2023 Aero India : ಬೆಂಗಳೂರಿನಲ್ಲಿ ಏರೋಇಂಡಿಯಾ-2023 ಫಿಕ್ಸ್ !
ಏಷ್ಯಾದ ಅತಿದೊಡ್ಡ ಏರ್ ಶೋ ಏರೋಇಂಡಿಯಾ 2023ಯ ಆತಿಥ್ಯವನ್ನು ಯಲಹಂಕ ಏರ್ ಫೋರ್ಸ್ ವಹಿಸಲಿದೆ.
ಕೇಂದ್ರ ರಕ್ಷಣಾ ಸಚಿವಾಲಯವು ಬೆಂಗಳೂರು ಏರ್ ಶೋಗೆ ಮುಹೂರ್ತ ಫಿಕ್ಸ್ ಮಾಡಿದ್ದು ಫೆಬ್ರವರಿ 13ರಿಂದ 17ರವರೆಗೆ ಪ್ರದರ್ಶನ ನಡೆಯಲಿದೆ.
ಕೇಂದ್ರ ರಕ್ಷಣಾ ಇಲಾಖೆಯು ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸುವ ಅತಿದೊಡ್ಡ ಪ್ರದರ್ಶನ ಇದಾಗಿದ್ದು, ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟ ಕಾಣಲು ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ಬೆಂಗಳೂರಿಗೆ ಬರಲಿದ್ದಾರೆ.
ಪ್ರತಿಷ್ಠಿತ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಭಾರತೀಯ ಸೇನೆ ಸೇರಿದಂತೆ ಹಲವು ದೇಶಗಳ ವೈವಿಧ್ಯಮಯ ವಿಮಾನಗಳು ಕಸರತ್ತು ನಡೆಸಲಿದೆ.
2023-aero-india-aeroindia-2023-fix-in-bangalore