ಲಾಕ್ ಡೌನ್ ಅವಧಿಯಲ್ಲಿ ಈ 5 ರುಚಿಕರ ಹಾಗೂ ಆರೋಗ್ಯಕರ ಅಡುಗೆಗಳ ರೆಸಿಪಿ ಟ್ರೈ ಮಾಡಿ
- ಮಂಗಳೂರು ಪತ್ರೋಡೆ
ಮಾಡುವ ವಿಧಾನ:
3-4 ಗಂಟೆಗಳ ಕಾಲ ಅಕ್ಕಿ ಮತ್ತು ಬೇಳೆಗಳನ್ನು ನೀರಿನಲ್ಲಿ ತೊಳೆದು ನೆನೆಸಿಡಿ. ಕೆಸುವಿನ ಎಲೆಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಒರೆಸಿ. ಚಾಕುವಿನಿಂದ, ಕಾಂಡ ಮತ್ತು ಎಲೆಗಳ ಗೆರೆಗಳನ್ನು ತೆಗೆದುಹಾಕಿ. ಈಗ ತೆಂಗಿನಕಾಯಿ ತುರಿ, ಕೊತ್ತಂಬರಿ , ಮೆಂತೆ, ಜೀರಿಗೆ, ಅರಿಶಿನ ಪುಡಿ ಮತ್ತು ಬೆಲ್ಲ ಪುಡಿಯನ್ನು ರುಬ್ಬಿ. ನಂತರ ಒಣ ಕೆಂಪು ಮೆಣಸಿನಕಾಯಿ ಅಕ್ಕಿ, ಬೇಳೆ, ಹುಣಸೆ ರಸ ಮತ್ತು ಉಪ್ಪು ಸೇರಿಸಿ. ಅಗತ್ಯವಿರುವಷ್ಟು ನೀರು ಸೇರಿಸಿ ರುಬ್ಬಿಕೊಳ್ಳಿ. ಇದನ್ನು ದಪ್ಪ ಹಿಟ್ಟಿನ ಹದಕ್ಕೆ ರುಬ್ಬಿ. ರುಬ್ಬುವಾಗ ಹೆಚ್ಚು ನೀರು ಸೇರಿಸಬೇಡಿ.
ಈಗ ಅತಿದೊಡ್ಡ ಕೆಸು ಎಲೆಯನ್ನು ತಲೆಕೆಳಗಾಗಿ ಅಥವಾ ಉಲ್ಟಾ ಇರಿಸಿಕೊಳ್ಳಿ ಮತ್ತು ಎಲೆಯ ಮೇಲೆ ತೆಳುವಾಗಿ ರುಬ್ಬಿ ಇಟ್ಟುಕೊಂಡ ಮಸಾಲೆಯನ್ನು ಹಚ್ಚಿ. ಈಗ ಅದರ ಮೇಲೆ ಮತ್ತೊಂದು ಸ್ವಲ್ಪ ಸಣ್ಣ ಎಲೆಯನ್ನು ಉಲ್ಟಾ ಇರಿಸಿ. ಮತ್ತೆ ಅದರ ಮೇಲೆ ಮಸಾಲೆಯನ್ನು ಹಚ್ಚಿ. 3-4 ಎಲೆಗಳನ್ನು ಇದೇ ರೀತಿಯಲ್ಲಿ ಒಂದರ ಮೇಲೆ ಒಂದು ಇಟ್ಟು ಹಿಟ್ಟನ್ನು ಹಚ್ಚಿ . ಎಲೆಯ ಬದಿಗಳನ್ನು ಮಧ್ಯಕ್ಕೆ ಮಡಚಿ. ನಂತರ ಎಲೆಗಳನ್ನು ರೋಲ್ ಮಾಡಿ. ಇದನ್ನು ಹಬೆಯಲ್ಲಿ 20-30 ನಿಮಿಷ ಬೇಯಿಸಿ. ಬೆಂದ ಮೇಲೆ ತಣ್ಣಗಾದ ಬಳಿಕ ಪತ್ರೋಡೆ ಅನ್ನು ಸಮವಾಗಿ ತುಂಡು ಮಾಡಿ. ನಂತರ ಅವುಗಳನ್ನು ಎಣ್ಣೆ ಹಾಕಿ ತವಾದಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ. ಸಾಸಿವೆ, ಎಳ್ಳು ಮತ್ತು ಕರಿಬೇವಿನ ಸೊಪ್ಪು ಸೇರಿಸಿ ಒಗ್ಗರಣೆ ಕೊಡಿ. ಒಗ್ಗರಣೆ ಕೊಡುವ ಮೊದಲು ಸ್ವಲ್ಪ ತುರಿದ ತೆಂಗಿನಕಾಯಿ ಸೇರಿಸಿ.
ಮಂಗಳೂರು ಪತ್ರೋಡೆ
2. ಹಲಸಿನ ಹಣ್ಣಿನ ಪೂರಿ
ಮಾಡುವ ವಿಧಾನ
ಮೊದಲಿಗೆ ಹಲಸಿನ ತೊಳೆಗಳನ್ನು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ನುಣ್ಣಗೆ ರುಬ್ಬಿದ ಹಲಸಿನ ತೊಳೆ, ಓಮ, ಗೋಧಿ ಹುಡಿ, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ಪೂರಿ ಹಿಟ್ಟಿನ ಹದಕ್ಕೆ ಮಿಶ್ರಣವನ್ನು ಕಲಸಿಕೊಳ್ಳಿ. ನಂತರ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿ.
ಬಳಿಕ ಪ್ಲಾಸ್ಟಿಕ್ ಗೆ ಸ್ವಲ್ಪ ಎಣ್ಣೆ ಸವರಿ ಅದರ ಮೇಲೆ ಉಂಡೆಗಳನ್ನು ಇಟ್ಟು ಪೂರಿಗಳನ್ನು ಲಟ್ಟಿಸಿಕೊಳ್ಳಿ.
ಈಗ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಪೂರಿಗಳನ್ನು ಕಾಯಿಸಿ. ಎರಡೂ ಬದಿಯೂ ಕೆಂಪಗಾಗುವವರೆಗೆ ಹುರಿದು ತೆಗೆಯಿರಿ. ಬಿಸಿ ಬಿಸಿಯಾದ ಹಲಸಿನ ಹಣ್ಣಿನ ಪೂರಿಯನ್ನು ಚಟ್ನಿಯೊಂದಿಗೆ ಸವಿಯಿರಿ.
ಹಲಸಿನ ಹಣ್ಣಿನ ಪೂರಿ
3. ಆರೋಗ್ಯಕರ ಕಾರ್ನ್ ಸೂಪ್
ಮಾಡುವ ವಿಧಾನ
ಜೋಳವನ್ನು ಬೇಯಿಸಿ. ನಂತರ ಅರ್ಧದಷ್ಟು ಜೋಳವನ್ನು ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ಬಳಿಕ ತರಕಾರಿಗಳನ್ನು ಬೇಯಿಸಿ. ನಂತರ ಒಂದು ಕಡಾಯಿಯನ್ನು ಬಿಸಿ ಮಾಡಿ. ಅದಕ್ಕೆ ಬೆಣ್ಣೆಯನ್ನು ಸೇರಿಸಿ. ಬಳಿಕ ಶುಂಠಿ ಬೆಳ್ಳುಳ್ಳಿ ಹಸಿಮೆಣಸಿನಕಾಯಿ ಪೇಸ್ಟ್ ಸೇರಿಸಿ ಫ್ರೈ ಮಾಡಿ. ಅದಕ್ಕೆ ಬೇಯಿಸಿದ ತರಕಾರಿಗಳನ್ನು ಸೇರಿಸಿ. ಆ ಬಳಿಕ ಬೇಯಿಸಿದ ಜೋಳ ಮತ್ತು ರುಬ್ಬಿದ ಜೋಳವನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಸಕ್ಕರೆ ಮೆಣಸು ಸೇರಿಸಿ ಕುದಿಸಿ. ಕೊನೆಗೆ ನಿಂಬೆರಸವನ್ನು ಹಿಂಡಿ.
ಆರೋಗ್ಯಕರವಾದ ಕಾರ್ನ್ ಸೂಪ್ ಸವಿಯಲು ಸಿದ್ಧ.
ಆರೋಗ್ಯಕರ ಕಾರ್ನ್ ಸೂಪ್
4. ಆರೋಗ್ಯಕರ ದೊಡ್ಡಪತ್ರೆ ಬಜ್ಜಿ
ಮಾಡುವ ವಿಧಾನ
ದೊಡ್ಡಪತ್ರೆ ಎಲೆಗಳನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಬಳಿಕ ಎಲೆಗಳಲ್ಲಿನ ನೀರನ್ನು ಒರೆಸಿ.
ನಂತರ ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಹುಡಿ, ಓಮ, ಇಂಗು, ಜೀರಿಗೆ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ಇದಕ್ಕೆ ಅಗತ್ಯವಿರುವಷ್ಟು ನೀರು ಸೇರಿಸಿ ಕಲಸಿ.
ಆರೋಗ್ಯಕರ ದೊಡ್ಡಪತ್ರೆ ಬಜ್ಜಿ
4. ಕ್ಯಾಬೇಜ್ ರೈಸ್
ಮಾಡುವ ವಿಧಾನ
ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ಆಲೂಗೆಡ್ಡೆಯ ಸಿಪ್ಪೆ ತೆಗೆದು ಅದನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ.
ನಂತರ ಕುಕ್ಕರ್ ನಲ್ಲಿ ತುಪ್ಪ ಬಿಸಿ ಮಾಡಿ. ತುಪ್ಪ ಬಿಸಿಯಾದ ಬಳಿಕ ಅದಕ್ಕೆ ಕತ್ತರಿಸಿದ ಕ್ಯಾಬೇಜ್, ಆಲೂಗಡ್ಡೆ, ಶುಂಠಿ ತುರಿ ಸೇರಿಸಿ ಹುರಿಯಿರಿ. ನಂತರ ಅದಕ್ಕೆ ಅರಿಶಿನ ಪುಡಿ, ಗರಂ ಮಸಾಲ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಆಲ್ ಸ್ಪೈಸ್ ಎಲೆ ಹಾಕಿ ಚೆನ್ನಾಗಿ ಬೆರೆಸಿ. ನಂತರ ಅದಕ್ಕೆ ಅಕ್ಕಿ, ರುಚಿಗೆ ತಕ್ಕಷ್ಟು ಉಪ್ಪು, ಅಗತ್ಯವಿರುವಷ್ಟು ನೀರು ಸೇರಿಸಿ. ನಂತರ ಕುಕ್ಕರ್ ಗೆ ಮುಚ್ಚಳವನ್ನು ಮುಚ್ಚಿ 3 ವಿಸಲ್ ಕೂಗಿಸಿ. ನಂತರ ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಬೆರೆಸಿ. ಈಗ ರುಚಿಯಾದ ಕ್ಯಾಬೇಜ್ ರೈಸ್ ರಾಯತದ ಜೊತೆ ಸವಿಯಲು ಸಿದ್ಧವಾಗಿದೆ.