ದುಬೈ ಎಕ್ಸ್ಪೊ 2020 : ಮೂವರು ಕಾರ್ಮಿಕರು ಸಾವು Dubai expo saaksha tv
ಯುಎಇ : ದುಬೈ ಎಕ್ಸ್ ಪೋ 2020 ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಮೂವರು ಕಾರ್ಮಿಕರು ಮೃಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.
ಎರಡಕ್ಕೂ ಹೆಚ್ಚು ಕಾರ್ಮಿಕರು ದುಬೈನ ಹೊರಾಭಾಗದಲ್ಲಿ ಬೃಹತ್ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ನಿರ್ಮಾಣ ಕಾರ್ಯಗಳಲ್ಲಿ ಮೂರು ಮಂದಿ ಸಾವಿಗೀಡಾಗಿದ್ದಾರೆ ಹಾಗೂ 72 ಮಂದಿಗೆ ಗಂಭೀರ ಗಾಯಗಳಾಗಿವೆ’ ಎಂದು ಎಕ್ಸ್ಪೊ ಪ್ರಕಟಣೆಯಲ್ಲಿ ತಿಳಿಸಿದೆ.
ಅಂದಹಾಗೆ ಯುನೈಟೆಡ್ ಅರಬ್ ಎಮಿರೇಟ್ಸ್ನ ಮಾನವ ಹಕ್ಕುಗಳ ಕುರಿತ ದಾಖಲೆಗಳು ಹಾಗೂ ವಲಸೆ ಕಾರ್ಮಿಕರನ್ನು ಅಮಾನವೀಯ ರೀತಿಯಲ್ಲಿ ನಡೆಸಿಕೊಳ್ಳುತ್ತಿರುವ ಬಗ್ಗೆ ಯುರೋಪಿಯನ್ ಪಾರ್ಲಿಮೆಂಟ್ ಟೀಕಿಸಿತ್ತು.
ಅಲ್ಲದೆ ಆರು ತಿಂಗಳ ವಿಶ್ವಮಟ್ಟದ ದುಬೈ ಮೇಳವನ್ನು ಬಹಿಷ್ಕರಿಸಲು ಕರೆ ನೀಡಿದೆ. ಅದರ ಬೆನ್ನಲ್ಲೇ ಕಾರ್ಮಿಕರ ಸಾವಿನ ವಿಚಾರ ಹೊರಬಂದಿದೆ.