದ ನಿಡಲ್ಪಡುವ ಗೌರವಾನ್ವಿತ ಶೌರ್ಯ ಪ್ರಶಸ್ತಿಗೆ ಈ ಬಾರಿ ಕರ್ನಾಟಕದ 19 ಪೊಲೀಸರು ಆಯ್ಕೆಯಾಗಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಅತ್ಯುತ್ತಮ ಸೇವೆ ಸಲ್ಲಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ರಾಜ್ಯದ 19 ಪೊಲೀಸರಿಗೆ ರಾಷ್ಟ್ರಪತಿಗಳಿಂದ ಪದಕ ಲಭಿಸಲಿದೆ.
ಪ್ರಶಸ್ತಿ ಪುರಸ್ಕೃತರ ಲಿಸ್ಟ್ ಹೀಗಿದೆ.
- ಪರಮೇಶ್ವರ್ ಹೆಗ್ಡೆ – ಉಪಪೊಲೀಸ್ ವರಿಷ್ಠಾಧಿಕಾರಿ, ಆರ್ಥಿಕ ಅಪರಾಧ ವಿಭಾಗ, ಸಿಐಡಿ, ಬೆಂಗಳೂರು.
- ಅರುಣ್ ನಾಗೇಗೌಡ – ಉಪಪೊಲೀಸ್ ವರಿಷ್ಠಾಧಿಕಾರಿ, ಶ್ರೀರಂಗಪಟ್ಟಣ ಮಂಡ್ಯ.
- ಹೇಮಂತ್ಕುಮಾರ್ – ಉಪಪೊಲೀಸ್ ವರಿಷ್ಠಾಧಿಕಾರಿ, ಲೋಕಾಯುಕ್ತ, ಬೆಂಗಳೂರು.
- ಸತೀಶ್ ಮಹಾಲಿಂಗ್ಯ ಹೊನ್ನೇನಹಳ್ಳಿ- ಉಪಪೊಲೀಸ್ ಆಯುಕ್ತರು- ಈಶಾನ್ಯ ಸಂಚಾರ ಪೊಲೀಸ್ ಠಾಣೆ-ಬೆಂಗಳೂರು.
- ಮಂಜುನಾಥ್ ರಾಜಣ್ಣ -ಉಪ ಪೊಲೀಸ್ ವರಿಷ್ಠಾಧಿಕಾರಿ, ಎಸಿಬಿ, ಮಂಡ್ಯ.
- ರಮೇಶ್ ಕುಮಾರ್ ಬೈರೂಪ್ಪ ಹಿರಿಯೂರು- ಉಪಪೊಲೀಸ್ ವರಿಷ್ಠಾಧಿಕಾರಿ-ರಾಜ್ಯ ಗುಪ್ತಚರವಿಭಾಗ, ತುಮಕೂರು.
- ಉಮೇಶ್ ಪಣಿತಡಕ- ಉಪಪೊಲೀಸ್ ವರಿಷ್ಠಾಧಿಕಾರಿ-ಪೊಲೀಸ್ ತರಬೇತಿ ಶಾಲೆ, ಜೋತಿನಗರ , ಮೈಸೂರು.
- ದಿವಾಕರ ಚನ್ನಪಟ್ಟಣ ನರಸಿಂಹ ಜತ್ತಪ್ಪ- ಪೊಲೀಸ್ ಇನ್ಸ್ಪೆಕ್ಟರ್ ಮಡಿಕೇರಿ ಗ್ರಾಮೀಣ ವೃತ್ತ, ಕೊಡಗು.
- ಜಿ.ರುದ್ರೇಶ್ ನಾಗರಾಜ್- ಕೆಎಸ್ಆರ್ಪಿ ಇನ್ಸ್ಪೆಕ್ಟರ್, ಬೆಂಗಳೂರು.
- ಲಕ್ಷ್ಮಿನಾರಾಯಣ ಅನಂತರಾಮನ್ ಬೀಚನಹಳ್ಳಿ-ಪೊಲೀಸ್ ಸಬ್ಇನ್ಸ್ಪೆಕ್ಟರ್, ನಗರ ವಿಶೇಷ ವಿಭಾಗ, ಬೆಂಗಳೂರು.
- ಬಹಬಲೇಶ್ವರ್ ಚಂದ್ರಕರ್ ಹೇಮ-ಕೆಎಸ್ಆರ್ಪಿ ಸಬ್ಇನ್ಸ್ಪೆಕ್ಟರ್, ಬೆಂಗಳೂರು
- ಕೆ.ಜಯಪ್ರಕಾಶ್- ಪೊಲೀಸ್ ಸಬ್ಇನ್ಸ್ಪೆಕ್ಟರ್, ಮಂಗಳೂರು ನಗರ, ನಿಯಂತ್ರಣ ಕೊಠಡಿ.
- ಹನುಮಂತಪ್ಪ ನಂಜುಂಡಯ್ಯ- ಸಹಾಯಕ ಸಬ್ಇನ್ಸ್ಪೆಕ್ಟರ್, ಡಿಸಿಆರ್ಬಿ, ಎಸ್ಪಿ ಕಚೇರಿ, ಚಿಕ್ಕಬಳ್ಳಾಪುರ.
- ಕೆ.ಅತೀಕ್ ಯು.ಆರ್.ರೆಹಮಾನ್-ಸಹಾಯಕ ಸಬ್ಇನ್ಸ್ಪೆಕ್ಟರ್, ಬೆರಳಚ್ಚು ವಿಭಾಗ , ಶಿವಮೊಗ್ಗ.
- ರಾಮಾಂಜನೇಯ- ಸಹಾಯಕ ಸಬ್ಇನ್ಸ್ಪೆಕ್ಟರ್, ಕೆ.ಬಿ.ಕ್ರಾಸ್ ಪೊಲೀಸ್ ಠಾಣೆ, ತುಮಕೂರು.
- ರುದ್ರಪ್ಪ ನಾಗಪ್ಪ ಬಾಳೆಕಾಯಿ-ವೃತ್ತ ಆರಕ್ಷಕ ನಿರೀಕ್ಷಕರು(ಸಿಪಿಐ) -ರಾಣೆಬೆನ್ನೂರು, ಗ್ರಾಮೀಣ ಪೊಲೀಸ್ ಠಾಣೆ, ಹಾವೇರಿ.
- ಹೊನ್ನಪ್ಪ ಕರಿಯಪ್ಪ -ಮುಖ್ಯ ಪೇದೆ, ಎಸ್ಪಿ ಕಚೇರಿ, ಬೆಂಗಳೂರು.
- ಎಚ್.ಎಂ.ಶೈಲೇಂದ್ರ -ಉಪಪೊಲೀಸ್ ವರಿಷ್ಠಾಧಿಕಾರಿ, ಸೋಮವಾರಪೇಟೆ ವಿಭಾಗ , ಕೊಡಗು
- ವಿ.ಎಲ್.ಎನ್. ಪ್ರಸನ್ನಕುಮಾರ್- ಸಹಾಯಕ ಸಬ್ಇನ್ಸ್ಪೆಕ್ಟರ್, ಸಿಐಡಿ ವಿಭಾಗ, ಬೆಂಗಳೂರು. ಇನ್ನೂ ಪ್ರಶಸ್ತಿ ಪುರಸ್ಕೃತರ ಪೈಕಿ ವಿ.ಎಲ್.ಎನ್. ಪ್ರಸನ್ನಕುಮಾರ್ ಹಾಗೂ ಎಚ್.ಎಂ.ಶೈಲೇಂದ್ರ ಅವರು ರಾಷ್ಟ್ರಪತಿಗಳ ವಿಶಿಷ್ಠ ಸೇವಾ ಪೊಲೀಸ್ ಪದಕ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.








