4 ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ : Simple and Tatsy

1 min read

 

  1. ರವೆ ಹೆಸರುಬೇಳೆ ಪಾಯಸ

ಬೇಕಾಗುವ ಸಾಮಗ್ರಿಗಳು:

ಹೆಸರು ಬೇಳೆ 1/2 ಕಪ್
ನೀರು 4 3/4 ಕಪ್
ರವೆ 1/4 ಕಪ್
ಬೆಲ್ಲ 3/4 ಕಪ್,
ಒಣ ಕೊಬ್ಬರಿ ತುರಿ 1/4 ಕಪ್,
ಹಾಲು 1/2 ಕಪ್,
ಹುರಿದ ತುಪ್ಪ, ಗೋಡಂಬಿ, ದ್ರಾಕ್ಷಿ, ಏಲಕ್ಕಿ

ಮಾಡುವ ವಿಧಾನ

ಮೊದಲು ಹೆಸರುಬೇಳೆಯನ್ನು ಸ್ವಲ್ಪ ಕೆಂಪು ಬಣ್ಣ ಬರುವವರೆಗೆ ಹುರಿದುಕೊಳ್ಳಿ. ನಂತರ ಹೆಸರುಬೇಳೆಯನ್ನು ಒಂದೆರಡು ಬಾರಿ ತೊಳೆದು 4 ಕಪ್ ನೀರು ಸೇರಿಸಿ ಕುಕ್ಕರ್ ನಲ್ಲಿ ಮೂರು ನಾಲ್ಕು ವಿಸಿಲ್ ಕೂಗಿಸಿ ಬೇಯಿಸಿಕೊಳ್ಳಿ. ನಂತರ ಬೆಲ್ಲವನ್ನು ಅರ್ಧ ಕಪ್ ನೀರು ಹಾಕಿ ಕರಗಿಸಿ ಇಟ್ಟುಕೊಳ್ಳಿ.

ಈಗ ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ಬಿಸಿ ಮಾಡಿ, ದ್ರಾಕ್ಷಿ ಗೋಡಂಬಿ ಸೇರಿಸಿ ಹುರಿದಿಟ್ಟುಕೊಳ್ಳಿ.

ನಂತರ ಬಾಣಲೆಗೆ ರವೆ ಹಾಕಿ ಕೆಂಪು ಬಣ್ಣ ಬರುವವರೆಗೆ ಚೆನ್ನಾಗಿ ಹುರಿಯಿರಿ.

ನಂತರ ರವೆಯನ್ನು ಮುಕ್ಕಾಲು ಕಪ್ ಬಿಸಿ ನೀರಿಗೆ ಸೇರಿಸಿ, ಗಂಟು ಕಟ್ಟದಂತೆ ನೋಡಿಕೊಳ್ಳಿ.
ನಂತರ ಬೇಯಿಸಿಟ್ಟುಕೊಂಡ ಹೆಸರುಬೇಳೆಯನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಬಳಿಕ ಕರಗಿಸಿಟ್ಟುಕೊಂಡ ಬೆಲ್ಲವನ್ನು ಸಹ ಸೇರಿಸಿ ಮತ್ತೆ ಮಿಕ್ಸ್ ಮಾಡಿಕೊಳ್ಳಿ.
ಈ ಮಿಶ್ರಣವು ಒಂದು ಕುದಿ ಬಂದ ನಂತರ ಒಣ ಕೊಬ್ಬರಿ ತುರಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ.
Saakshatv cooking recipes payasa
ಮಧ್ಯಮ ಉರಿಯಲ್ಲಿ 4-5 ನಿಮಿಷಗಳ ಕಾಲ ಬಿಸಿ ಮಾಡಿ. ನಂತರ ಅದಕ್ಕೆ ಕಾಯಿಸಿ ಆರಿಸಿದ ಹಾಲನ್ನು ಸೇರಿಸಿ. ಈಗ ಹುರಿದಿಟ್ಟುಕೊಂಡ ದ್ರಾಕ್ಷಿ ಗೋಡಂಬಿಯನ್ನು ಸೇರಿಸಿ ಒಂದು ಕುದಿ ಬರೆಸಿ. ರುಚಿಯಾದ ರವೆ ಹೆಸರುಬೇಳೆ ಪಾಯಸ ಸವಿಯಲು ಸಿದ್ಧ.

======================================================================

2. ಅನಾನಸ್( ಪೈನಾಪಲ್) ಗೊಜ್ಜು Saakshatv cooking recipes pineapple gojju

ಬೇಕಾಗುವ ಸಾಮಗ್ರಿಗಳು

ಉದ್ದಿನ ಬೇಳೆ 2 ಚಮಚ
ಜೀರಿಗೆ 1/2 ಚಮಚ
ಕಾಳುಮೆಣಸು 1/4 ಚಮಚ
ಚಿಟಕಿ ಇಂಗು
ಒಣ ಕೊಬ್ಬರಿ ತುರಿ 1/4 ಕಪ್
ಬಿಳಿ ಎಳ್ಳು 2ಚಮಚ

ಸಣ್ಣಗೆ ಹೆಚ್ಚಿದ ಪೈನಾಪಲ್ 1 ಕಪ್
ಸಾಸಿವೆ 1 ಚಮಚ
ಕತ್ತರಿಸಿದ ಕರಿಬೇವು ಸ್ವಲ್ಪ
ಹುಣಸೆ ರಸ 1/4 ಕಪ್
ಬೆಲ್ಲ ಪುಡಿ 2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಚಿಟಕಿ‌‌ ಅರಿಶಿನ
ಒಣಮೆಣಸು 6
ಎಣ್ಣೆ

Saakshatv cooking recipes pineapple gojju
Saakshatv cooking recipes pineapple gojju

ಮಾಡುವ ವಿಧಾನ

ಪಾನ್ ಗೆ ಉದ್ದಿನ ಬೇಳೆ, ಜೀರಿಗೆ, ಕಾಳುಮೆಣಸು ಇಂಗು, ಒಣ ಮೆಣಸಿನಕಾಯಿ ಹಾಕಿ ಹುರಿಯಿರಿ. ಒಣ ಕೊಬ್ಬರಿ ತುರಿ ಸೇರಿಸಿ ಕೆಂಪಗಾಗುವ ವರೆಗೆ ಹುರಿಯಿರಿ. ನಂತರ ಬಿಳಿ ಎಳ್ಳು ಹುರಿದು ಎಲ್ಲವನ್ನೂ ಮಿಕ್ಸಿ ಗೆ ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ.

Saakshatv cooking recipes pineapple gojju

ಈಗ ಬಾಣಲೆಗೆ 4 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಸಾಸಿವೆ ಸೇರಿಸಿ, ಸಾಸಿವೆ ಸಿಡಿದ ಬಳಿಕ ಕರಿಬೇವು ಸೇರಿಸಿ.
ಅದಕ್ಕೆ ಸಣ್ಣಗೆ ಹೆಚ್ಚಿದ ಪೈನಾಪಲ್ ಸೇರಿಸಿ ಅರಿಶಿಣ ಹಾಕಿ ಬೇಯಿಸಿ. ಬಳಿಕ ಹುಣಸೆ ರಸ ಮತ್ತು ಬೆಲ್ಲ ಸೇರಿಸಿ. ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 5 ನಿಮಿಷ ಕುದಿಸಿದ ಬಳಿಕ ರುಬ್ಬಿದ ಮಿಶ್ರಣವನ್ನು ಸೇರಿಸಿ ಕುದಿಸಿ. ಈಗ ಸವಿಯಲು ರುಚಿಯಾದ ಅನಾನಸ್ ‌ಗೊಜ್ಜು‌ ತಯಾರಾಗಿದೆ.

======================================================================

3.  ಗೋಧಿ ಹಿಟ್ಟಿನ ಲಡ್ಡು

ಬೇಕಾಗುವ ಸಾಮಗ್ರಿಗಳು

ಗೋಧಿ ಹುಡಿ 1ಕಪ್
ಮಿಲ್ಕ್ ಮೇಡ್ 3/4 ಕಪ್
ಏಲಕ್ಕಿ ಪುಡಿ 1/4 ಚಮಚ
ತುಪ್ಪ 2 1/2 ಚಮಚ.
ಹುರಿದ ಗೋಡಂಬಿ, ದ್ರಾಕ್ಷಿ ಸ್ವಲ್ಪ
ಕಾಯಿಸಿದ ಹಾಲು 4 ಚಮಚ
Saakshatv cooking recipes wheat laddu
Saakshatv cooking recipes wheat laddu

ಮಾಡುವ ವಿಧಾನ
ಮೊದಲಿಗೆ ಬಾಣಲೆಗೆ ಗೋಧಿ ಹುಡಿ ಹಾಕಿ ಮಧ್ಯಮ ಉರಿಯಲ್ಲಿ 3 ನಿಮಿಷ ಹುರಿಯಿರಿ. ನಂತರ ಸ್ಟವ್ ಆಫ್ ಮಾಡಿ ಬಾಣಲೆಯನ್ನು ಕೆಳಗಿಳಿಸಿ.

ನಂತರ ಅದಕ್ಕೆ ಮಿಲ್ಕ್ ಮೇಡ್ ಸೇರಿಸಿ ಚೆನ್ನಾಗಿ ಬೆರೆಸಿ. ಬಳಿಕ ಇದಕ್ಕೆ ತುಪ್ಪ ಏಲಕ್ಕಿ ಪುಡಿ, ಗೋಡಂಬಿ ,ದ್ರಾಕ್ಷಿ, ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ತಣ್ಣಗಾದ ನಂತರ ಕೈಗೆ ಸ್ವಲ್ಪ ತುಪ್ಪ ಸವರಿ ಗೋಧಿ ಲಡ್ಡುಗಳನ್ನು ತಯಾರಿಸಿ. ಗೋಧಿ ಲಡ್ಡುಗಳನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ.

======================================================================

4. ಗೋಧಿಹಿಟ್ಟಿನ ಎಗ್ ಲೆಸ್ ಚಾಕೊಲೇಟ್ ಕೇಕ್ Saakshatv cooking recipes atta cake

ಬೇಕಾಗುವ ಸಾಮಗ್ರಿಗಳು

ಗೋಧಿಹಿಟ್ಟು – 1 ಕಪ್
ಕೋಕೋ ಪೌಡರ್ – 1/2 ಕಪ್
ಅಮುಲ್ ಹಾಲಿನಪುಡಿ – 4 ಚಮಚ
ಹಾಲು – 1 ಕಪ್
ವಿನೆಗರ್ – 1ಚಮಚ
ಎಣ್ಣೆ – 1/4 ಕಪ್
ಸಕ್ಕರೆ ಪುಡಿ – 1/2ಕಪ್
ವೆನಿಲ್ಲಾ ಎಸ್ಸೆನ್ಸ್ – 1ಚಮಚ
ಬೇಕಿಂಗ್ ಪೌಡರ್ – 1 1/2 ಚಮಚ
ಬೇಕಿಂಗ್ ಸೋಡಾ – 1/4 ಚಮಚ

ತುಪ್ಪ – 1 ಚಮಚ
ಮೈದಾ – 1ಚಮಚ
(cake pan ಗ್ರೀಸ್ ಮಾಡಲು ಮಾತ್ರ)
ಚಾಕೊಲೇಟ್ ತುರಿ – 2tbsp ( ಅಲಂಕರಿಸಲು ಮಾತ್ರ) (optional)
Saakshatv cooking recipes atta cake

ಮಾಡುವ ವಿಧಾನ

ಮೊದಲು ಹಾಲಿಗೆ ವಿನೆಗರ್ ಸೇರಿಸಿ, ಚೆನ್ನಾಗಿ ಕಲಕಿ 10 ನಿಮಿಷ ಹಾಗೆ ಬಿಡಿ.‌ ನಂತರ ವಿನೆಗರ್ ಸೇರಿಸಿದ ಹಾಲನ್ನು ಒಂದು ಬೌಲ್ ಗೆ ಹಾಕಿ. ಎಣ್ಣೆ, ವೆನಿಲ್ಲಾ ಎಸೆನ್ಸ್, ಸಕ್ಕರೆ ಪುಡಿ ಸೇರಿಸಿ ಚೆನ್ನಾಗಿ ಬೀಟ್ ಮಾಡಿ.
ಈಗ ಇದಕ್ಕೆ ಸ್ವಲ್ಪ ಸ್ವಲ್ಪವೇ ಕೋಕೋ ಪೌಡರ್, ಹಾಲಿನ ಪುಡಿ , ಜರಡಿ ಹಿಡಿದ ಗೋಧಿ ಹುಡಿ, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ ಹಾಕಿ ನಿಧಾನಕ್ಕೆ ಬೆರೆಸಿ. ನಂತರ ನಿಧಾನವಾಗಿ ಹಾಲನ್ನು ಸೇರಿಸುತ್ತಾ ಎಲ್ಲವನ್ನೂ ಒಂದೇ ದಿಕ್ಕಿನಲ್ಲಿ‌ ಗಂಟಿಲ್ಲದಂತೆ ಕಲಸಿ. ಮಿಶ್ರಣವು ಇಡ್ಲಿ ಹಿಟ್ಟಿನ ಹದಕ್ಕೆ ಬರುವಂತೆ ಕಲಸಿ. ಈಗ ಕೇಕ್ ಮಿಕ್ಸ್ ತಯಾರಾಗಿದೆ.

ಕಡಾಯಿಯ ಒಳಗೆ ರಿಂಗ್ ಇಟ್ಟು, ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿಟ್ಟು ಫ್ರೀ-ಹೀಟ್ ಮಾಡಿ.

ನಂತರ ಕೇಕ್ ಮಾಡುವ ಪಾತ್ರೆ (cake pan) ಗೆ ತುಪ್ಪ ಸವರಿ, ಮೈದಾದಿಂದ ಡಸ್ಟಿಂಗ್ ಮಾಡಿ. ತಯಾರಾದ ಕೇಕ್ ಮಿಕ್ಸ್ ಅನ್ನು ಕೇಕ್ ಪ್ಯಾನ್ ಗೆ ಹಾಕಿ.

ಈಗ ಬಿಸಿಯಾದ ಕಡಾಯಿಯಲ್ಲಿರುವ ರಿಂಗ್ ಮೇಲೆ ಗ್ರೀಸ್ ಮಾಡಿದ ಪಾತ್ರೆಯನ್ನು ಇಡಿ. ಮುಚ್ಚಳ ಮುಚ್ಚಿ ಕಡಿಮೆಯಿಂದ ಮಧ್ಯಮ ಉರಿಯಲ್ಲಿ ಕೇಕ್ ಅನ್ನು 30-35 ನಿಮಿಷ ಬೇಯಿಸಿ.
ಈಗ ಗೋಧಿಹಿಟ್ಟಿನ ಎಗ್ ಲೆಸ್ ಚಾಕೊಲೇಟ್ ಕೇಕ್ ರೆಡಿಯಾಗಿದೆ. ಇದು ತಣ್ಣಗಾದ ಬಳಿಕ ತುರಿದ ಚಾಕೊಲೇಟ್ ಪುಡಿಯಿಂದ ಅಲಂಕರಿಸಿ.

ಇನ್ನಷ್ಟು ಅಡುಗೆ ರೆಸಿಪಿಗಾಗಿ ಗೂಗಲ್ ನಲ್ಲಿ Saakshatv cooking ಎಂದು ಸರ್ಚ್ ಮಾಡಿ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd