ಕಲಬುರಗಿ: ಜಿಲ್ಲೆಯಲ್ಲಿ ಭೀಕರ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತಗೊಂಡು ಜನರು ಪರದಾಟ ನಡೆಸುತ್ತಿದ್ದಾರೆ. ಆದರೆ, ಇಲ್ಲೊಬ್ಬ ಪಿಎಸ್ಐ ಸಂತ್ರಸ್ಥರನ್ನೇ ಬೆದರಿಸಿ ಬಿಲ್ಡಪ್ ವಿಡಿಯೋ ಮಾಡಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ.
ಈ ಪಿಎಸ್ಐ ಯಾರೂ ಅಂತೀರಾ..ಆತನೇ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್ ಠಾಣೆಯ ಪಿಎಸ್ಐ ಮಲ್ಲನಗೌಡ ಯಲಗೋಡ. ಈತ ತನ್ನ ಬಿಲ್ಡಪ್ಗಳಿಂದಲೇ ಕುಖ್ಯಾತಿಗೆ ಪಡೆದಿದ್ದಾನೆ.
ಈ ಹಿಂದೆ ಸಿನಿಮಾ ಸ್ಟೈಲ್ನಲ್ಲಿ ಜಂಪ್ ಮಾಡಿದ್ದ ವಿಡಿಯೋ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಲಾಕ್ಡೌನ್ ಜಾರಿಯಲ್ಲಿದ್ದಾಗಲೇ ಪಿಎಸ್ಐ ಮಲ್ಲನಗೌಡ ತನ್ನ ಹುಟ್ಟುಹಬ್ಬ ಆಚರಿಸಿಕೊಂಡು ಹಾಲಿನ ಅಭಿಷೇಕ ಮಾಡಿಸಿಕೊಂಡು ಕೆಂಗಣ್ಣಿಗೆ ಗುರಿಯಾಗಿದ್ದರು.
ಇದೀಗ ಕಲಬುರಗಿ ಜಿಲ್ಲೆಯ ಜನತೆ ಪ್ರವಾಹದಿಂದ ತತ್ತರಿಸಿ ಹೋಗಿದ್ದು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಪ್ರವಾಹದಲ್ಲಿ ಸಿಲುಕಿದ್ದ ಮೇಕೆಯೊಂದನ್ನು ರಕ್ಷಣೆ ಮಾಡಿದ್ದಾಗಿ ಬಿಲ್ಡಪ್ ಕೊಡಲು ಸಂತ್ರಸ್ಥರ ಜತೆ ಥರ್ಮೋಕೋಲ್ ತೆಪ್ಪದಲ್ಲಿ ನಿಂತು ಫೋಸ್ ಕೊಟ್ಟ ಪಿಎಸ್ಐ ಮಲ್ಲನಗೌಡ, ಸಂತ್ರಸ್ಥರ ಕೈಯಿಂದಲೇ ತೆಪ್ಪವನ್ನು ತಳ್ಳಿಸಿಕೊಂಡು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಒಂದು ಅಡಿ ನೀರಿನ ಮೇಲೆ ತೆಪ್ಪದ ಮೇಲೆ ನಿಂತುಕೊಂಡು ಜನರಿಂದ ತೆಪ್ಪ ಎಳೆಸಿಕೊಂಡು ಬಿಲ್ಡಪ್ ಕೊಡಲು ಹೋಗಿದ್ದ ಶಾಸಕ ರೇಣುಕಾಚಾರ್ಯ ಅವರ ವಿಡಿಯೋ ರಾಜ್ಯದ ಜನರ ಆಕ್ರೋಶಕ್ಕೆ ಗುರಿಯಾಗಿತ್ತು.
ಜನರನ್ನು ರಕ್ಷಣೆ ಮಾಡಬೇಕಿದ್ದ ಪಿಎಸ್ಐ, ಸಂತ್ರಸ್ಥರನ್ನ ಬೆದರಿಸಿ ಅವರಿಂದ ತೆಪ್ಪ ತಳ್ಳಿಸಿಕೊಂಡ ವಿಡಿಯೋ ರೆಕಾರ್ಡ್ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೀಕ್ಷಿಸಿದ ನೆಟ್ಟಿಗರು ಪಿಎಸ್ಐ ಮಲ್ಲನಗೌಡರನ್ನು ತರಾಟೆಗೆ ತೆಗೆದುಕೊಂಡಿದ್ದು, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಪಿಎಸ್ಐ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel