ಸಾರಕ್ಕಿ ಲಯನ್ಸ್ ಕ್ಲಬ್ ವತಿಯಿಂದ ಉಚಿತ ಕೋವಿಡ್ ಟೆಸ್ಟಿಂಗ್ ಬೂತ್ ಹಾಗೂ ಉಚಿತ ಆಹಾರ ವಿತರಣಾ ಕೇಂದ್ರಕ್ಕೆ ಚಾಲನೆ:
ಸಾರಕ್ಕಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಪಿ.ಆರ್ ಕೃಷ್ಣ ಸ್ಮರಣಾರ್ಥ ಕೋವಿಡ್ ಟೆಸ್ಟಿಂಗ್ ಬೂತ್ ಅನ್ನು ಇಂದು ಜೆಪಿ ನಗರದ ಸೆಂಟ್ರಲ್ ಮಾಲ್ ಮುಂಭಾಗದಲ್ಲಿ ಉದ್ಘಾಟಿಸಲಾಯಿತು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕೋವಿಡ್ ಟೆಸ್ಟಿಂಗ್ ಭೂತ್ ಗೆ ಚಾಲನೆ ನೀಡದರು. ಇದೇ ವೇಳೆ ವರ್ಷದ ಪೂರ್ಣಾವದಿ 365 ದಿನಗಳ ಕಾಲ ಅನ್ನದಾಸೋಹದ ಯೋಜನೆಗೂ ಚಾಲನೆ ನೀಡಲಾಯಿತು.
ಕರೋನಾ ಸೋಂಕಿತರಿಗೆ ಉಚಿತ ಕೋವಿಡ್ ಟೆಸ್ಟಿಂಗ್ ಬೂತ್ ಸೆಂಟ್ರಲ್ ಮಾಲ್ ಬಳಿ ಪ್ರತಿನಿತ್ಯ ಕಾರ್ಯನಿರ್ವಹಿಸಲಿದ್ದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರ ವರೆಗೆ ಕೋವಿಡ್ ತಪಾಸಣೆ ನಡೆಸಲಾಗುತ್ತದೆ. ಯಾವುದೇ ಜನಸಾಮಾನ್ಯರು ಇದರ ಲಾಭ ಪಡೆದುಕೊಳ್ಳಬಹುದಾಗಿದೆ. ಇನ್ನು ವರ್ಷದ 365 ದಿನವೂ ಒಂದು ಹೊತ್ತಿನ ಊಟ ನೀಡುವ ಯೋಜನೆಯೂ ಶುಭಾರಂಭಗೊಂಡಿದೆ. ದೇಶಾದ್ಯಂತ ಕೋವಿಡ್ ಸಂಕಷ್ಟದಿಂದ ಜನ ಹಸಿವಿನಿಂದ ತತ್ತರಿಸುತ್ತಿರುವ ಹಿನ್ನೆಲೆಯಲ್ಲಿ ಈ ಅನ್ನಸಂತರ್ಪಣೆ ಯೋಜನೆ ಹಸಿದವರ ಹೊಟ್ಟೆ ತುಂಬಿಸಲಿದೆ. ಪ್ರತಿ ದಿನ ಮಧ್ಯಾಹ್ನ 12 ಗಂಟೆಯಿಂದ
ಮಧ್ಯಾಹ್ನ 2 ಗಂಟೆಯವರೆಗೂ ಜೆಪಿ ನಗರದ ಮಾರೇನಹಳ್ಳಿ ಕಲಾಭವನದ ಮುಂಭಾಗದಲ್ಲಿರುವ ಲಯನ್ಸ್ ಕಮ್ಯೂನಿಟಿ ಸೆಂಟರ್ ನಲ್ಲಿ ಆಹಾರ ವಿತರಣೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಆಯೋಜಕರಾದ ಕೃಷ್ಣ ಟ್ರಾವೆಲ್ಸ್ ಸಂಸ್ಥೆಯ ಪುತ್ತಿಗೆ ನವೀನ್, ಸಾರಕ್ಕಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ದ್ವಾರಕಾನಾಥ್, ಕಾರ್ಯದರ್ಶಿ ನಂದಿನಿ ಡಿ.ಎಸ್, ಲಯನ್ ಗ್ಯಾನ್ ಚಂದ್ ಮುಂತಾದವರು ಉಪಸ್ಥಿತರಿದ್ದರು.