ಸಿನಿ ರಂಗದಲ್ಲಿ ಶೈತಾನ್ ಸಿನಿಮಾ ಭಾರೀ ಸದ್ದು ಮಾಡುತ್ತಿದೆ. ವಶೀಕರಣದ ಕಥೆ ಈ ಸಿನಿಮಾದಲ್ಲಿದೆ. ಮಾರ್ಚ್ 8ರಂದು ಬಿಡುಗಡೆಯಾದ ಈ ಸಿನಿಮಾ ಮೊದಲ ಮೂರು ದಿನಕ್ಕೆ ಉತ್ತಮವಾಗಿ ಕಲೆಕ್ಷನ್ ಮಾಡಿದೆ. ಅಲ್ಲದೇ, ಕಲೆಕ್ಷನ್ ಹೆಚ್ಚಾಗುತ್ತ ಸಾಗುತ್ತಿದೆ.
ಅಜಯ್ ದೇವಗನ್, ಜ್ಯೋತಿಕಾ, ಜಾನಕಿ ಬೋಡಿವಾಲಾ, ಆರ್. ಮಾಧವನ್ ಸೇರಿದಂತೆ ಹಲವಾರು ನಟರು ಈ ಚಿತ್ರದಲ್ಲಿ ನಟಿಸಿದ್ದಾರೆ. ವಶೀಕರಣಕ್ಕೆ ಒಳಗಾದ ಮಗಳನ್ನು ಕಾಪಾಡಿಕೊಳ್ಳಲು ಕಷ್ಟಪಡುವ ತಂದೆ-ತಾಯಿಯ ಕಥೆ ಈ ಚಿತ್ರದಲ್ಲಿದೆ. ಆರ್. ಮಾಧವನ್ ಇಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪುತ್ರಿಯ ಪಾತ್ರದಲ್ಲಿ ಜಾನಕಿ ಬೋಡಿವಾಲಾ ನಟಿಸಿದ್ದು, ಈ ಸಿನಿಮಾ ಭರ್ಜರಿ ಜಯ ತಂದುಕೊಟ್ಟಿದೆ.
ಮೊದಲ ಸಿನಿಮಾ ‘ಶೈತಾನ್’ 15.21 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಎರಡನೇ ದಿನ 19.18 ಕೋಟಿ ರೂಪಾಯಿ ಗಳಿಸಿತು. ಮೂರನೇ ದಿನ 20.74 ಕೋಟಿ ರೂಪಾಯಿ ಬಾಚಿಕೊಂಡಿದೆ. ಈಗ ಸದ್ಯ ಈ ಚಿತ್ರ 55.13 ಕೋಟಿ ರೂಪಾಯಿ ಮಾಡಿಕೊಂಡು ಮುನ್ನುಗ್ಗುತ್ತಿದೆ.