ADVERTISEMENT
Monday, February 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಕೆಫೆ ಕಾಫಿ ಡೆ ಸಂಸ್ಥಾಪಕ ವಿ.ಜಿ ಸಿದ್ಧಾರ್ಥ ಅವರ ಖಾತೆಯಿಂದ 20 ಬಿಲಿಯನ್ ರೂಪಾಯಿಗಳು ಕಾಣೆ

admin by admin
March 17, 2020
in International, Samagra karnataka
SIDDHARTHA_CCD
Share on FacebookShare on TwitterShare on WhatsappShare on Telegram

CCDಕೆಫೆ ಕಾಫಿ ಡೆ ಸಂಸ್ಥಾಪಕ ವಿ.ಜಿ ಸಿದ್ಧಾರ್ಥ ಅವರ ಖಾತೆಯಿಂದ 20 ಬಿಲಿಯನ್ ರೂಪಾಯಿಗಳು ಕಾಣೆಯಾಗಿದೆ. ಕೆಫೆ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ದಾರ್ಥ್‌ ಆತ್ಮಹತ್ಯೆ ಪ್ರಕರಣದ ನಂತರ ನಡೆಸಲಾಗುತ್ತಿರುವ ಆಂತರಿಕ ತನಿಖೆ ಸಂದರ್ಭ ಈ ವಿಚಾರ ಬಯಲಾಗಿದೆ. ಸಿದ್ಧಾರ್ಥ್‌ ಸಾವಿನ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಅಶೋಕ್‌ ಕುಮಾರ್‌ ಮಲ್ಹೋತ್ರಾ ಈ ಕುರಿತು ಸಮಗ್ರ ತನಿಖೆಯಲ್ಲಿ ನಿರತವಾಗಿದ್ದು, ತನಿಖೆ ಸಂದರ್ಭ ಭಾರೀ ಮೊತ್ತದ ಹಣ ನಾಪತ್ತೆಯಾಗಿರುವದನ್ನು ಪತ್ತೆ ಹಚ್ಚಿದ್ದಾರೆ. ಸಿದ್ಧಾರ್ಥ ಅವರ ಆತ್ಮಹತ್ಯೆಯ ನಂತರ ತಿಂಗಳುಗಳ ಕಾಲ ನಡೆದ ಈ ತನಿಖೆಯು ಭಾರತದ ಅತಿ ದೊಡ್ಡ ಕಾಫಿ ಕೆಫೆಯ ಹಣಕಾಸಿನ ವಹಿವಾಟುಗಳನ್ನು ಮತ್ತು ಡಜನ್ ಗಟ್ಟಲೆ ಉದ್ಯಮಿಗಳ ಒಡೆತನದ ಖಾಸಗಿ ಕಂಪನಿಗಳೊಂದಿಗಿನ ವ್ಯವಹಾರಗಳನ್ನು ಪರಿಶೀಲಿಸಿದೆ. ಈ ಕುರಿತು ತಯಾರಿಸಲಾದ ನೂರಾರು ಪುಟಗಳ ವರದಿಯಲ್ಲಿ ಈ ವಿಚಾರಗಳ ಉಲ್ಲೇಖವಿರುವುದಾಗಿ ಕಂಪೆನಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿದ್ಧಾರ್ಥ್‌ ಸಂಸ್ಥೆಯ ಹೆಸರಲ್ಲಿ ನಡೆಸಿದ ಬ್ಯಾಂಕಿಂಗ್ ವ್ಯವಹಾರ, ವೈಯಕ್ತಿಕ ವ್ಯವಹಾರಗಳ ಬಗ್ಗೆಯೂ ಅಶೋಕ್‌ ಮಲ್ಹೋತ್ರಾ ತನಿಖೆ ನಡೆಸಿದ್ದಾರೆ. ಆದರೂ ಇದುವರೆಗೂ ಹಣ ಕಾಣೆಯಾಗಿರುವ ಬಗ್ಗೆ ಆಗಲಿ, ಇಲ್ಲವೇ ಸಿದ್ದಾರ್ಥ್‌ ವೈಯಕ್ತಿಕ ವ್ಯವಹಾರದ ಬಗ್ಗೆಯಾಗಲೀ ತನಿಖಾಧಿಕಾರಿ ಅಶೊಕ್‌ ಕುಮಾರ್‌ ಮಲ್ಹೋತ್ರಾ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ತನಿಖೆ ಪ್ರಗತಿಯಲ್ಲಿದ್ದು, ಇನ್ನೊಂದು ವಾರದೊಳಗಾಗಿ ಅಂತಿಮ ಷರಾ ಬರೆಯುವ ಸಾಧ್ಯತೆ ಇದೆ. ವರದಿಯು ಈ ವಾರದಲ್ಲಿಯೇ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದ್ದು, ಆ ಸಂದರ್ಭದಲ್ಲಿ ಈ ಎಲ್ಲಾ ವಿಚಾರಗಳು ಬಹಿರಂಗಗೊಳ್ಳುತ್ತಾ ಅನ್ನುವ ಕೌತುಕ ಹೆಚ್ಚಿಸಿದೆ.

Related posts

high-court-invalidates-election-of-congress-mla-nanje-gowda-orders-recount-of-votes

ಕಾಂಗ್ರೆಸ್‌ ಶಾಸಕ ನಂಜೇಗೌಡ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್‌

September 16, 2025
ಅಯೋಗ್ಯ ಪಾಕ್ ಗೆ ಆಂಗ್ ಭಂಗ್ ಯೋಗ..

ಅಯೋಗ್ಯ ಪಾಕ್ ಗೆ ಆಂಗ್ ಭಂಗ್ ಯೋಗ..

May 8, 2025
Advt
ಜಾಹಿರಾತು

ಕಂಪೆನಿಯ ಇನ್ನೊಂದು ಮೂಲದ ಪ್ರಕಾರ ಕಾಣೆಯಾಗಿರುವ ನಗದು 25 ಬಿಲಿಯನ್‌ಗೂ ಹೆಚ್ಚಿದೆ ಎನ್ನಲಾಗಿದೆ. ಆದರೆ ಕಂಪೆನಿಯ ಅಧಿಕೃತ ‌ವಕ್ತಾರರು ಈ ಎಲ್ಲಾ ವಿಚಾರಗಳನ್ನು ಅಲ್ಲಗಳೆದಿದ್ದು, ತನಿಖಾ ವರದಿಯು ಇನ್ನೂ ಅಂತಿಮಗೊಂಡಿಲ್ಲ, ಅಂತಿಮ ಹಂತವನ್ನು ತಲುಪಿಲ್ಲ. ನಿರ್ದೇಶಕರ ಮಂಡಳಿ ಮತ್ತು ಕಂಪನಿಗೆ ಈ ಸಮಯದಲ್ಲಿ ಅದರ ವಿಷಯದ ಬಗ್ಗೆ ತಿಳಿದಿಲ್ಲ. ಆದ್ದರಿಂದ ತನಿಖೆಯ ಬಗ್ಗೆ ಊಹಿಸುವುದು ಸರಿಯಲ್ಲ” ಎಂದು ತಿಳಿಸಿದ್ದಾರೆ.

ಸಿದ್ಧಾರ್ಥರವರ ಕುಟುಂಬ ಹಾಗೂ ಆಡಳಿತ ಮಂಡಳಿಯು ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ವ್ಯವಹಾರವನ್ನು ನಡೆಸುವುದು ಮತ್ತು ಎಲ್ಲಾ ಶೇರುದಾರರ ಹಾಗೂ ಉದ್ಯೋಗಿಗಳ ಭಾದ್ಯತೆಗಳನ್ನು ಪೂರೈಸಲು‌ ಬದ್ಧವಾಗಿದೆ ಎಂದು ಕಂಪೆನಿ ವಕ್ತಾರರು ಹೇಳಿದ್ದಾರೆ.

59 ​​ವರ್ಷದ ಕೆಫೆ ಕಾಫಿ ಡೆ ಸಂಸ್ಥಾಪಕ ವಿ.ಜಿ ಸಿದ್ಧಾರ್ಥ ಕಳೆದ ವರ್ಷ ಮಂಗಳೂರಿನ ಸೇತುವೆಯಿಂದ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿದ್ಧಾರ್ಥ ಸಹಿ ಮಾಡಿದಂತೆ ಕಂಡು ಬರುವ ಕಾಫಿ ಡೆ ಮಂಡಳಿ ಮತ್ತು ಉದ್ಯೋಗಿಗಳಿಗೆ ನೀಡಿದ ಪತ್ರಗಳಲ್ಲಿ ಭಾರಿ ಸಾಲಗಳ ಬಗ್ಗೆ ವಿವರಿಸಲಾಗಿತ್ತು. ಅಲ್ಲದೆ ಸಾಲದಾತರು ಮತ್ತು ತೆರಿಗೆ ಅಧಿಕಾರಿಗಳ ಒತ್ತಡದ ಬಗ್ಗೆಯೂ ಉಲ್ಲೇಖವಿತ್ತು.

1,500 ಕ್ಕೂ ಹೆಚ್ಚು ಶಾಖೆಗಳನ್ನು ದೇಶದಾದ್ಯಂತ ಹೊಂದಿರುವ ಕೆಫೆ ಕಾಫಿ ಡೆ ಸಿದ್ದಾರ್ಥ ರ ಮರಣದ ನಂತರ ಅದರ ಷೇರುಗಳು ಸುಮಾರು 90% ನಷ್ಟು ಕುಸಿದಿದ್ದವು ಮತ್ತು ಅದರ ಮಾರುಕಟ್ಟೆ ಮೌಲ್ಯವು ಸುಮಾರು 80 ದಶ ಲಕ್ಷಕ್ಕೆ ಇಳಿದಿತ್ತು. 2019 ರ ಹಣಕಾಸು ವರ್ಷಾಂತ್ಯಕ್ಕೆ 24 ಬಿಲಿಯನ್‌ ನಗದು ಹೊಂದಿದ್ದ ಕಾಫಿ ಡೇ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ಖಾತೆಯಲ್ಲಿ ಸಿದ್ದಾರ್ಥ್‌ ಸಾವಿನ ನಂತರ ʼಝೀರೋ ಬ್ಯಾಲೆನ್ಸ್‌ʼ ಇತ್ತು ಅನ್ನುವ ವಿಚಾರವು ಅಚ್ಚರಿಯನ್ನು ಮೂಡಿಸಿದೆ.

Tags: CafeCoffee daySiddharth
ShareTweetSendShare
Join us on:

Related Posts

high-court-invalidates-election-of-congress-mla-nanje-gowda-orders-recount-of-votes

ಕಾಂಗ್ರೆಸ್‌ ಶಾಸಕ ನಂಜೇಗೌಡ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್‌

by Saaksha Editor
September 16, 2025
0

ಬೆಂಗಳೂರು, ಸೆ.16: ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ (Congress) ಶಾಸಕ ಕೆವೈ ನಂಜೇಗೌಡ (KY Nanjegowda) ಅವರ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್‌ ಅಸಿಂಧುಗೊಳಿಸಿ ಆದೇಶ ಹೊರಡಿಸಿದೆ. ಅಲ್ಲದೇ, ಮತ...

ಅಯೋಗ್ಯ ಪಾಕ್ ಗೆ ಆಂಗ್ ಭಂಗ್ ಯೋಗ..

ಅಯೋಗ್ಯ ಪಾಕ್ ಗೆ ಆಂಗ್ ಭಂಗ್ ಯೋಗ..

by Shwetha
May 8, 2025
0

ಆಪರೇಷನ್ ಸಿಂಧೂರ... ಈ ರಣಬೇಟೆ..ಪಾಕಿಸ್ತಾನದ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತೆ ಮಾಡ್ಬಿಟ್ಟಿದೆ.. ತಮ್ಮದು ಕೆಚ್ಚೆದೆ.. ಕೆಚ್ಚೆದೆ ಅಂತಿದ್ದವರ ಗುಂಡಿಗೆ ಗಢಗಢನೇ ಅಲ್ಲಾಡಿ ಹೋಗಿದೆ... ಹೃದಯ ಒಂದ್ಸಾರಿ.. ಬಲಕ್ಕೆ ಓಡಿ...

ಟರ್ಕಿ ಹೋಟೆಲ್ ನಲ್ಲಿ ಅಗ್ನಿ ದುರಂತ: ಮೃತರ ಸಂಖ್ಯೆ 76ಕ್ಕೆ ಏರಿಕೆ!

ಟರ್ಕಿ ಹೋಟೆಲ್ ನಲ್ಲಿ ಅಗ್ನಿ ದುರಂತ: ಮೃತರ ಸಂಖ್ಯೆ 76ಕ್ಕೆ ಏರಿಕೆ!

by Author2
January 22, 2025
0

ಇಸ್ತಾಂಬುಲ್:‌ ವಾಯುವ್ಯ ಟರ್ಕಿಯ ಸ್ಕೀ ರೆಸಾರ್ಟ್‌ನಲ್ಲಿರುವ (Turkey Ski Resort) ಹೋಟೆಲ್‌ ನಲ್ಲಿ ಸಂಭವಿಸಿದ ಅಗ್ನಿ ದುರಂತರದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಸಂಖ್ಯೆ 76ಕ್ಕೆ ಏರಿಕೆಯಾಗಿದ್ದು, 51 ಜನ...

ಅಧಿಕಾರ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್!

ಅಧಿಕಾರ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್!

by Author2
January 21, 2025
0

ಷಿಂಗ್ಟನ್‌: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ (Donald Trump) ಅಧಿಕಾರ ಸ್ವೀಕರಿಸಿದ್ದಾರೆ. ಈ ವೇಳೆ ವಿದೇಶಗಳಿಗೆ ತೆರಿಗೆ ವಿಧಿಸುವ ಮಹತ್ವದ ಘೋಷಣೆ ಮಾಡಿದ್ದಾರೆ. ಅಲ್ಲದೇ, 80...

ಭಾರತೀಯ ಮೂಲದ ಯುವಕ ಅಮೆರಿಕದಲ್ಲಿ ಹತ್ಯೆ

ಭಾರತೀಯ ಮೂಲದ ಯುವಕ ಅಮೆರಿಕದಲ್ಲಿ ಹತ್ಯೆ

by Author2
January 20, 2025
0

ವಾಷಿಂಗ್ಟನ್: ಭಾರತೀಯ ಮೂಲದ ಯುವಕ ಅಮೆರಿಕದಲ್ಲಿ ಹತ್ಯೆಯಾಗಿರುವ ಘಟನೆ ನಡೆದಿದೆ. ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಗೆ ಭಾರತೀಯ ಮೂಲದ ಯುವಕ ಸಾವನ್ನಪ್ಪಿದ್ದಾನೆ. ಅಮೆರಿಕದ (America) ವಾಷಿಂಗ್ಟನ್ ಡಿಸಿಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram