ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಕಾಡಾನೆ ಸಾವು….
ವಿದ್ಯುತ್ ಸ್ಪರ್ಶಿಸಿ ಎರಡು ಕಾಡಾನೆಗಳು ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಸಿದ್ದಾಪುರ ಸಮೀಪದ ನೆಲ್ಯಹುದಿಕೇರಿ ಬಳಿ ನಡೆದಿದೆ.
ಕೋಣೇರಿ ಪ್ರಕಾಶ್ ಮಂದಣ್ಣ ಹಾಗೂ ಮಂಡೆಪಂಡ ಸುಮಂತ್ ಚಂಗಪ್ಪ ಎಂಬುವವರ ತೋಟದಲ್ಲಿ ಘಟನೆ ನಡೆದಿದೆ. ವಿದ್ಯುತ್ ಸ್ಪರ್ಶಿಸಿ ಒಂದು ಗಂಡು, ಒಂದು ಹೆಣ್ಣು ಆನೆ ಸಾವನ್ನಪ್ಪಿದೆ.

ತೋಟದಲ್ಲಿ 11 ಕೆ.ವಿ ವಿದ್ಯುತ್ ತಂತಿ ಹಾದು ಹೋಗಿವೆ. ಮರದ ಕೊಂಬೆ ಬಿದ್ದು ವಿದ್ಯುತ್ ತಂತಿಗಳು ಕೆಳಗಿ ಬಾಗಿದ್ದವು ಈ ವೇಳೆ ತಂತಿ ಸ್ಪರ್ಶಿಸಿ ಕಾಡಾನೆಗಳು ಮೃತಪಟ್ಟಿರುವುದಾಗಿ ತಿಳಿದು ಬಂದಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
2 elephants died because of electric shock in Siddapura, Karnataka








