ಬೆಂಗಳೂರು : ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದಲ್ಲೂ ಪದವಿ ಪೂರ್ವ ಶಿಕ್ಷಣ ಇಲಾಖೆ 2020-21ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ, 1ರಿಂದ 12ನೇ ತರಗತಿಯವರೆಗೆ ಶೇ.30ರಷ್ಟು ಪಠ್ಯಲನ್ನು ಕಡಿತಮಾಡಿ ಅಧಿಕೃತ ಆದೇಶ ಹೊರಡಿಸಿದೆ.
ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ಕೋವಿಡ್ 19 ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆಯಲ್ಲಿ ದೇಶ ಹಾಗೂ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ 2020-21 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳಲ್ಲಿ ವ್ಯತ್ಯಯಗಳು ಉಂಟಾಗಿವೆ.
ಸಾಮಾನ್ಯವಾಗಿ ಈ ವೇಳೆಗಾಗಲೇ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಳ್ಳಬೇಕಿತ್ತು. ಆದ್ರೇ ಬದಲಾದ ಸನ್ನಿವೇಶಗಳಿಂದಾಗಿ ತರಗತಿಗಳು ಹಿಂದಿನ ವರ್ಷಗಳ ಶೈಕ್ಷಣಿಕ ವೇಳಾಪಟ್ಟಿಯಂತೆ ಆರಂಭವಾಗಿರುವುದಿಲ್ಲ.
ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಪಾಠ ಪ್ರವಚನಗಳಲ್ಲಿ ಕುಂದು ಉಂಟಾಗಬಾರದೆಂದು ಪದವಿ ಪೂರ್ವ ಶಿಕ್ಷಣ ಇಲಾಖೆಯು ಈಗಾಗಲೇ ಪ್ರೀ-ರೆಕಾರ್ಡೆಡ್ ವೀಡಿಯೋ ತರಗತಿಗಳನ್ನು ಯೂಟ್ಯೂಬ್ ನಲ್ಲಿ ಪ್ರಾರಂಭಿಸಿದೆ.
ಮುಂದುವರೆದು ಕೇಂದ್ರ ಸರ್ಕಾರವು 1 ರಿಂದ 12ನೇ ತರಗತಿಯವರೆಗೆ ಶೇ.30ರಷ್ಟು ಪಠ್ಯ ವಸ್ತುವನ್ನು ಕಡಿತ ಮಾಡಿ ಬಿಡುಗಡೆ ಮಾಡಿದೆ.
ಇದನ್ನೂ ಓದಿ : ಪ್ರವಾಹ ಸಂತ್ರಸ್ಥರ ಮಧ್ಯೆ ಪೊಲೀಸಪ್ಪನ ಬಿಲ್ಡಪ್
ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಸೂಚನೆಯಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ಸಹ ಪಠ್ಯ ವಸ್ತುವನ್ನು ಕಡಿತ ಮಾಡಲು ಕ್ರಮ ಕೈಗೊಂಡಿದೆ.
ಭೌತ ಶಾಸ್ತ್ರ, ರಾಸಾಯನಶಾಸ್ತ್ರ, ಗಣಿತ ಶಾಸ್ತ್ರ ಹಾಗೂ ಜೀವ ಶಾಸ್ತ್ರ ವಿಷಯಗಳ ಪಠ್ಯ ಕಡಿತವನ್ನು ಸಿ ಬಿ ಎಸ್ ಇ ಶಿಕ್ಷಣ ಮಂಡಳಿಯು ನಿಗದಿಪಡಿಸದಂತೆ ಯಥಾವತ್ತಾಗಿ ಅಶವಡಿಸಿಕೊಂಡಿದೆ.
ಆದರೆ ಉಳಿದ ವಿಷಯಗಳಲ್ಲಿ ಇಲಾಖೆಯು ಪಠ್ಯ ಪುಸ್ತಕ ರಚನಾ ಸಮಿತಿ ಹಾಗೂ ಪರಿಷ್ಕರಣಾ ಸಮಿತಿ ಸದಸ್ಯರುಗಳನ್ನು ಸಂಪರ್ಕಿಸಿ, ಶೇ.30ರಷ್ಟು ಪಠ್ಯ ವಸ್ತುವನ್ನು ಕಡಿತ ಮಾಡಿ, ಬಿಡುಬಹುದಾದ ಅಧ್ಯಾಯಗಳನ್ನು ಹೆಸರಿಸಲು ಕೋರಲಾಗಿತ್ತು.
ಬಹುತೇಕ ಎಲ್ಲಾ ಸಮಿತಿಗಳು ಆಯಾ ವಿಷಯಗಳ ಪಠ್ಯ ಪುಸ್ತಕ, ವಸ್ತುಗಳಲ್ಲಿ ಕಡಿತಗೊಳಿಸಬಹುದಾದ ಪದ್ಯ, ಗದ್ಯ, ಅಧ್ಯಾಯ, ಉಪ-ಅಧ್ಯಾಯಗಳ ಪಟ್ಟಿಯನ್ನು ತಮ್ಮ ಸಮಿತಿಯ ಸದಸ್ಯರೊಂದಿಗೆ ಚರ್ಚಿಸಿ, ವರದಿ ನೀಡಿರುತ್ತಾರೆ.
ಒಟ್ಟು 34 ವಿಷಯಗಳ ಪೈಕಿ, ಕರ್ನಾಟಕ ಸಂಗೀತ ವಿಷಯವನ್ನು ಹೊರತುಪಡಿಸಿ, 33 ವಿಷಯಗಳ ಮಾಹಿತಿಯನ್ನು ಮಾತ್ರ ಸಿದ್ಧಪಡಿಸಲಾಗಿದೆ.
ರಾಜ್ಯದಲ್ಲಿ ಯಾವುದೇ ವಿದ್ಯಾರ್ಥಿ ಕರ್ನಾಟಕ ಸಂಗೀತ ವಿಷಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ದಾಖಲಾಗದ ಕಾರಣ ಸದರಿ ವಿಷಯವನ್ನು ಈ ಪ್ರಕ್ರಿಯೆಯಿಂದ ಕೈ ಬಿಡಲಾಗಿದೆ.
ಉಳಿದಂತೆ ರಾಜ್ಯದ 1ರಿಂದ 12ನೇ ತರಗತಿಯ ವಿದ್ಯಾರ್ಥಿಗಳ ಶೇ.30ರಷ್ಟು ಪಠ್ಯ ವಸ್ತುವನ್ನು ಕಡಿತ ಮಾಡಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel