‘1980’ : ರೆಟ್ರೋ ಲುಕ್ ನಲ್ಲಿ ಅಭಿಮಾನಿಗಳಿಗೆ ದರ್ಶನ ನೀಡಿದ ಪ್ರಿಯಾಂಕಾ..!
ನಟಿ ಪ್ರಿಯಾಂಕಾ ಉಪೇಂದ್ರ ಅವರು ಹೊಸ ಅವತಾರದಲ್ಲಿ ಪ್ರೇಕ್ಷಕರಿಗೆ ದರ್ಶನ ಕೊಡಲು ಸಜ್ಜಾಗಿದ್ದಾರೆ. ತಮ್ಮ ಹೊಸ ಸಿನಿಮಾ1980ರಲ್ಲಿ ಪ್ರಿಯಾಂಕಾ ರೆಟ್ರೋ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದು, ಇತ್ತೀಚೆಗಷ್ಟೇ ಈ ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿ ಪ್ರಿಯಾಂಕಾ ರೆಟ್ರೋ ಲುಕ್ ಅನಾವರಣಗೊಂಡಿದೆ.
ಈಗಾಗಲೇ “1980′ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಟೀಸರ್ ಬಿಡುಗಡೆಯ ಮೂಲಕ ಪ್ರೇಕ್ಷಕರ ಕುರೂಹಲ ಹೆಚ್ಚಿಸಿದೆ. ಆನಂದ್ ಆಡಿಯೋ ಯು- ಟ್ಯೂಬ್ ಚಾನೆಲ್ ನಲ್ಲಿ “1980′ ಟೀಸರ್ ಬಿಡುಗಡೆಯಾಗಿದ್ದು, ಟೀಸರ್ ಗೆ ಸೋಶಿಯಲ್ ಮೀಡಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಥೂ.. ಎಂಥ ಕ್ರೂರಿ ಈಕೆ… ಜಿರಾಫೆಯನ್ನು ಕೊಂದು ಅದರ ಹೃದಯದ ಜೊತೆಗೆ ಫೋಟೋಗೆ ಪೋಸ್..!
ಪೂಜಶ್ರೀ ಪೊ›ಡಕ್ಷನ್ ಮತ್ತು ನೇಸರ ಪ್ರೊಡಕ್ಷನ್ ಬ್ಯಾನರ್ನಲ್ಲಿ ಸಿನಿಮಾ ಮೂಡಿಬಂದಿದ್ದು, ಚಿತ್ರಕ್ಕೆ ರಾಜ್ ಕಿರಣ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅವರೊಂದಿಗೆ ಶ್ರೀಧರ್, ಅರವಿಂದ್ ರಾವ್, ಶರಣ್ಯಾ ಶೆಟ್ಟಿ, ರಮೇಶ್ ಪಂಡಿತ್, ಶಂಕರ್ ಅಶ್ವತ್, ಕಿಶೋರ್ ಕುಮಾರ್, ವಿಶಾಲ್ ಧೀರಜ್, ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಜೀವ ಆಂಟೋನಿ ಛಾಯಾಗ್ರಹಣವಿದ್ದು, ಚಿಂತನ್ ವಿಕಾಸ್ ಸಂಗೀತವಿದೆ.