ಎರಡನೇ ಏಕದಿನ ಪಂದ್ಯ- ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಆಯ್ಕೆ..!
ಟೀಮ್ ಇಂಡಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಆತಿಥೇಯ ಶ್ರೀಲಂಕಾ ತಂಡದಲ್ಲಿ ಒಂದು ಬದಲಾವಣೆಯಾಗಿದೆ. ಉದನಾ ಬದಲು ಕಸುನ್ ರಜಿತಾ ಅವರು 11ರ ಬಳಗವನ್ನು ಸೇರಿಕೊಂಡಿದ್ದಾರೆ. ಇನ್ನುಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ.
ಇನ್ನೊಂದೆಡೆ ಟೀಮ್ ಇಂಡಿಯಾ ಕೂಡ ಅಂತಿಮ 11ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡುವ ಮನಸು ಮಾಡಿಲ್ಲ. ನಾಯಕ ಶಿಖರ್ ಧವನ್ ಮತ್ತು ಕೋಚ್ ರಾಹುಲ್ ದ್ರಾವಿಡ್ ರಿಸ್ಕ್ ತೆಗೆದುಕೊಳ್ಳಲು ಮುಂದಾಗಿಲ್ಲ. ಗೆಲುವಿನ ಅಭಿಯಾನವನ್ನು ಮುಂದುವರಿಸಿ ಸರಣಿ ಗೆಲ್ಲುವ ನಿಟ್ಟಿನಲ್ಲಿ ತಂಡದಲ್ಲಿ ಬದಲಾವಣೆಯಾಗಿಲ್ಲ.
ಈಗಾಗಲೇ ಮೊದಲ ಏಕದಿನ ಪಂದ್ಯವನ್ನು ಏಳು ವಿಕೆಟ್ ಗಳಿಂದ ಗೆದ್ದಿರುವ ಟೀಮ್ ಇಂಡಿಯಾ ಆತ್ಮವಿಶ್ವಾಸದಲ್ಲಿದೆ. ಮತ್ತೊಂದೆಡೆ ಸೋಲಿನಿಂದ ಕಂಗೆಟ್ಟಿರುವ ಶ್ರೀಲಂಕಾ ತಂಡ ಸೇಡು ತೀರಿಸುವ ತವಕದಲ್ಲೂ ಇದೆ.
ಟೀಮ್ ಇಂಡಿಯಾ 11 ರ ಬಳಗ
ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ಇಶಾನ್ ಕಿಶಾನ್, ಮನೀಷ್ ಪಾಂಡೆ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಯುಜುವೇಂದ್ರ ಚಾಹಲ್, ದೀಪಕ್ ಚಾಹರ್, ಭುನವೇಶ್ವರ್ ಕುಮಾರ್ (ಉಪನಾಯಕ), ಕುಲದೀಪ್ ಯಾದವ್.
ಶ್ರೀಲಂಕಾ 11ರ ಬಳಗ
ಆವಿಶ್ಕಾ ಫರ್ನಾಂಡೋ, ಮಿನೋದ್ ಭಾನುಕಾ (ವಿಕೆಟ್ ಕೀಪರ್) ಭಾನುಕಾ ರಾಜಪಕ್ಷ, ಧನಂಜಯ ಡಿಸಿಲ್ವಾ, ಚರಿತ್ ಅಸಲಾಂಕಾ, ದಸುನ್ ಶನಕಾ (ನಾಯಕ), ವಾನಿಂದು ಹಸರಂಗ, ಚಾಮಿಕಾ ಕರುಣರತ್ನೆ, ದುಶ್ಮಂತ ಚಾಮೀರಾ, ಲಕ್ಷನ್ ಸಂಡಕನ್, ಕಸುನ್ ರಜಿತಾ









