5 ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ..!
ಪೂರ್ಣ ಸುದ್ದಿಗಳನ್ನು ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ
iryani without meat or vegetables)
ಮಸಾಲಾ ಕುಷ್ಕಾ ರೈಸ್
ಅಕ್ಕಿಯನ್ನು ತೊಳೆದು ನೀರಿನಲ್ಲಿ 10ನಿಮಿಷ ನೆನೆಸಿಡಿ. ನಂತರ ಒಲೆಯ ಮೇಲೆ ಕುಕ್ಕರ್ ಇಟ್ಟು, ಅದಕ್ಕೆ 4 ಚಮಚ ಎಣ್ಣೆ ಮತ್ತು 2 ಚಮಚ ತುಪ್ಪ ಹಾಕಿ. ಕಾದ ಬಳಿಕ ಅದಕ್ಕೆ ಚಕ್ಕೆ ಲವಂಗ, ಎಲಕ್ಕಿ, ಮರಾಠಿ ಮೊಗ್ಗು, ಸೋಂಪು ಹಾಕಿ 30 ಸೆಕೆಂಡ್ ಕೆಂಪಗಾಗುವವರೆಗೆ ಹುರಿಯಿರಿ.
ಕತ್ತರಿಸಿದ ಹಸಿಮೆಣಸಿನ ಕಾಯಿ ಸೇರಿಸಿ 30 ಸೆಕೆಂಡ್ ಹುರಿಯಿರಿ. ಕತ್ತರಿಸಿ ಇಟ್ಟುಕೊಂಡ ಈರುಳ್ಳಿ ಪುದೀನ ಸೇರಿಸಿ ಮಧ್ಯಮ ಜ್ವಾಲೆಯಲ್ಲಿ 3 ನಿಮಿಷ ಹುರಿಯಿರಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ 30 ಸೆಕೆಂಡ್ ಹುರಿಯಿರಿ. ನಂತರ ಕತ್ತರಿಸಿದ ಟೊಮೆಟೊ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಟೊಮೆಟೊ ಮೃದುವಾಗುವವರೆಗೆ ಬೇಯಿಸಿ.
ನಂತರ ಅದಕ್ಕೆ ಅರಿಶಿನ ಪುಡಿ, ಖಾರದ ಪುಡಿ, ಗರಂ ಮಸಾಲೆ ಪುಡಿ, ಮೊಸರು ಹಾಕಿ 5 ನಿಮಿಷ ಬೆರೆಸಿ. ನೆನೆಸಿಟ್ಟುಕೊಂಡ ಅಕ್ಕಿಯನ್ನು ಹಾಕಿ 2 ನಿಮಿಷ ಚೆನ್ನಾಗಿ ಬೆರೆಸಿ.ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ.
ಈಗ 2 ಬಟ್ಟಲು ನೀರು ಹಾಕಿ ಕುಕ್ಕರ್ ಮುಚ್ಚಳವನ್ನು ಮುಚ್ಚಿ 1-2 ವಿಸಿಲ್ ಕೂಗಿಸಿದರೆ ರುಚಿಕರವಾದ ಕುಷ್ಕಾ ರೈಸ್ ಸವಿಯಲು ಸಿದ್ಧ.
ತರಕಾರಿಗಳಿಲ್ಲದ ಸರಳವಾದ ಸಾಂಬಾರ್
ತರಕಾರಿಗಳಿಲ್ಲದ ಸರಳವಾದ ಸಾಂಬಾರ್
1 ಟೀಸ್ಪೂನ್ ಹುಣಸೆಹಣ್ಣಿನ ಪೇಸ್ಟ್ ಅನ್ನು ನೀರಿನಲ್ಲಿ ಸುಮಾರು 5 ರಿಂದ 10 ನಿಮಿಷ ನೆನೆಸಿ ಫಿಲ್ಟರ್ ಮಾಡಿ ಇಡಿ.
ನಂತರ ತೊಗರಿಬೇಳೆಯನ್ನು ಚೆನ್ನಾಗಿ ತೊಳೆದು ಕುಕ್ಕರ್ ನಲ್ಲಿ ಹೋಳು ಮಾಡಿದ ಈರುಳ್ಳಿ ಜೊತೆಗೆ 2 ಕಪ್ ನೀರು ಸೇರಿಸಿ ಬೇಯಿಸಿ.
ಕುಕ್ಕರ್‌ನಲ್ಲಿ 3 ವಿಸಿಲ್ ಹಾಕಿಸಿ. ನಂತರ ಪಾತ್ರೆಗೆ ವರ್ಗಾಯಿಸಿ.
ಇದಕ್ಕೆ ಉಳಿದ 2 ಕಪ್ ನೀರು, ಹುಣಸೆಹಣ್ಣು, ಉಪ್ಪು ಮತ್ತು ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಹುಡಿ, ಮೆಂತ್ಯ ಹುಡಿ ಮತ್ತು ಸಾಂಬಾರ್ ಮಸಾಲೆ ಸೇರಿಸಿ, ಚೆನ್ನಾಗಿ ಬೆರೆಸಿ. ಒಂದೆರಡು ನಿಮಿಷಗಳ ಕಾಲ ಮಧ್ಯಮ ಜ್ವಾಲೆಯಲ್ಲಿ ಕುದಿಸಿ. ಈಗ ಬಿಸಿ ಬಿಸಿಯಾದ ಸಾಂಬಾರ್ ಸವಿಯಲು ಸಿದ್ಧವಾಗಿದೆ.
ಈ ಸರಳವಾದ ಸಾಂಬಾರ್ ಇಡ್ಲಿ ಅಥವಾ ದೋಸೆ ಅಥವಾ ಅನ್ನದೊಂದಿಗೆ ಸವಿಯಲು ರುಚಿಕರವಾಗಿರುತ್ತದೆ.
ಅನ್ನ ಮಿಕ್ಕಿದ್ದರೆ ತಯಾರಿಸಿ ಸಿಹಿಯಾದ ರಸಗುಲ್ಲಾ !
ಅನ್ನ ಮಿಕ್ಕಿದ್ದರೆ ತಯಾರಿಸಿ ಸಿಹಿಯಾದ ರಸಗುಲ್ಲಾ !
ಉಳಿದ ಅನ್ನವನ್ನು ಮಿಕ್ಸಿಯಲ್ಲಿ ನೀರು ಹಾಕದೆ ರುಬ್ಬಿಕೊಳ್ಳಿ. ನಂತರ ತುಪ್ಪದಿಂದ ಗ್ರೀಸ್ ಮಾಡಿದ ಪಾತ್ರೆಗೆ ಅದನ್ನು ಹಾಕಿ.
ಅದಕ್ಕೆ ಮೈದಾ ಹಿಟ್ಟು, ಹಾಲಿನ ಹುಡಿ ಮತ್ತು ಕಾರ್ನ್ ಪ್ಲೋರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಈ ಮಿಶ್ರಣವನ್ನು ಹಿಟ್ಟಿನಂತೆ ಚೆನ್ನಾಗಿ ಕಲೆಸಿಕೊಳ್ಳಿ. ಹೆಚ್ಚು ನಾದಿದಷ್ಷು ರಸಗುಲ್ಲಾ ಮೃದುವಾಗುತ್ತದೆ.
ಬಳಿಕ ಆ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ. ಅವುಗಳು ಒಡೆದಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.
ಬಳಿಕ ಒಂದು ಪಾತ್ರೆಯಲ್ಲಿ 1 ಕಪ್ ಸಕ್ಕರೆ ಮತ್ತು 1 ಕಪ್ ನೀರನ್ನು ತೆಗೆದುಕೊಂಡು ಚೆನ್ನಾಗಿ ಕುದಿಸಿ. ಅದಕ್ಕೆ ನಿಂಬೆ ರಸ ಮತ್ತು ಏಲಕ್ಕಿ ಪುಡಿ ಹಾಕಿ ಸಕ್ಕರೆ ಪಾಕ ತಯಾರಿಸಿ.
ಪಾಕ ಸಿದ್ಧವಾದ ನಂತರ ಸಕ್ಕರೆ ಪಾಕದಲ್ಲಿ, ರಸಗುಲ್ಲಾವನ್ನು ಚೆನ್ನಾಗಿ ಬೇಯಿಸಿ. ಸಕ್ಕರೆ ಪಾಕದ ಪಾತ್ರೆಯನ್ನು ಅರ್ಧ ಮುಚ್ಚಿ ಮಧ್ಯಮ ಉರಿಯಲ್ಲಿ 2 ರಿಂದ 3 ನಿಮಿಷ ಬೇಯಿಸಿ. 2 ನಿಮಿಷಗಳ ನಂತರ, ರಸಗುಲ್ಲಾಗಳ ಇನ್ನೊಂದು ಬದಿಯನ್ನು ಬೇಯಿಸಿ. ಇದರ ನಂತರ, ಕಡಿಮೆ ಉರಿಯಲ್ಲಿ 10 ರಿಂದ 15 ನಿಮಿಷಗಳ ಕಾಲ ಬೇಯಿಸಿ.
ಸ್ವಲ್ಪ ತಣ್ಣಗಾದ ಬಳಿಕ ಸರ್ವ್ ಮಾಡಿ. ಸಿಹಿಯಾದ ರಸಗುಲ್ಲಾವನ್ನು ಸವಿಯಿರಿ.
ಗರಿಗರಿಯಾದ ದಿಢೀರ್ (instant dosa) ದೋಸೆ
ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆಯಿರಿ. ಬಳಿಕ ಬಾಣಲೆ ಬಿಸಿ ಮಾಡಿ ಅದಕ್ಕೆ ಅಕ್ಕಿಯನ್ನು ಹಾಕಿ ನೀರಿನ ಅಂಶ ಹೋಗುವವರೆಗೆ ಸ್ವಲ್ಪ ಪ್ರಮಾಣದಲ್ಲಿ ಹುರಿಯಿರಿ. ನಂತರ ಅಕ್ಕಿ ಸಂಪೂರ್ಣವಾಗಿ ತಣ್ಣಗಾದ ಬಳಿಕ ಅದನ್ನು ಪುಡಿ ಮಾಡಿ.
ನಂತರ ಅದೇ ಬಾಣಲೆಯಲ್ಲಿ ಉದ್ದಿನ ಬೇಳೆ, ತೊಗರಿಬೇಳೆ, ಕಡಲೆಬೇಳೆ, ಮೆಂತ್ಯೆ, ಅವಲಕ್ಕಿ, ರವೆ ಎಲ್ಲವನ್ನೂ ಹುರಿದಿಟ್ಟುಕೊಳ್ಳಿ. ತಣ್ಣಗಾದ ಬಳಿಕ ಅವೆಲ್ಲವನ್ನೂ ಹುಡಿ ಮಾಡಿ.
ಬಳಿಕ ಈಗಾಗಲೇ ಪುಡಿ ಮಾಡಿಟ್ಟುಕೊಂಡ ಅಕ್ಕಿ ಹಿಟ್ಟಿಗೆ ಸೇರಿಸಿ ಚೆನ್ನಾಗಿ ಕಲಸಿ. ಈಗ 2 ಟೀಸ್ಪೂನ್ ಬಿಸಿ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಮೊಸರು, ಅಡಿಗೆ ಸೋಡಾ, ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಅಗತ್ಯವಿದ್ದಷ್ಟು ನೀರು ಸೇರಿಸಿ ಹಿಟ್ಟು ತಯಾರಿಸಿ.
ಈಗ ಒಲೆಯ ಮೇಲೆ ಕಾವಲಿ ಇಟ್ಟು ಬಿಸಿ ಮಾಡಿ. ದೋಸೆ ಹಿಟ್ಟನ್ನು ಕಾವಲಿಯ ಮೇಲೆ ಬಿಡಿ. ವೃತ್ತಾಕಾರದಲ್ಲಿ ಹರಡಿ.
ಎಣ್ಣೆಯನ್ನು ಚಿಮುಕಿಸಿ, ಎರಡು ಬದಿಗಳನ್ನು ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಿಸಿ.
ರುಚಿಕರವಾದ ಗರಿಗರಿ ದಿಢೀರ್ ದೋಸೆ ಸವಿಯಲು ಸಿದ್ಧವಾಗಿದೆ.
1 ನಿಮಿಷದಲ್ಲಿ ಅತಿ ಸುಲಭದಲ್ಲಿ ಮಾಡಿ ಕೊರಿಯಾದ ಫೇಮಸ್ ಶುಗರ್ ಕ್ಯಾಂಡಿ..!
1 ನಿಮಿಷದಲ್ಲಿ ಅತಿ ಸುಲಭದಲ್ಲಿ ಮಾಡಿ ಕೊರಿಯಾದ ಫೇಮಸ್ ಶುಗರ್ ಕ್ಯಾಂಡಿ..!ಮೊದಲಿಗೆ ಐಸ್ ಸ್ಟಿಕ್ಸ್ ನ ಬಿಡಿ ಬಿಡಿಯಾಗಿ ಒಂದಕ್ಕೊಂದು ತಾಗದಂತೆ ಜಾಗ ಬಿಟ್ಟು ಇಡಿ. ಒಂದು ಚಿಕ್ಕ ಪ್ಯಾನ್ ಅನ್ನ ಲೋ ಫ್ಲೇಮ್ ನಲ್ಲಿ ಸ್ಯಾಸ್ ಮೇಲೆ ಕಾಯಲಿಕ್ಕೆ ಇಡಿ ಅದಕ್ಕೆ 1 ಚಮಚ ಸಕ್ಕರೆ ಹಾಕಿ. ಸಕ್ಕರೆ ಇನ್ನೇನು ಒಂದು ಕುದಿ ಬರುತ್ತಿದ್ದಂತೆ ಒಂದು ಚಿಟಕಿಗಿಂತಲೂ ಕಡಿಮೆ ಬೇಕಿಂಗ್ ಸೋಡಾ ಹಾಗಿ ಚೆನ್ನಾಗಿ ಐಸ್ ಸ್ಟಿಕ್ ನಲ್ಲಿ ಕಲಸಿ ಪಟ್ ಅಂತ ಬದಿಗೆ ಇಟ್ಟಿರುವ ಒಂದು ಐಸ್ ಸ್ಟಿಕ್ ನ ಮೇಲ್ಭಾಕ್ಕೆ ವೃತ್ತಾಕಾರದಲ್ಲಿ ಹಾಕಿ. ನೆನಪಿರಲಿ ಐಸ್ ಸ್ಟಿಕ್ ನ ಕೆಳ ಭಾಗ ಕೈಯಲ್ಲಿ ಹಿಡಿಯುವಷ್ಟು ಜಾಗ ಬಿಟ್ಟಿರಬೇಕು. ಸಕ್ಕರೆ ಮಿಶ್ರಣ ಐಸ್ ಸ್ಟಿಕ್ ಮೇಲೆ ಸುರಿದ ಕೆಲವೇ ಸೆಂಕೆಂಡ್ ಗಳಲ್ಲಿ ಅದು ಗಟ್ಟಿಯಾಗುತ್ತೆ. ಆದ್ರೆ ಬಾಯಿಗೆ ಇಟ್ಟರೆ ಕಾಟನ್ ಕ್ಯಾಂಡಿಯಂತೆಯೇ ಕರಗಿಬಿಡುತ್ತೆ. ಈ ಕ್ಯಾಂಡಿ ಮಕ್ಕಳಿಗೆ ತುಂಬಾನೆ ಇಷ್ಟವೂ ಆಗುತ್ತೆ.