ಟ್ವೆಂಟಿ ಟ್ವೆಂಟಿ ಫೋರ್, ಮೋದಿ ಒನ್ಸ್ ಮೋರ್ | ಜರ್ಮನಿ ಭಾರತೀಯರ ಜಯಘೋಷ
ಬರ್ಲಿನ್: ಸದ್ಯ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಜರ್ಮಿನಿಯ ಬರ್ಲಿನ್‌ಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದು, ಜರ್ಮನಿಯ ಭಾರತೀಯರನ್ನುದ್ದೇಶಿಸಿ ಮಾತನಾಡಿದರು.
ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರ ಸಹ-ಅಧ್ಯಕ್ಷತೆಯಲ್ಲಿ ಬರ್ಲಿನ್‌ನಲ್ಲಿ ಕಾರ್ಯಕ್ರಮ ನಡೆದಿದ್ದು, ಮೋದಿ ಭಾಷಣ ಮಾಡಲು ಮುಖ್ಯ ಸಭಾಂಗಣಕ್ಕೆ ಬರುತ್ತಿದ್ದಂತೆ ಕಾರ್ಯಕ್ರಮದಲ್ಲಿ ಭಾಗಿಯಾದ ಭಾರತೀಯರು ಟ್ವೆಂಟಿ ಟ್ವೆಂಟಿ ಫೋರ್, ಮೋದಿ ಒನ್ಸ್ ಮೋರ್ ಎಂದು ಜಯಘೋಷ ಕೂಗಿದರು
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಿಮ್ಮೆಲ್ಲರನ್ನು ನೋಡಿ ತುಂಬಾ ಸಂತೋಷವಾಗುತ್ತಿದೆ. ಯುವಸಮೂಹವೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಇನ್ನಷ್ಟು ಖುಷಿ ನೀಡಿದೆ. ಈ ಹಿಂದೆ ವಿದೇಶಿಯರ ಆಳ್ವಿಕೆಯಿಂದ ದೇಶ ತನ್ನ ಸ್ವಾಭಿಮಾನವನ್ನೇ ಕಳೆದುಕೊಂಡಿತ್ತು. ಇಂದು ಅಭಿವೃದ್ಧಿಯ ಆದಿಯಲ್ಲಿ ಮುನ್ನಡೆಯುತ್ತಿದೆ. ದೇಶದ ಸಂಪನ್ಮೂಲದಲ್ಲಿ ಎಂದಿಗೂ ಕೊರತೆಯಾಗುವುದಿಲ್ಲ ಎಂದರು.
#WATCH | India community members chant, "2024, Modi Once More" in Berlin, Germany.
PM Narendra Modi will address the community programme shortly pic.twitter.com/MaUclwQ0Oy
— ANI (@ANI) May 2, 2022
ಮುಂದುವರಿದು, ಯಾವುದೇ ಸುಧಾರಣೆಗೆ ರಾಜಕೀಯ ಇಚ್ಛಾಶಕ್ತಿ ಬೇಕು. ಇಂದು ಭಾರತದಲ್ಲಿ ಜೀವನ ಗುಣಮಟ್ಟ, ಶಿಕ್ಷಣದ ಗುಣಮಟ್ಟ ಸೇರಿದಂತೆ ಎಲ್ಲ ಕ್ಷೇತ್ರಗಳೂ ಮುನ್ನಡೆಯುತ್ತಿವೆ. ಅಧಿಕಾರ ಶಾಹಿಯಾಗಿದ್ದ ಕಚೇರಿಗಳು ಉತ್ತಮ ಫಲಿತಾಂಶವನ್ನು ಪಡೆಯುತ್ತಿವೆ. ಸರ್ಕಾರ ತನ್ನ ಸುಧಾರಣೆಗಳ ಮೂಲಕ ದೇಶವನ್ನು ಪರಿವರ್ತಿಸುತ್ತಿದೆ ಎಂದು ತಿಳಿಸಿದರು.
ಇನ್ನೂ ಡಿಜಿಟಲ್ ಕ್ಷೇತ್ರದ ಬಗ್ಗೆ ರಾಜಕೀಯ ಇಚ್ಚಾಶಕ್ತಿಯಿದೆ. 2021ರಲ್ಲಿ ಪ್ರಪಂಚದಾದ್ಯಂತ ನಡೆದ ನೈಜ ಪಾವತಿಗಳಲ್ಲಿ ಶೇ.40 ರಷ್ಟು ಭಾರತದಲ್ಲೇ ನಡೆದಿದೆ. ಇದು ಡಿಜಿಟಲ್ ಇಂಡಿಯಾದ ಪೂರಕ ಬೆಳವಣಿಗೆ ಎಂದು ತಿಳಿಸಿದರು.