ಕಡಿದ ಮತ್ತಿನಲ್ಲಿ ಚಲಿಸುತ್ತಿರುವ ಕಾರಿನ ಮೇಲೆ ಯುವಕರ ಡ್ಯಾನ್ಸ್ – 20,000 ದಂಡ
ಇಬ್ಬರು ಯುವಕರು ಕುಡಿದ ಅಮಲಿನಲ್ಲಿ ಕಾರಿನ ರೂಫ್ ಮೇಲೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ವೀಡಿಯೋವನ್ನ ಗಮನಿಸಿದ ಗಾಜಿಯಾಬಾದ್ ಟ್ರಾಫಿಕ್ ಪೊಲೀಸರು ಕಾರು ಮಾಲೀಕರಿಗೆ 20,000 ರೂಪಾಯಿ ದಂಡ ವಿಧಿಸಿದ್ದಾರೆ.
ಟ್ವಿಟರ್ ಬಳಕೆದಾರರಾದ ಪ್ರಶಾಂತ್ ಕುಮಾರ್ ಅವರು ತಮ್ಮ ಟ್ವೀಟ್ನಲ್ಲಿ, “ಈ ಮಧ್ಯೆ ಘಾಜಿಯಾಬಾದ್ನಲ್ಲಿ, ದೆಹಲಿ-ಮೀರತ್ ಎಕ್ಸ್ಪ್ರೆಸ್ವೇನಲ್ಲಿ ಹುಡುಗರ ಗುಂಪು ಕುಡಿದು ತಮ್ಮ ಕಾರಿನ ಛಾವಣಿಯ ಮೇಲೆ ನೃತ್ಯ ಮಾಡುತ್ತಿದ್ದಾರೆ. ಮಾರುತಿ ಸುಜುಕಿ ಎರ್ಟಿಗಾ ಕಾರಿನ ಮೇಲೆ ಇಬ್ಬರು ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನ ಗಾಜಿಯಾಬಾದ್ ಪೊಲೀಸರನ್ನೂ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
https://twitter.com/i/status/1510073869977395204
33 ಸೆಕೆಂಡ್ಗಳ ಈ ವಿಡಿಯೋದಲ್ಲಿ ಜನನಿಬಿಡ ರಸ್ತೆಯಲ್ಲಿ ಕಾರು ನಿಧಾನವಾಗಿ ಚಲಿಸುತ್ತಿರುವುದನ್ನು ಕಾಣಬಹುದು. ಇಬ್ಬರು ಯುವಕರು ಎರ್ಟಿಗಾದಿಂದ ಇಳಿದು ಕಾರ್ ರೂಫ್ ಮೇಲೆ ನೃತ್ಯ ಮಾಡುತ್ತಿರುವ ವೀಡಿಯೊವನ್ನು ರೆಕಾರ್ಡ್ ಮಾಡುತ್ತಿರುವುದನ್ನ ನೋಡಬಹುದು.
ಗಾಜಿಯಾಬಾದ್ ಟ್ರಾಫಿಕ್ ಪೊಲೀಸರು ಟ್ವೀಟ್ ಗೆ ಪ್ರತಿಕ್ರಿಯಿಸಿ “ಟ್ವಿಟರ್ನಲ್ಲಿ ಸ್ವೀಕರಿಸಿದ ದೂರಿನ ಅನ್ವಯ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ವಾಹನ ಮಾಲೀಕರ ವಿರುದ್ಧ ಒಟ್ಟು 20,000 ದಂಡದ ಚಲನ್ ನೀಡಲಾಗಿದೆ ಎಂದು ಇ-ಚಲನ್ ನ ಪ್ರತಿಯನ್ನ ಟ್ವೀಟ್ ಮಾಡಿದ್ದಾರೆ. ಚಲನ್ ನಲ್ಲಿರುವ ಮಾಹಿತಿಯ ಪ್ರಕಾರ ಗಾಜಿಯಾಬಾದ್ನ ಕೈಗಾರಿಕಾ ಪ್ರದೇಶದ ಸೆಕ್ಟರ್ 13 ರ ಬುಲಂದ್ಶಹರ್ ರಸ್ತೆಯಲ್ಲಿ ಶುಕ್ರವಾರ (ಏಪ್ರಿಲ್ 1) ಈ ಘಟನೆ ನಡೆದಿದೆ.