ನವದೆಹಲಿ: 2008ರ ಮುಂಬಯಿ ಭಯೋತ್ಪಾದನಾ ದಾಳಿಯ ಪ್ರಮುಖ ರೂವಾರಿಯಾಗಿದ್ದ ಅಜಮ್ ಚೀಮಾ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ.
70 ವರ್ಷದ ಚೀಮಾ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಈತ 2006ರ ಮುಂಬಯಿ ರೈಲು ಸ್ಫೋಟದ ಮಾಸ್ಟರ್ ಮೈಂಡ್ ಕೂಡ ಆಗಿದ್ದ ಎನ್ನಲಾಗಿದೆ. ಈ ಪಾಪಿ ಹಲವಾರು ಪೈಶಾಚಿಕ ಕೃತ್ಯಗಳನ್ನು ಎಸಗಿದ್ದ. ಮುಂಬಯಿ ತಾಜ್ ಹೋಟೆಲ್ ಮೇಲೆ ನಡೆದ ದಾಳಿಯ ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಈ ವೇಳೆ 175 ಜನ ಸಾವನ್ನಪ್ಪಿ, 300ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.
ಈ ಘಟನೆಯಲ್ಲಿ ಅಮೆರಿಕನ್ನರೂ ಸಾವನ್ನಪ್ಪಿದ್ದರು. ಹೀಗಾಗಿ ಈತ ಭಾರತ ಸೇರಿದಂತೆ ಅಮೆರಿಕ ದೇಶಕ್ಕೂ ಬೇಕಾಗಿದ್ದ ಆರೋಪಿ. 2006ರಲ್ಲಿ ಮುಂಬೈಯಲ್ಲಿ ನಡೆದ ರೈಲು ಬಾಂಬ್ ಸ್ಫೋಟ ಪ್ರಕರಣದ ಸೂತ್ರಧಾರಿ ಈತ. ಈ ವೇಳೆ 188 ಜನ ಸಾವನ್ನಪ್ಪಿ, 800ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.