ಅಮೃತಸರ್ : ಪಂಜಾಬ್ ನ ಗುರುದಾಸ್ ಪುರ ಜಿಲ್ಲೆಯಲ್ಲಿ ನಕಲಿ ಮದ್ಯ ಕುಡಿದು ಸಾವನ್ನಪ್ಪಿದವರ ಸಂಖ್ಯೆ 41ಕ್ಕೆ ಏರಿಕೆ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಸರ್ಕಾರ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿದೆ. ಜಲೈ 29ರ ರಾತ್ರಿ ಅಮೃತ್ ಸರ ಜಿಲ್ಲೆಯ ಮುಚ್ಚಾಲ್ ಹಾಗೂ ತಂಗ್ರಾ ಗ್ರಾಮಗಳಲ್ಲಿ ಮೊದಲ ಬಾರಿಗೆ ಸಾವಿನ ಪ್ರಕರಣ ಕಾಣಿಸಿ ಕೊಂಡಿತ್ತು. ನಂತರ ಸಾಲು ಸಾಲು ಜನರು ಮೃತಪಡುತ್ತಾ ಬಂದಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದಾಗ ನಕಲಿ ಮದ್ಯ ಸೇವನೆಯೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ. ಇದೀಗ ಸಾವಿನ ಸಂಖ್ಯೆ 41ಕ್ಕೆ ಏರಿಕೆ ಆಗಿದೆ.
ಘಟನೆ ಗಂಭೀತರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಸರ್ಕಾರ ತನಿಖೆಗೆ ಆದೇಶ ಹೊರಡಿಸಿದೆ. ಈ ಪ್ರಕರಣದಲ್ಲಿ ಶಾಮೀಲಾದ ಮೂವರನ್ನು ಈಗಾಗಲೇ ಬಂಧಿಸಲಾಗಿದ್ದು, ವಿಚಾರಣೆ ಆರಂಭವಾಗಿದೆ.