300 boxes of tomato ruin-ಚಾಲಕನ ನಿಯಂತ್ರಣ ತಪ್ಪಿ ಟೊಮೆಟೋ ಸಾಗಿಸುತ್ತಿದ್ದ ಟೆಂಪೊ ಪಲ್ಟಿಯಾಗಿರುವ ಘಟನೆ ಕೋಲಾರ ನಗರದ ಹೊರವಲಯದಲ್ಲಿರುವ ಮೂರಾಂಡಹಳ್ಳಿ ಬಳಿ ನಡೆದಿದೆ.
ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಬರುತ್ತಿದ್ದ ಆಂಧ್ರದ ಮದನಪಲ್ಲಿಯ ಟೆಂಪೋ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
300ಕ್ಕೂ ಹೆಚ್ಚು ಟೊಮೆಟೊ ಬಾಕ್ಸ್ ಟೆಂಪೋದಲ್ಲಿದ್ದವು ಎಂದು ತಿಳಿದು ಬಂದಿದೆ .
ಪರಿಶ್ರಮದಿಂದ ಬೇಳೆದಿದ್ದ ಎಲ್ಲಾ ಟೊಮೇಟೊ ಮಣ್ಣು ಪಾಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿವಿಲ್ಲ.
ಈ ಘಟನೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.








