ಬೇಸಿಗೆಯಲ್ಲಿ ತಂಪಾಗಲು, ಮ್ಯಾಂಗೋ ಸ್ಟ್ರಾಬೆರಿ ಡ್ರಿಂಕ್ಸ್, ಮ್ಯಾಂಗೋ ಲಸ್ಸಿ ಮನೆಯಲ್ಲೇ ಮಾಡಿ ನೋಡಿ..
ಬೇಸಿಗೆಯಲ್ಲಿ ತಂಪಾದ ಪಾನೀಯ ಗಳಿಗೆ ಬೇಡಿಕೆ ಹೆಚ್ಚು. ಬಿಸಿಲ ಧಗೆಯಿಂದ ಪಾರಾಗಲು ಯಾವಾಗಲೂ ಪ್ರೂಟ್ ಶಾಪ್ ಜ್ಯೂಸ್ ಸೆಂಟರ್ ಗಳ ಮೊರೆ ಹೋಗುವುದು ಸಹ ಕಷ್ಟ. ಹಾಗಾಗಿ ಮನೆಯಲ್ಲಿ ಮಾಡಬಹುದಾದ ಸೀಜನ್ ಹಣ್ಣಾದ ಮಾವಿನ ಹಣ್ಣಿನ ಜ್ಯೂಸ್ ರೆಸಿಪಿಗಳನ್ನ ನಾವು ಹೇಳಿಕೊಡ್ತೀವಿ ಓದಿ…
ಈ ಬೇಸಿಗೆಯಲ್ಲಿ ನೀವು ಮನೆಯಲ್ಲಿಯೇ ಪ್ರಯತ್ನಿಸಬಹುದಾದ ಮಾವಿನ ಪಾನೀಯಗಳು ಇಲ್ಲಿವೆ:
ಮ್ಯಾಂಗೋ ಸ್ಟ್ರಾಬೆರಿ ಡ್ರಿಂಕ್ಸ್…
ಬೇಕಾಗುವ ಪದಾರ್ಥಗಳು
ಮೊಸರು – 300 ಗ್ರಾಂ
ಮಾವಿನ ಹಣ್ಣು – 50 ಗ್ರಾಂ
ಸ್ಟ್ರಾಬೆರಿ – 50 ಗ್ರಾಂ
ಸಕ್ಕರೆ – 40 ಗ್ರಾಂ
ತಾಜಾ ಪುದೀನ ಎಲೆಗಳು – 5 ಗ್ರಾಂ
ಹಸಿರು ಮೆಣಸಿನಕಾಯಿ – 1 ಸಾಕು
ಶುಂಠಿ – 5 ಗ್ರಾಂ
ಮಾಡುವ ವಿಧಾನ
- ಮಾವಿನ ಹಣ್ಣು, ಶುಂಠಿ, ಪುದೀನ ಎಲೆಗಳು, ಮೆಣಸಿನಕಾಯಿ ಮತ್ತು ಅರ್ಧ ಸಕ್ಕರೆಯನ್ನು ಜಾರ್ ನಲ್ಲಿ ಹಾಕಿ ಮಿಕ್ಸ್ ಮಾಡಿಕೊಳ್ಳಿ.
- ಇನ್ನೊಂದು ಜಾರ್‌ನಲ್ಲಿ ಸ್ಟ್ರಾಬೆರಿ ಮತ್ತು ಉಳಿದ ಸಕ್ಕರೆಯನ್ನು ಒಟ್ಟಿಗೆ ಮಿಕ್ಸ್ ಮಾಡಿಕೊಳ್ಳಿ.
- ಒಂದು ಬಟ್ಟಲಿನಲ್ಲಿ ಮೊಸರನ್ನು ತಿಳಿಯಾಗುವ ತನಕ ಕದಡಿ.
ನಂತರ ಗ್ಲಾಸ್ ಗೆ ಹಾಕಿಕೊಂಡು ತಣ್ಣಗಾದ ನಂತರ ಕುಡಿಯಿರಿ…
ಮ್ಯಾಂಗೋ ಲಸ್ಸಿ
ಪದಾರ್ಥಗಳು
ಮೊಸರು – 150 ಮಿಲಿ
ಮಾಗಿದ ಮಾವಿನ ಹಣ್ಣು – ೦೧
ಸಕ್ಕರೆ – 50 ಗ್ರಾಂ
ನೀರು – 75 ಮಿಲಿ
ವಿಧಾನ:
- ಮಿಕ್ಸಿ ಜಾರ್ ನಲ್ಲಿ ಮೊಸರು ತೆಗೆದುಕೊಂಡು ಮಾವಿನ ಹಣ್ಣಿನ ತಿರುಳು ಸಕ್ಕರೆ ಸೇರಿಸಿ. ಅಗತ್ಯಕ್ಕೆ ತಕ್ಕಂತೆ ಸ್ವಲ್ಪ ನೀರು ಬೆರೆಸಿ.
- ಕುಡಿಯಲು ತಿಳಿಯಾಗುವ ತನಕ ಮಿಕ್ಸ್ ಮಾಡಿ
- ನಂತರ ತಣ್ಣಗಿರಿಸಿ ಆನಂತರ ಗ್ಲಾಸ್ ಗೆ ಸರ್ವ್ ಮಾಡಿ ಕುಡಿಯಿರಿ